ಅಹಮದಾಬಾದ್, ಮಾ.12- ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಆರಂಭಿಕ 2 ಪಂದ್ಯಗಳಿಂದ ಬೆನ್ನು ನೋವಿನ ಸಮಸ್ಯೆಯಿಂದಾಗಿ ಹೊರಗುಳಿದಿದ್ದ ತಂಡದಿಂದ ಹೊರಗುಳಿದಿದ್ದ ಟೀಮ್ ಇಂಡಿಯಾದ ಭರವಸೆಯ ಆಟಗಾರ ಶ್ರೇಯಾಸ್ ಅಯ್ಯರ್ 4ನೇ ಟೆಸ್ಟ್ ಪಂದ್ಯದಲ್ಲಿ ಬ್ಯಾಟಿಂಗ್‍ಗೆ ಇಳಿಯದಿರುವುದಕ್ಕೆ ನಿಜವಾದ ಕಾರಣವನ್ನು ಬಿಸಿಸಿಐ ಹೊರಹಾಕಿದೆ.
ಶ್ರೇಯಾಸ್ ಅಯ್ಯರ್ ಅವರು ಎನ್‍ಸಿಎಯಲ್ಲಿ ತರಬೇತಿ ಪಡೆದು 3ನೇ ಟೆಸ್ಟ್ ಪಂದ್ಯಕ್ಕೆ ಲಭ್ಯರಾದರಾದರೂ ದೊಡ್ಡ ಮೊತ್ತ ದಾಖಲಿಸುವಲ್ಲಿ ಎಡವಿದ್ದರು. 4ನೇ ಟೆಸ್ಟ್‍ನಲ್ಲಿ ದೊಡ್ಡ ಇನಿಂಗ್ಸ್ ಕಟ್ಟುವ ಭರವಸೆ ಹೊತ್ತಿದ್ದ ಅಯ್ಯರ್‍ಗೆ ಮತ್ತೆ ಬೆನ್ನಿನ ಸಮಸ್ಯೆ ಎದುರಾಗಿದೆ.
ಸಿರಿಯಾ ಮೇಲೆ ಇಸ್ರೇಲ್ ಕ್ಷಿಪಣಿ ದಾಳಿ, ಮೂವರಿಗೆ ಗಾಯ
ಅಂತಿಮ ಟೆಸ್ಟ್‍ನ 3ನೇ ದಿನದಾಟದ ವೇಳೆ ಶ್ರೇಯಾಸ್ ಅಯ್ಯರ್‍ಗೆ ಬೆನ್ನು ನೋವು ಕಾಣಿಸಿಕೊಂಡಿದೆ. ತಕ್ಷಣ ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದ್ದು ಸ್ಕ್ಯಾನ್ ಕೂಡ ಮಾಡಲಾಗಿದ್ದು, ಅವರನ್ನು ವೈದ್ಯಕೀಯ ನಿಗಾದಲ್ಲಿ ಇಡಲಾಗಿದೆ ಎಂದು ಬಿಸಿಸಿಐ ತಿಳಿಸಿದೆ.
ಟೀಮ್ ಇಂಡಿಯಾದ ಭರವಸೆಯ ಆಟಗಾರ ಅಯ್ಯರ್‍ಗೆ ಬೆನ್ನು ನೋವು ಕಾಣಿಸಿಕೊಂಡಿದ್ದರಿಂದ ಶತಕ ವೀರ ಶುಭಮನ್ ಗಿಲ್ ಔಟಾಗುತ್ತಿದ್ದಂತೆ ರವೀಂದ್ರಾ ಜಡೇಜಾ ಅವರಿಗೆ ಮೇಲ್ಪಂಕ್ತಿಯಲ್ಲಿ ಬ್ಯಾಟಿಂಗ್ ನಡೆಸಲು ಅವಕಾಶ ಕಲ್ಪಿಸಲಾಗಿತ್ತು.
4ನೇ ದಿನದಾಟದ ಆರಂಭದ ಸೆಷನ್‍ನಲ್ಲೇ ಜಡೇಜಾ ಔಟಾಗು ತ್ತಿದ್ದಂತೆ, ಶ್ರೇಯಾಸ್ ಅಯ್ಯರ್ ಕ್ರೀಸ್‍ಗಿಳಿಯುತ್ತಾರೆ ಎಂದು ಅಂದಾಜಿಸಲಾಗಿತ್ತಾದರೂ ಬೆನ್ನು ನೋವಿನ ಸಮಸ್ಯೆ ಹೆಚ್ಚಾಗಿದ್ದರಿಂದ ವಿಕೆಟ್ ಕೀಪರ್ ಶ್ರೀಕರ್ ಭರತ್ ಮೈದಾನಕ್ಕಿಳಿದರು.
ಅರ್ಚಕರ ಮೇಲಿನ ದೌರ್ಜನ್ಯವನ್ನು ದಲಿತ ದೌರ್ಜನ್ಯ ಕಾಯ್ದೆ ವ್ಯಾಪ್ತಿಗೊಳಪಡಿಸಲು ಆಗ್ರಹ
ಶ್ರೇಯಸ್ ಅಯ್ಯರ್ ಅವರ ಬೆನ್ನು ನೋವು ಹೆಚ್ಚಾಗಿದ್ದರಿಂದ ವಿಕೆಟ್ ಕೀಪರ್ ಶ್ರೀಕರ್ ಭರತ್ ಔಟಾದ ನಂತರವೂ ಕ್ರೀಸ್‍ಗೆ ಇಳಿಯಲಿಲ್ಲ. ಅಲ್‍ರೌಂಡರ್ ಅಕ್ಷರ್‍ಪಟೇಲ್ ಅವರು ಕ್ರೀಸ್‍ಗೆ ಇಳಿದಿದ್ದು ದೊಡ್ಡ ಇನ್ನಿಂಗ್ ಕಟ್ಟುವ ಭರವಸೆ ಮೂಡಿಸಿದ್ದಾರೆ.
Shreyas Iyer, complains, lower, back pain, sent, scans,