ಬಿಎಸ್‍ವೈ ಪುತ್ರನಿಂದ ಹಣದ ಸ್ಟ್ರಾಟರ್ಜಿ, ಬಿಜೆಪಿ ವಿರುದ್ಧ ಸಿದ್ದು ವಾಗ್ದಾಳಿ

ಬೆಳಗಾವಿ, ಅ.19- ಯಡಿಯೂರಪ್ಪ ಪುತ್ರ ವಿಜಯೇಂದ್ರ ಶಿರಾ ದಲ್ಲೇ ಠಿಕಾಣಿ ಹೂಡಿದ್ದಾರೆ. ಅದೇನೋ ಕೆ.ಆರ್ ಪೇಟೆಯಲ್ಲಿ ಮಾಡಿದ ಸ್ಟ್ರ್ಯಾಟರ್ಜಿ ಮಾಡ್ತಾರಂತೆ ಹಣ ಖರ್ಚು ಮಾಡೋದೆ ಇವರ ಸ್ಟ್ರಾಟರ್ಜಿ, ಅದು ಬಿಟ್ರೆ ಬೇರೇನು ಇಲ್ಲ, ಇಂತಹ ಭ್ರಷ್ಟ ಸರ್ಕಾರವನ್ನ ನಾನು ಹಿಂದೆಂದೂ ನೋಡಿರಲಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಬಿಜೆಪಿ ನಾಯಕರ ವಿರುದ್ದ ವಾಗ್ದಾಳಿ ನಡೆಸಿದರು.

ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಆರ್.ಆರ್.ನಗರದಲ್ಲಿ ನನ್ನ ಮೇಲೆ ಕೇಸ್ ದಾಖಲಿಸಿಲ್ಲ. ನಮ್ಮ ಅಭ್ಯರ್ಥಿ ಕುಸುಮಾ ಮತ್ತಿಬ್ಬರು ಎಂದು ಕೇಸ್ ದಾಖಲಿಸಿದ್ದಾರೆ. ನಮ್ಮ ಅಭ್ಯರ್ಥಿ ಕುಸುಮಾ ಅವರನ್ನ ಹೆದರಿಸುವ ಪ್ರಯತ್ನ ಮಾಡ್ತಿದ್ದಾರೆ. ನಮ್ಮ ಪಕ್ಷದ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೇಳಿದಂತೆ ನಾವು ಜಗ್ಗೋದಿಲ್ಲ ಬಗ್ಗೋದಿಲ್ಲ ಎಂದರು.

ನಾನು ಶಿರಾ ಮತ್ತು ಆರ್.ಆರ್. ನಗರಕ್ಕೆ ಹೋಗಿದ್ದೇನೆ ಆರ್.ಆರ್.ನಗರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರ ಸ್ಪರ್ಧೆ ಇದೆ. ಆದ್ರೆ ಶಿರಾ ಕ್ಷೇತ್ರದಲ್ಲಿ ತ್ರಿಕೋನ ಸ್ಪರ್ಧೆಯಿದೆ ಎಂದ್ರು. ಸರ್ಕಾರದಿಂದ ಕಾಂಗ್ರೆಸ್ ಶಾಸಕರಿಗೆ ಅನುದಾನ ಕೊರತೆ ಅನುದಾನ ಆರೋಪ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು ಕಾಂಗ್ರೆಸ್ ಶಾಸಕರಿಗೆ ಅನುದಾನ ಕೊಡುತ್ತಿಲ್ಲ ಅನುದಾನ ಕೊಡಲು ಸರ್ಕಾರದ ಬಳಿ ಹಣವಿಲ್ಲ.

ಲಂಚ ಕೊಡುವವರಿಗೆ ಅನುದಾನ ಬಿಡುಗಡೆ ಮಾಡ್ತಾರೆ. ಇದು ಪರ್ಸೆಟೆಂಜ್ ಸರಕಾರ, ಬಿಜೆಪಿ ಎಂಎಲ್‍ಎ ಇರುವ ಕಡೆಯೂ ಪರ್ಸೆಂಟೆಜ್ ನೀಡಿ ಅನುದಾನ ಪಡೆಯುತ್ತಿದ್ದಾರೆ ಎಂದು ಆರೋಪಿಸಿದ್ರು. ನನ್ನ ರಾಜಕೀಯ ಜೀವನದಲ್ಲಿ ಇಂತಹ ಸರ್ಕಾರ ಮೊದಲನೇ ಬಾರಿ ನೋಡಿದ್ದೇನೆ. ಕಾಂಗ್ರೆಸ್ ನ್ನು ಅರಬಿ ಸಮುದ್ರಕ್ಕೆ ಎಸೆಯಬೇಕು ಎಂದು ಬಿಜೆಪಿ ರಾಜಜ್ಯಾಕ್ಷ ನಳೀನ್ ಕುಮಾರ ಕಟೀಲ್ ಹೇಳಿಕೆ ವಿಚಾರ ಕಟೀಲ್ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಸಿಎಂ ಕಟೀಲ್ ಒಬ್ಬ ಯಕ್ಷಶ್ಚಿತ ರಾಜಕಾರಣಿ.

