ಸಿಎಂ ಕುಟುಂಬದ ಭ್ರಷ್ಟಾಚಾರದ ವಿರುದ್ಧ ಸಿದ್ದರಾಮಯ್ಯ ಕಿಡಿ

Spread the love

ಬೆಂಗಳೂರು, ಸೆ.23- ಮುಖ್ಯಮಂತ್ರಿ ಯಡಿಯೂರಪ್ಪ ಮತ್ತು ಅವರ ಕುಟುಂಬದ ಭ್ರಷ್ಟಚಾರ ಬಯಲಿಗೆ ಬಂದಿದ್ದು, ಅದರ ತನಿಖೆಯಾಗಬೇಕು. ಕೂಡಲೇ ಯಡಿಯೂರಪ್ಪ ತಮ್ಮ ಸ್ಥಾನಕ್ಕೆ ರಾಜಿನಾಮೇ ನೀಡಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು.

ಕೆಪಿಸಿಸಿ ಕಚೇರಿಯಲ್ಲಿ ಪ್ರತಿಕಾಗೋಷ್ಠಿಯಲ್ಲಿ ಮಾತ ನಾಡಿದ ಅವರು, ಸರ್ಕಾರದ ಭ್ರಷ್ಟಾಚಾರ ಮತ್ತು ದುರಾಡಳಿತ ಎರಡೂ ಒಟ್ಟಿಗೆ ಹೋಗುತ್ತಿವೆ. ಸರ್ಕಾರ ಅಧಿಕಾರಕ್ಕೆ ಬಂದು 1 ವರ್ಷ 3 ತಿಂಗಳಾಗಿದೆ. ಈ ಅವಧಿಯಲ್ಲಿ ಭ್ರಷ್ಟಾಚಾರ ಮಿತಿಮೀರಿದೆ. ನಾನು, ಡಿ.ಕೆ.ಶಿವಕುಮಾರ್ ಅವರು ಅನೇಕ ಭಾರಿ ಈ ಬಗ್ಗೆ ಪ್ರಸ್ತಾಪಿಸಿದ್ದೇವೆ.

ಸಿಎಂ ಕುಟುಂಬದವರ ಶಾಮೀಲು ಬಗ್ಗೆಯೂ ಹೇಳಿದ್ದೇವೆ. ರಾಜ್ಯದಲ್ಲಿ ಇಬ್ಬರು ಮುಖ್ಯಮಂತ್ರಿಗಳಿದ್ದಾರೆ ಎಂಬುದು ಪದೇ ಪದೇ ಸಾಬೀತಾಗುತ್ತಿದೆ. ಕೊರೊನಾ ಸಂದರ್ಭದಲ್ಲೂ ಸರ್ಕಾರದ ಭ್ರಷ್ಟಾಚಾರದಲ್ಲಿ ಭಾಗಿಯಾಗಿದೆ. ಸದನದಲ್ಲೂ ನಾವು ಇದನ್ನ ಪ್ರಸ್ತಾಪಿಸಿದ್ದೇವೆ. ಇವರು ಜನರ ಆಶೀರ್ವಾದದಿಂದ ಅಧಿಕಾರಕ್ಕೆ ಬಂದಲ್ಲ ಎಂದರು.

ಮೆಡಿಕಲ್ ಕಿಟ್ ಹಗರಣದ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದಾವು, ಬೇಡಿಕೆ ಹೆಚ್ಚಿದ್ದರಿಂದ ದರದಲ್ಲಿ ಏರು ಪೇರಾಗಿದೆ ಎನ್ನುತ್ತಾರೆ. ಅಷ್ಟೊಂದು ಏರುಪೇರಾಗಲು ಹೇಗೆ ಸಾಧ್ಯ. ಭ್ರಷ್ಟಾಚಾರದಿಂದ ಅದು ಸಾಧ್ಯ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಅವರ ಪುತ್ರ ವಿಜಯೇಂದ್ರ, ಅಳಿಯ ವಿರೂಪಾಕ್ಷಪ್ಪ ಮರಡಿ, ಮೊಮ್ಮಗ ಶಶಿಧರ್ ಮರಡಿ ಲಂಚ ಪಡೆಯುವಾಗ ಸಿಕ್ಕಿಬಿದ್ದಾರೆ. ಬಿಡಿಎ ನಿಂದ 576 ಕೋಟಿ ವೆಚ್ಚದಲ್ಲಿ ವಸತಿ ಸಂಕೀರ್ಣ ನಿರ್ಮಾಣಕ್ಕೆ ಟೆಂರ್ಡ ಘೋಷಣೆಯಾಗಿತ್ತು.

