ಅಹಮದಾಬಾದ್, ಫೆ. 2- ನ್ಯೂಜಿಲೆಂಡ್ ವಿರುದ್ಧ ರಾಂಚಿಯಲ್ಲಿ ನಡೆದ ಮೊದಲ ಟಿ 20 ಐ ಪಂದ್ಯದಲ್ಲಿ 21 ರನ್ ಗಳಿಂದ ಟೀಮ್ ಇಂಡಿಯ ಸೋಲು ಕಂಡಿತ್ತು. ಆದರೆ ಲಖನೌ ಹಾಗೂ ಅಹಮದಾಬಾದ್ ಪಂದ್ಯಗಳಲ್ಲಿ ಗೆದ್ದು ತಿರುಗೇಟು ನೀಡಿತು. ಅದರಲ್ಲೂ ಅಂತಿಮ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ ಸಾರಥ್ಯದ ಪಡೆ 168 ರನ್ ಗಳ ವಿಶ್ವ ದಾಖಲೆ ಗೆಲುವು ಸಾಸಿ, 2-1 ರಿಂದ ಸರಣಿ ವಶಪಡಿಸಿಕೊಂಡು ಸಂಭ್ರಮಿಸಿದೆ.
ಅಹಮದಾಬಾದ್ನ ನರೇಂದ್ರ ಮೋದಿ ಅಂಗಳದಲ್ಲಿ ಕಿವೀಸ್ ಬೌಲರ್ಗಳ ಮೇಲೆ ಭಾರತ ತಂಡದ ಯುವ ಬ್ಯಾಟರ್ ಶುಭಮನ್ ಗಿಲ್ ಸವಾರಿ ಮಾಡಿದರು. ಟಿ 20 ಸ್ವರೂಪದಲ್ಲಿ ಚೊಚ್ಚಲ ಶತಕ ಗಳಿಸಿದ ಗಿಲ್ (126*, 12 ಬೌಂಡರಿ, 7 ಸಿಕ್ಸರ್) ರ ಆಕ್ರಮಣಕಾರಿ ಆಟದಿಂದಾಗಿ ಮೊದಲು ಬ್ಯಾಟಿಂಗ್ ಮಾಡಿದ ಭಾರತ ತಂಡ ನಿಗತ 20 ಓವರ್ ಗಳಲ್ಲಿ 234/4 ರನ್ ಗಳ ಶಿಖರ ನಿರ್ಮಿಸಿತು.
ಟೀಮ್ ಇಂಡಿಯಾ ನೀಡಿದ ಬೃಹತ್ ಸವಾಲನ್ನು ಬೆನ್ನಟ್ಟಿದ ನ್ಯೂಜಿ ಲೆಂಡ್ ತಂಡದ ಆಟ ಗಾರರು ಹಾರ್ದಿಕ್ ಪಾಂಡ್ಯ (16ಕ್ಕೆ 4) ಹಾಗೂ ಇತರ ಬೌಲರ್ಗಳ ಸಂಘಟಿತ ಬೌಲಿಂಗ್ ಎದುರು ನಲುಗಿ 66 ರನ್ ಗಳಿಗೆ ಆಲೌಟ್ ಆದರು. ಆ ಮೂಲಕ 168 ರನ್ ಗಳ ವಿಶ್ವ ದಾಖಲೆ ಸೋಲು ಕಂಡಿತು. ಚೊಚ್ಚಲ ಟಿ 20 ಶತಕ ಸಿಡಿಸಿದ ಶುಭಮನ್ ಗಿಲ್ ಹಲವು ದಾಖಲೆ ನಿರ್ಮಿಸಿದರು.
ತ್ಯಾಗ ಅನಿವಾರ್ಯ, ಟಿಕೆಟ್ ಆಕಾಂಕ್ಷಿಗಳಿಗೆ ಡಿಕೆಶಿ ಶಾಕ್
ವಿರಾಟ್ ಕೊಹ್ಲಿ ದಾಖಲೆ ಮುರಿದ ಗಿಲ್ :
ಭಾರತ ತಂಡದ ರನ್ ಮೆಶಿನ್ ವಿರಾಟ್ ಕೊಹ್ಲಿ, 2022 ನೇ ಸಾಲಿನ ಏಷ್ಯಾ ಕಪ್ ಟೂರ್ನಿಯಲ್ಲಿ ಆಫ್ಘಾನಿಸ್ತಾನ ವಿರುದ್ಧ ಚೊಚ್ಚಲ ಟಿ 20 ಐ ಶತಕ (122) ಸಿಡಿಸಿದ್ದು, ಇದು ಭಾರತ ತಂಡದ ಆಟಗಾರ ಈ ಸ್ವರೂಪದಲ್ಲಿ ಗಳಿಸಿದ್ದ ಗರಿಷ್ಠ ಮೊತ್ತವಾಗಿತ್ತು. ನ್ಯೂಜಿಲೆಂಡ್ ವಿರುದ್ಧ ನಡೆದ ಅಂತಿಮ ಪಂದ್ಯದಲ್ಲಿ ಶುಭಮನ್ ಗಿಲ್(126) ರನ್ ಸಿಡಿಸಿ ಆ ದಾಖಲೆ ಮುರಿದಿದ್ದಾರೆ.