ಬಿಜೆಪಿಯ ಅಧ್ಯಕ್ಷರಾಗಿರುವ ಅವರು ಮಾತನಾಡುವಾಗ ಜವಾಬ್ದಾರಿಯಿಂದ ಮಾತನಾಡಬೇಕು. ಬಿಜೆಪಿ ಕಾಲದಲ್ಲಿ ಆತ್ಮಹತ್ಯೆ ನಿಂತಿದೆಯಾ.. ? ನೇಕಾರರ ಆತ್ಮ ಹತ್ಯೆ ಯಾಕೆ ಆಗುತ್ತಿದೆ ಹೇಳಪ್ಪ ನಳೀನ್ ಕುಮಾರ ಕಟೀಲ್ ಎಂದು ತಿರುಗೇಟು ನೀಡಿದರು. ಪ್ರವಾಹದಲ್ಲಿ ಮನೆ ಬಿದ್ದವರಿಗೆ ಯಾರಿಗೂ ಹಣ ನೀಡಿಲ್ಲ ಜಿಲ್ಲಾ„ಕಾರಿ ಖಾತೆಯಲ್ಲಿ ಹಣ ಇದ್ದರೆ ಸಂತ್ರಸ್ತರಿಗೆ ತಲುಪಬೇಕಲ್ಲ ಎಂದು ಪ್ರಶ್ನಿಸಿದ ಸಿದ್ದರಾಮಯ್ಯ ಬಾರೋ ಬಾರೋ ಮಳೆರಾಯ ಹೂವಿನ ತೋಟಕ್ಕೆ ನೀರಿಲ್ಲ ಎನ್ನುವ ಹಾಗೆ ಅನುದಾನಕ್ಕಾಗಿ ಕಾಯಬೇಕಿದೆ ಎಂದು ಟೀಕಿಸಿದರು.

ಯಡಿಯೂರಪ್ಪ ಸಿಎಂ ಆದ ಮೇಲೆ ಎರಡು ಬಾರಿ ಗೋಲಿಬಾರ್ ಆಯ್ತು, ಡಿಜೆ ಹಾಗೂ ಕೆಜಿ ಹಳ್ಳಿಯಲ್ಲಿ ಗಲಾಟೆಯಾಗಿರೋದು ಪೊಲೀಸ್, ಇಂಟಲಿಜೆನ್ಸ್ ಹಾಗೂ ಸರಕಾರದ ವೈ-ಲ್ಯದಿಂದ, ದೂರು ನೀಡಿದ ತಕ್ಷಣ ಕ್ರಮ ಕೈಗೊಂಡಿದ್ದರೆ ಗಲಭೆ ನಡೆಯುತ್ತಿರಲಿಲ್ಲ ಎಂದರು. ಕಾಂಗ್ರೆಸ್ ಅತ್ಯಂತ ದೊಡ್ಡ ಪಕ್ಷ ಸಾಕಷ್ಟು ಭಾರೀ ಸ್ವಂತ ಬಲದಿಂದ ಅ„ಕಾರಕ್ಕೆ ಬಂದಿದೆ ತಮಿಳನಾಡು, ತೆಲಂಗಾಣ, ಆಂದ್ರಪ್ರದೇಶ ಪಂಜಬನಲ್ಲಿ ಇವರ ಪಾರ್ಟಿ ಇದೆಯೋ ಎಂದು ಪ್ರಶ್ನಿಸಿದ ಅವರು ಕರ್ನಾಟಕದಲ್ಲಿ ವಾಮಮಾರ್ಗದ ಮೂಲಕ ಅದಿಕಾರಕ್ಕೆ ಬಂದಿದ್ದಾರೆ. ಇವರಿಗೆ ಜನ ಬೆಂಬಲ ಇಲ್ಲವೇ ಇಲ್ಲ ಎಂದು ತಮ್ಮ ಮಾತಿನುದ್ದಕ್ಕೂ ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ರು.