ಸಿದ್ದರಾಮಯ್ಯರನ್ನು ಭೇಟಿಯಾದ ‘ಹೌದು ಹುಲಿಯಾ’ಖ್ಯಾತಿಯ ಪೀರಪ್ಪ..!

ಬೆಂಗಳೂರು, ಡಿ.16-ಹೌದು ಹುಲಿಯಾ… ಖ್ಯಾತಿಯ ಪೀರಪ್ಪ ಇಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿದರು.  ಅನಾರೋಗ್ಯದಿಂದ ಚಿಕಿತ್ಸೆ ಪಡೆದು ಆಸ್ಪತ್ರೆಯಿಂದ ಬಿಡುಗಡೆಯಾಗಿ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಸಿದ್ದರಾಮಯ್ಯ ಅವರನ್ನು ಇಂದು ಭೇಟಿಯಾದ ಪೀರಪ್ಪ ನಿಮ್ಮಿಂದಾಗಿ ನಾನು ರಾಜ್ಯಕ್ಕೆ ಪರಿಚಯವಾದೆ ಎಂದು ಹರ್ಷ ವ್ಯಕ್ತಪಡಿಸಿದರು.

ಸಿದ್ದರಾಮಯ್ಯ ಅವರು ಕೂಡ ಪೀರಪ್ಪ ಅವರನ್ನು, ನೀನು ರಾಜ್ಯಕ್ಕೆ ಪರಿಚಯ ಆಗಿದ್ದೀಯ ಎಂದು ಶಹಭಾಷ್‍ಗಿರಿ ನೀಡಿದ್ದಾರೆ. ಉಪಚುನಾವಣೆ ಗೆಲುವಿನ ವಿಜಯೋತ್ಸವದಲ್ಲಿ ಭಾಗಿಯಾಗಿದ್ದ ಬಗ್ಗೆ ಇದೇ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರಿಗೆ ಸ್ಪಷ್ಟನೆ ನೀಡಿದ ಪೀರಪ್ಪ, ನನ್ನನ್ನು ಕರೆದುಕೊಂಡುಹೋದರು, ಹೋಗಿದ್ದೆ.

ನಾನು ಸದಾ ಕಾಂಗ್ರೆಸ್ಸಿಗ. ನೀವೆಲ್ಲಿರುತ್ತೀರೋ ಅಲ್ಲಿರ್ತೀನಿ ಎಂದು ಹೇಳಿಕೊಂಡಿದ್ದಾನೆ. ನಿಮ್ಮನ್ನು ಭೇಟಿ ಮಾಡ್ಬೇಕೆಂಬ ಆಸೆ ಇತ್ತು. ಆದರೆ ನೀವು ಆಸ್ಪತ್ರೆಯಲ್ಲಿದ್ದೀರಿ. ಹಾಗಾಗಿ ಭೇಟಿಯಾಗಿರಲಿಲ್ಲ. ಇಂದು ನಿಮ್ಮನ್ನು ಭೇಟಿ ಮಾಡಿ ಖುಷಿಯಾಯಿತು ಎಂದು ಪೀರಪ್ಪ ಕಾಲಿಗೆ ನಮಸ್ಕಾರ ಮಾಡಿದ್ದಾನೆ.