ಸಿದ್ದು ಆಡಳಿತದ ಹಗರಣಗಳನ್ನು CID ತನಿಖೆಗೊಳಪಡಿಸುವಂತೆ N.R.ರಮೇಶ್ ಆಗ್ರಹ

Social Share

ಬೆಂಗಳೂರು,ಜ.23-ವಿಪಕ್ಷ ನಾಯಕ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧಿಕಾವಧಿಯಲ್ಲಿ ನಡೆದಿದೆ ಎನ್ನಲಾದ ಗಂಭೀರ ಸ್ವರೂಪದ 14 ಪ್ರಕರಣಗಳನ್ನು ಮರು ತನಿಖೆ ನಡೆಸುವ ಜೊತೆಗೆ ಕೂಡಲೇ ಸಿಐಡಿ ತನಿಖೆಗೂ ಆದೇಶಿಸಬೇಕೆಂದು ಬಿಜೆಪಿ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕ ಅಧ್ಯಕ್ಷ ಎನ್.ಆರ್. ರಮೇಶ್ ಆಗ್ರಹಿಸಿದ್ದಾರೆ.

ಬಿಬಿಎಂಪಿ ಕೇಂದ್ರ ಕಚೇರಿಯಲ್ಲಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, 2013 ರಿಂದ 2018 ರವರೆಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಡಳಿತವಿತ್ತು. ಈ ಸಂದರ್ಭದಲ್ಲಿ 121 ಬೃಹತ್ ಹಗರಣಗಳಿಗೆ ಸಂಬಂಧಿಸಿದಂತೆ ಸಂಪೂರ್ಣ ದಾಖಲೆಗಳ ಸಹಿತ ಲೋಕಾಯುಕ್ತದಲ್ಲಿ ಪ್ರತ್ಯೇಕವಾಗಿ ದೂರುಗಳನ್ನು ದಾಖಲಿಸಲಾಗಿತ್ತು. ಆದರೆ, ಪ್ರಭಾವಕ್ಕೆ ಒಳಗಾಗಿದ್ದ ಕೆಲ ಅಕಾರಿಗಳು 14 ಪ್ರಕರಣಗಳನ್ನು ಮುಕ್ತಾಯಗೊಳಿಸಿದ್ದಾರೆ.

ಅದರಲ್ಲೂ ಸಿದ್ದರಾಮಯ್ಯ ಮಾತ್ರವಲ್ಲದೆ, ಅವರ ಸಚಿವ ಸಂಪುಟದಲ್ಲಿ ಸಚಿವರಾಗಿದ್ದ ಕೆ.ಜೆ.ಜಾರ್ಜ್, ಕೃಷ್ಣ ಭೈರೇಗೌಡ, ಯುಟಿ ಖಾದರ್ ಸೇರಿದಂತೆ ಹಲವು ಕಾಂಗ್ರೆಸ್ ನಾಯಕರ ಪ್ರಕರಣಗಳಲ್ಲಿ ಲೋಕಾಯುಕ್ತ ಸಂಸ್ಥೆಯ, ಎಸಿಬಿಯ ಕೆಲ ಅಧಿಕಾರಿಗಳು, ದೂರುದಾರರಿಂದ ಯಾವುದೇ ಹೇಳಿಕೆಗಳನ್ನು ಪಡೆದುಕೊಳ್ಳದೇ, ಏಕಾಏಕಿ ಪ್ರಕರಣಗಳನ್ನು ಮುಕ್ತಾಯಗೊಳಿಸಿದ್ದಾರೆ ಎಂದು ಆರೋಪಿಸಿದರು.

ಗರ್ಭ ಮುಂದುವರೆಸುವ, ತೆಗೆಸುವ ಅಧಿಕಾರ ಮಹಿಳೆಗೆ ಮಾತ್ರ ಸೇರಿದೆ : ಬಾಂಬೆ ಹೈಕೋರ್ಟ್

ಯಾವ ಹಗರಣ?: ಮಳೆ ಆಧಾರಿತ ಕೃಷಿ ಭೂಮಿಗಳನ್ನು ಹೊಂದಿರುವ ರೈತರ ಜಮೀನುಗಳಿಗೆ ಉಚಿತವಾಗಿ ಕೃಷಿ ಹೊಂಡಗಳನ್ನು ನಿರ್ಮಿಸಿಕೊಡುವ ಹೆಸರಿನಲ್ಲಿ 800 ಕೋಟಿ ರೂಪಾಯಿಗಳಿಗೂ ಹೆಚ್ಚು ಹಣವನ್ನು ಲೂಟಿ ಮಾಡಿರುವ ಕೃಷಿ ಭಾಗ್ಯ ಹಗರಣ.

