ಆಫ್ತಾಬ್ ಪ್ರಕರಣ ಲವ್ ಜಿಹಾದ್ ಅಲ್ಲ: ಓವೈಸಿ

Social Share

ಅಹಮದಾಬಾದ್,ನ.29- ಶ್ರದ್ದಾ ಅವರನ್ನು ಹತ್ಯೆ ಮಾಡಿರುವ ಆಫ್ತಾಬ್ ಪೂನಾವಾಲಾ ಪ್ರಕರಣ ಲವ್ ಜಿಹಾದ್ ಅಲ್ಲ. ಈ ಪ್ರಕರಣಕ್ಕೆ ಧಾರ್ಮಿಕ ಕೋನ ನೀಡಬಾರದು ಎಂದು ಅಸಾದುದ್ದೀನ್ ಓವೈಸಿ ಆಗ್ರಹಿಸಿದ್ದಾರೆ.

ಭಾರತಕ್ಕೆ ಆಫ್ತಾಬ್ ಅಂತಹ ವ್ಯಕ್ತಿಗಳು ಬೇಕಾಗಿಲ್ಲ. ಏಕರೂಪ ನಾಗರಿಕ ಸಂಹಿತೆ ಹಾಗೂ ಲವ್ ಜಿಹಾದ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವ ಅವಶ್ಯಕತೆ ಇದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿರುವ ಅವರು, ಆಫ್ತಾಬ್ ಪ್ರಕರಣವನ್ನು ಮಹಿಳೆಯರ ಮೇಲಿನ ಶೋಷಣೆ ಮತ್ತು ದೌರ್ಜನ್ಯದ ಪ್ರಕರಣವೆಂದು ಪರಿಗಣಿಸಬೇಕು ಹಾಗೂ ಘಟನೆಯನ್ನು ಎಲ್ಲರೂ ಖಂಡಿಸಬೇಕು ಎಂದಿದ್ದಾರೆ.

ಆಫ್ತಾಬ್ ಪ್ರಕರಣವನ್ನು ಬಿಜೆಪಿಯವರು ರಾಜಕೀಯಕ್ಕೆ ಬಳಸಿಕೊಳ್ಳಬಾರದು ಹಾಗೂ ಮತ ಬ್ಯಾಂಕ್‍ಗಾಗಿ ಹಿಂದೂ ಮತ್ತು ಮುಸ್ಲಿಂರ ನಡುವೆ ಕಂದಕ ಸೃಷ್ಟಿಸಬಾರದು ಎಂದು ಅವರು ಸಲಹೆ ನೀಡಿದ್ದಾರೆ.

ಮಲ್ಲಿಕ್ ನನ್ನನ್ನು ಗುಲಾಮನಂತೆ ನಡೆಸಿಕೊಂಡಿದ್ದ: ಅಕ್ರಂ

ನೀವು ಆಫ್ತಾಬ್ ವಿಚಾರ ಪ್ರಸ್ತಾಪಿಸುವುದಾದರೆ ಇಂದು ಗುಜರಾತ್‍ನ ಮುಸ್ಲಿಮರು ಬಿಲ್ಕಿಸ್ ಬಾನೋ ಪ್ರಕರಣದಲ್ಲಿ ಅತ್ಯಾಚಾರ ಮತ್ತು ಕೊಲೆ ಅಪರಾಗಳನ್ನು ಜೈಲಿನಿಂದ ಏಕೆ ಬಿಡುಗಡೆ ಮಾಡಿದರು ಎಂದು ಕೇಳುತ್ತಿದ್ದಾರೆ ಎಂದು ಪ್ರಶ್ನಿಸಿದರು.

ಕಾಂಗ್ರೆಸ್‍ನಲ್ಲಿ ಎಷ್ಟು ರೌಡಿಶೀಟರ್ ಇದ್ದಾರೆ ಲೆಕ್ಕ ಹಾಕಿಕೊಳ್ಳಿ : ಸಿಎಂ ಬೊಮ್ಮಾಯಿ

ಶ್ರದ್ಧಾಳ ಕೊಲೆಗಾರ ಹಿಂದೂ ಆಗಿದ್ದರೆ ಬಿಜೆಪಿ ಈ ಪ್ರಕರಣವನ್ನು ಹೈಲೈಟ್ ಮಾಡುತ್ತಿರಲಿಲ್ಲ ಹಾಗಾದರೆ ಮಹಿಳೆಯರನ್ನು ಯಾವ ಹಿಂದೂಗಳು ಹತ್ಯೆ ಮಾಡಿಲ್ಲವೆ ಎಂದು ಪ್ರಶ್ನಿಸಿದ ಅವರು, ಇತ್ತೀಚಿನ ದಿನಗಳಲ್ಲಿ ಮಹಿಳೆಯರನ್ನು ಕೊಂದ ಹಿಂದೂಗಳ ಪಟ್ಟಿಯನ್ನು ಓವೈಸಿ ಓದಿದರು.

ಗಡಿಯಲ್ಲಿ ಡ್ರೋನ್ ಹೊಡೆದುರುಳಿಸಿದ ಬಿಎಸ್‍ಎಫ್ ಪಡೆ

ಈ ರೀತಿಯ ಅಪರಾಧವು ಹೊಸದಲ್ಲ, ಆದರೆ ಅಫ್ತಾಬ್ ಮುಸ್ಲಿಂ ಎಂಬ ಕಾರಣಕ್ಕಾಗಿ, ಪ್ರಕರಣವನ್ನು ಹೈಲೈಟ್ ಮಾಡಲಾಗುತ್ತಿದೆ. ಕೊಲೆಗಾರ ಹಿಂದೂ ಆಗಿದ್ದರೆ, ಯಾವುದೇ ಪ್ರಶ್ನೆ ಉದ್ಭವಿಸುತ್ತಿರಲಿಲ್ಲ ಎಂದು ಅವರು ತಿಳಿಸಿದ್ದಾರೆ.

Articles You Might Like

Share This Article