ಟೆಂರ್ಡ ನಲ್ಲಿ ಇಬ್ಬರು ಬಿಲ್ಡರ್ ಭಾಗವಹಿಸಿದ್ದರು.ರಾಮಲಿಂಗಂ ಕನ್ ಸ್ಟ್ರಕ್ಷನ್ ಕಂಪನಿ ಕೂಡ ಇದೆ. 6,66,22,500 ಗೆ ಟೆಂರ್ಡ ಇತ್ಯರ್ಥವಾಗಿದೆ. 331 ಕೋಟಿ ಠೇವಣಿ ಇಟ್ಟಿದ್ದಾರೆ. 2020ರ ಫೆಬ್ರವರಿ 22ರಂದು ಕಾಮಗಾರಿಗೆ ಒಪ್ಪಿಗೆ ನೀಡಲಾಗಿದೆ. 2019ರ ಜುಲೈ 26ರಂದು ಯಡಿಯೂರಪ್ಪ ಸಿಎಂ ಆಗಿದ್ದಾರೆ. ಅಧಿಕಾರಲ್ಲಾ ಬರುತ್ತಲೇ ವಿಜಯೇಂದ್ರ ರಾಮಲಿಂಗಂ ಕಂಪನಿಗೆ ಬೆದರಿಕೆ ಹಾಕ್ತಾರೆ.

ಹೊಟೇಲ್ ಮಾಲಿಕನಿಗೆ ಹಣ ನೀಡುವಂತೆ ಸೂಚನೆ ನೀಡಿದ್ದಾರೆ. ಪ್ರಾಜೆಕ್ಟï ಕಿಕ್ ಮುಂದುವರಿಸಬೇಕಾದರೆ ಲಂಚ ನೀಡಬೇಕು ಎಂದು ಸೂಚನೆ ನೀಡಿದ್ದಾರೆ. ವಿಜಯೇಂದ್ರನಿಗೆ ಕೊಡ್ತೇನೆ ಎಂದು ಬಿಡಿಎ ಆಯುಕ್ತ ಪ್ರಕಾಶ್ 12 ಕೋಟಿ ಹಣ ಪಡೆಯುತ್ತಾರೆ.

ಈ ವೇಳೆ ಕಂಟ್ರಾಕ್ಟರ್ ಗೆ ವಿಜಯೇಂದ್ರ ಪೋನ್ ಮಾಡ್ತಾರೆ. ಹಣ ಬಂದಿಲ್ಲವಲ್ಲ ಅಂತ ಕೇಳ್ತಾರೆ. ಆದರೆ ಪ್ರಕಾಶ್ ಗೆ ಕೊಟ್ಟೆ ಅಂತ ಕಂಟ್ರಾಕ್ರ್ಟ ಹೇಳ್ತಾರೆ. ವಿಜಯೇಂದ್ರ ಪ್ರಾಮಾಣಿಕರಾಗಿದ್ದರೆ ಬಿಡಿಎ ಕಮೀಷನರ್, ಕಂಟ್ರಾಕ್ಟರ್ ಮೇಲೆ ಕೇಸ್ ಹಾಕಬೇಕಿತ್ತು, ಯಾಕೆ ಹಾಕಲಿಲ್ಲ ಎಂದು ಪ್ರಶ್ನಿಸಿದರು.

Facebook Comments