ಬಿಬಿಎಂಪಿ ವ್ಯಾಪ್ತಿಯಲ್ಲಿ ಒಳ ಡೇಸ್ಟಾ ಬೀನ್ ಅಳವಡಿಕೆ ಹೆಸರಿನಲ್ಲಿ ನಡೆದಿರುವ 200 ಕೋಟಿ ಹಗರಣ, ಕಾನೂನು ರೀತ್ಯಾ ನಿಗದಿತ ಶುಲ್ಕ ಪಾವತಿಸದೇ 2013 ರಿಂದ 2018 ರ ಅವಯಲ್ಲಿ ಬಿಬಿಎಂಪಿ ವ್ಯಾಪ್ತಿಯ ಎಲ್ಲಾ ಬಸ್ ಶೆಟರ್ ಗಳನ್ನು ತಮ್ಮ ಸರ್ಕಾರದ ಮತ್ತು ತಮ್ಮ ಪಕ್ಷದ ಪ್ರಚಾರ ಕಾರ್ಯಕ್ಕಾಗಿ ಬಳಸಿಕೊಂಡು 35 ಕೋಟಿ ರೂಪಾಯಿ ಜಾಹೀರಾತು ಶುಲ್ಕ ವಂಚಿಸಿರುವ ಹಗರಣ.

ಇಂದಿರಾ ಕ್ಯಾಂಟೀನ್ ಗ್ರಾಹಕರ ಹೆಸರಿನಲ್ಲಿ ಪ್ರತೀ ತಿಂಗಳು ತಲಾ 28 ಕೋಟಿ ರೂಪಾಯಿಗಳಂತೆ 20 ತಿಂಗಳ ಅವಧಿಯಲ್ಲಿ 560 ಕೋಟಿ ರೂಪಾಯಿಗಳಿಗೂ ಹೆಚ್ಚು ಮೊತ್ತವನ್ನು ವಂಚಿಸಿರುವ ಇಂದಿರಾ ಕ್ಯಾಂಟೀನ್ ಹಗರಣ, ಪ್ರತಿಯೊಂದು ಇಂದಿರಾ ಕ್ಯಾಂಟೀನ್ ಗಳ ನಿರ್ಮಾಣದ ಹೆಸರಿನಲ್ಲಿ ತಲಾ 20 ಲಕ್ಷ ರೂಪಾಯಿಗಳಂತೆ 175 ಇಂದಿರಾ ಕ್ಯಾಂಟಿನ್ ಗಳ ನಿರ್ಮಾಣದ ಹೆಸರಿನಲ್ಲಿ 35 ಕೋಟಿ ಹಗರಣ.

ಕಾಂಗ್ರೆಸ್‍ನಿಂದ ಮಹಿಳೆಯರಿಗಾಗಿ ಪ್ರತ್ಯೇಕ ಪ್ರಿಯದರ್ಶಿನಿ ಪ್ರಣಾಳಿಕೆ

5,000 ಕೋಟಿಗೂ ಹೆಚ್ಚು ಮËಲ್ಯದ 7 ಬಿಡಿಎ ವಾಣಿಜ್ಯ ಸಂಕೀರ್ಣಗಳನ್ನು 65 ವರ್ಷಗಳ ಗುತ್ತಿಗೆ ಪಡೆಯುವ ಹೆಸರಿನಲ್ಲಿ ಕೆ.ಜೆ.ಜಾರ್ಜ್ ರವರ ಎಂಬಾಸ್ಸಿ ಸಂಸ್ಥೆಯ ಮುಖೇನ ಕಬಳಿಸಲು ಹೊರಟಿದ್ದ ಬೃಹತ್ ಸರ್ಕಾರೀ ಭೂ ಕಬಳಿಕೆ ಸಂಚಿನ ಹಗರಣ, ಸರ್ಕಾರೀ ಭೂ ಕಬಳಿಕೆ ಹಗರಣಗಳೂ ಸೇರಿದಂತೆ ಒಟ್ಟು 14 ಹಗರಣಗಳಿಗೆ ಸಂಬಂಧಿಸಿದಂತೆ ಲೋಕಾಯುಕ್ತಕ್ಕೆ ಮಹತ್ವದ ದಾಖಲೆಗಳನ್ನು ಸಲ್ಲಿಸಲಾಗಿದೆ ಎಂದು ರಮೇಶ್ ಹೇಳಿದರು.

ಈ ಸಂಬಂಧ 14 ಪ್ರಕರಣಗಳನ್ನು ಮರು ತನಿಖೆ ನಡೆಸಿದರೆ, ಪ್ರಭಾವಿ ವ್ಯಕ್ತಿಗಳ ಹಗರಣ ಬಯಲಿಗೆ ಬರಲಿದ್ದು, ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ಮುಂದಾಗಲಿ.ಜೊತೆಗೆ, ಲೋಕಾಯುಕ್ತರು ಎಲ್ಲಾ ಹಗರಣಗಳನ್ನು ಮರು ತನಿಖೆ ಮಾಡಲಿ ಎಂದು ಅವರು ಆಗ್ರಹಿಸಿದರು.

ಲೋಕಾಯುಕ್ತ ಅಧಿಕಾರಿಗಳ ವಿರುದ್ಧ ಲೋಕಾಯುಕ್ತರೇ ದೂರು ನೀಡಿರುವುದು ದೇಶದಲ್ಲೇ ಇದೆ ಪ್ರಪ್ರಥಮ ಪ್ರಕರಣವಾಗಿದೆ.

Siddaramaiah, administration, scams, CID, investigation, NR Ramesh,

Articles You Might Like

Share This Article