ರೈನಾ ದಾಖಲೆ ಧೂಳೀಪಟ:
ಟೀಮ್ ಇಂಡಿಯದ ಮಾಜಿ ಸ್ಟಾರ್ ಆಲ್ ರೌಂಡರ್ ಸುರೇಶ್ ರೈನಾ, 2010 ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದಲ್ಲಿ ತಮ್ಮ 23 ವರ್ಷದ 156 ದಿನಗಳಲ್ಲಿ ಟಿ 20 ಶತಕ ಸಿಡಿಸಿದ ಕಿರಿಯ ಟೀಮ್ ಇಂಡಿಯ ಬ್ಯಾಟರ್ ಎಂಬ ದಾಖಲೆ ಬರೆದಿದ್ದರು. ಶುಭಮನ್ ಗಿಲ್ 23 ವರ್ಷದ 156 ದಿನಗಳಲ್ಲೇ ಚೊಚ್ಚಲ ಶತಕ ಸಿಡಿಸಿ ಆ ದಾಖಲೆಯನ್ನು ಧೂಳೀಪಟ ಮಾಡಿದ್ದಾರೆ.
ಕನ್ನಡಿಗ ಕೆ.ಎಲ್.ರಾಹುಲ್, 2016 ರಲ್ಲಿ ತಮ್ಮ 24 ವರ್ಷ 131 ನೇ ದಿನದಲ್ಲಿ ವೆ¸್ಟïಇಂಡೀಸ್ ವಿರುದ್ಧ ಚೊಚ್ಚಲ ಟಿ 20 ಐ ಶತಕ ಗಳಿಸಿದ್ದರೆ, ಪಾಕಿಸ್ತಾನದ ಅಹ್ಮದ್ ಶೆಹಜಾದ್ 22 ವರ್ಷ 127 ದಿನಗಳಲ್ಲಿ ಶತಕ ಗಳಿಸಿದ್ದು, ಎಲ್ಲ ಸ್ವರೂಪದಲ್ಲೂ ಶತಕ ಗಳಿಸಿದ ಕಿರಿಯ ಆಟಗಾರ ಎಂಬ ವಿಶ್ವದಾಖಲೆ ನಿರ್ಮಿಸಿದ್ದಾರೆ.
ಎಲ್ಲ ಸ್ವರೂಪದಲ್ಲಿ ಶತಕ ಗಳಿಸಿದ ಗಿಲ್ :
ಶ್ರೀಲಂಕಾ ವಿರುದ್ಧ ದ್ವಿಶತಕ (208) ಸಿಡಿಸಿ, ಈ ದಾಖಲೆ ಬರೆದ 5 ನೇ ಭಾರತೀಯ ಬ್ಯಾರ್ಟ ಆಗಿ ಗುರುತಿಸಿಕೊಂಡ ಶುಭಮನ್ ಗಿಲï, ಕ್ರಿಕೆಟ್ ನ ಎಲ್ಲ ಸ್ವರೂಪದಲ್ಲೂ ಸೆಂಚುರಿ ಸಿಡಿಸಿದ 5 ನೇ ಆಟಗಾರರಾಗಿಯೂ ದಾಖಲೆ ನಿರ್ಮಿಸಿದ್ದಾರೆ.
ಟೀಮ್ ಇಂಡಿಯಾದ ಶುಭಮನ್ ಗಿಲ್ ಗೂ ಮುನ್ನ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಕೆ.ಎಲï.ರಾಹುಲ್ ಹಾಗೂ ಸುರೇಶ್ ರೈನಾ ಎಲ್ಲಾ ಮಾದರಿಯಲ್ಲೂ ಶತಕ ಗಳಿಸಿದ ಟೀಮ್ ಇಂಡಿಯ ಬ್ಯಾರ್ಟ ಗಳಾಗಿದ್ದರು. ನ್ಯೂಜಿಲೆಂಡ್ ವಿರುದ್ಧ ನಡೆದ ಟಿ 20 ಐ ಪಂದ್ಯದಲ್ಲಿ 126* ರನ್ ಸಿಡಿಸಿ ಗಿಲ್ ಈ ಸಾಲಿನಲ್ಲಿ ಗುರುತಿಸಿಕೊಂಡಿದ್ದಾರೆ.
#ShubmanGill, #smashes #records, #India, #biggestwin,