ಕನ್ನಡದ ಖ್ಯಾತ ಹಿರಿಯ ನಟ ಸಿದ್ದರಾಜ್ ಕಲ್ಯಾಣಕರ್ ಹೃದಯಾಘಾತದಿಂದ ನಿಧನ..!

ಬೆಂಗಳೂರು,ಸೆ.8- ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಖ್ಯಾತ ಹಿರಿಯ ನಟ ಸಿದ್ದರಾಜ್ ಕಲ್ಯಾಣಕರ್(60) ಹೃದಯಾಘಾತದಿಂದ ನಿಧನರಾಗಿದ್ದಾರೆ.

60ನೇ ವರ್ಷದ ಹುಬ್ಬಹಬ್ಬವನ್ನು ಪ್ರೇಮಲೋಕ ಸೀರಿಯಲ್ ಸೆಟ್‍ನಲ್ಲಿ ನಿನ್ನೆ ಆಚರಿಸಿಕೊಂಡು ಸಂಭ್ರಮಿಸಿದ್ದ ಅವರಿಗೆ ರಾತ್ರಿ ಹೃದಯಾಘಾತವದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದಾರೆ.

ಮೃತರು ಪತ್ನಿ ಮತ್ತು ಪುತ್ರರನ್ನು ಅಗಲಿದ್ದಾರೆ. ಹುಬ್ಬಳ್ಳಿ ಮೂಲದ ಈ ನಟ 70ಕ್ಕೂ ಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದರು. ನಾಟಕಗಳಿಂದ ಅಭಿನಯ ಕಲೆಯಲ್ಲಿ ಮಿಂಚುತ್ತಿದ್ದ ಅವರು ಬಳಿಕ ಕಿರುತೆರೆ ಮತ್ತು ಬೆಳ್ಳಿ ತೆರೆಯಲ್ಲೂ ಪೋಷಕ ಪಾತ್ರಗಳಲ್ಲಿ ಮಿಂಚಿದ್ದರು.

ಯಾರೇ ನೀ ಅಭಿಮಾನಿ, ಭೂಮಿ ಗೀತಾ, ಹೃದಯಾ ಹೃದಯಾ, ಬುದ್ದಿವಂತ ಸೂಪರ್ ಸಿನಿಮಾ ಸೇರಿದಂತೆ 70ಕ್ಕೂ ಹೆಚ್ಚು ಸಿನಿಮಾ 50ಕ್ಕೂ ಹೆಚ್ಚು ಧಾರಾವಾಹಿಗಳಲ್ಲಿ ಅಭಿನಯಿಸಿದ್ದರು. ನಿನ್ನೆಯಷ್ಟೇ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ಅವರ ನಿಧನದ ಸುದ್ದಿ ಕೇಳಿ ಅಘಾತವಾಗಿದೆ ಎಂದು ನಿರ್ದೇಶಕ ಬಿ.ಸುರೇಶ್ ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ.

ಅಥೆನ್ಸಿನ ಅರ್ಥವಂತ ನಾಟಕದಲ್ಲಿನ ಅವರ ಅಭಿನಯ ಕಂಡು ನನ್ನ ನಿರ್ದೇಶನದ ಮೊದಲ ಧಾರವಾಹಿ ಹೊಸ ಹೆಜ್ಜೆ(1993)ಗೆ ಅವರನ್ನು ಆಹ್ವಾನಿಸಿದ್ದೆ. ನನ್ನ ಅವರ ಮೂರು ದಶಕಗಳ ಗೆಳತನ ಮುಗಿಯಿತು ಎಂದು ಸಂಕಟವಾಗುತ್ತಿದೆ ಎಂದು ಕಂಬಿನಿ ಮಿಡಿದಿದ್ದಾರೆ.