ರಾಜ್ಯದಲ್ಲಿ ನಾನು ಅನಾಮಧೇಯನಾ: ಸಿದ್ದು ಟೀಕಾ ಪ್ರಹಾರ

ಬೆಂಗಳೂರು, ಅ.17- ರಾಜರಾಜೇಶ್ವರಿನಗರ ಉಪ ಚುನಾವಣೆಯಲ್ಲಿ ನೀತಿ ಸಂಹಿತೆ ಉಲ್ಲಂಘನೆ ಸಂಬಂಧಪಟ್ಟಂತೆ ಕುಸುಮಾ ವಿರುದ್ಧ ಎಫ್‍ಐಆರ್ ದಾಲಿಸಿರುವ ಪೊಲೀಸರು ನನ್ನನ್ನು ಅನ್ನೋನ್ ಪರ್ಸನ್ ಎಂದು ಉಲ್ಲೇಖಿಸಿದ್ದಾರೆ. ರಾಜ್ಯದಲ್ಲಿ ನಾನು ಅನಾಮಧೇಯನಾ ಎಂದು ಮಾಜಿ ಮುಖ್ಯಮಂತ್ರಿ ಹಾಗೂ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.

ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾಮಪತ್ರ ಸಲ್ಲಿಕೆ ದಿನ ನಾನು ಕುಸುಮಾ ಮತ್ತು ಅವರ ತಂದೆ ಮೂರು ಮಂದಿ ಹೋಗಿದ್ದೆವು. ಡಿ.ಕೆ.ಶಿವಕುಮಾರ್ ಅವರು ಬರಲಿ ಎಂದು ಕುಳಿತಿದ್ದೆವು. ಅದು ತಪ್ಪೇ ? ಎಫ್‍ಐಆರ್ ದಾಖಲಿಸಿರುವ ಪೊಲೀಸರು ಕುಸುಮಾ ಅವರ ಹೆಸರನ್ನು ಬರೆದಿದ್ದಾರೆ. ನನ್ನ ಹೆಸರು ಎಫ್‍ಐಆರ್‍ನಲ್ಲಿ ಇಲ್ಲ.

ಅನೌನ್ ಪರ್ಸನ್ ಎಂದು ಹಾಕಿದ್ದಾರೆ. ನಾನು ಅನೌನ್‍ಪರ್ಸನಾ ಎಂದು ಪ್ರಶ್ನಿಸಿದರು. ಕಾಂಗ್ರೆಸ್ ಅಭ್ಯರ್ಥಿ ಕುಸುಮಾ ಅವರಿಗೆ ಕಿರುಕುಳ ನೀಡುತ್ತಿದ್ದಾರೆ. ಮಾನಸಿಕವಾಗಿ ಹಿಂಸೆ ಕೊಡುತ್ತಿದ್ದಾರೆ. ಪೊಲೀಸರನ್ನು ದುರುಪಯೋಗ ಪಡಿಸಿಕೊಳ್ಳಲಾಗುತ್ತಿದೆ. ಅಂದು ನಾನು ನಾಮಪತ್ರ ಸಲ್ಲಿಕೆಗೆ ಹೋಗಿದ್ದು ಬೆಳಗ್ಗೆ 11.45ಕ್ಕೆ. ಪೊಲೀಸರು 11.15 ಎಂದು ಸಮಯ ಹಾಕಿದ್ದಾರೆ.
ಡಿವೈಎಸ್‍ಪಿ ಅವರಿಗೆ ಪೊಲೀಸ್ ಕೆಲಸ ಮಾತ್ರ ಮಾಡುವಂತೆ ಹೇಳಿದ್ದೇನೆ ಎಂದರು.