ಬೆಂಗಳೂರು,ಜ.4- ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಕುರಿತು ಅತ್ಯಂತ ಕೀಳುಮಟ್ಟದಲ್ಲಿ ಟೀಕೆ ಮಾಡಿರುವ ಮಾಜಿ ಮುಖ್ಯಮಂತ್ರಿಯ ಸಿದ್ದರಾಮಯ್ಯ ಅವರು ರಾಜ್ಯದ ಜನತೆಯ ಕ್ಷಮೆ ಕೇಳಬೇಕೆಂದು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರುಗೇಶ್ ನಿರಾಣಿ ತಿಳಿಸಿದ್ದಾರೆ.
ಮುಖ್ಯಮಂತ್ರಿ ಸ್ಥಾನ ಸಾಂವಿ ಧಾನಿಕ ಹುದ್ದೆ. ಅದಕ್ಕೆ ಗೌರವ ಕೊಡುವುದು ಪ್ರತಿಯೊಬ್ಬರ ಕರ್ತವ್ಯ. ಅದರಲ್ಲೂ ಅತ್ಯಂತ ಹಿರಿಯ ರಾಜಕಾರಣಿಯಾಗಿರುವ ಸಿದ್ದರಾಮಯ್ಯ ಅವರಿಂದ ಇಂತಹ ಪದವನ್ನು ನಿರೀಕ್ಷೆ ಮಾಡಿರ ಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿ, ಉಪಮುಖ್ಯಮಂತ್ರಿಯಾಗಿ ವಿವಿಧ ಖಾತೆಗಳನ್ನು ನಿಭಾಯಿಸಿದ ರಾಜ್ಯದ ಒಬ್ಬ ಹಿರಿಯ ರಾಜಕಾರಣಿ. ಅಂಥವರು ಮುಂದಿನ ಪೀಳಿಗೆಗೆ ಮಾದರಿಯಾಗಬೇಕೆ ವಿನಃ ಇಂಥ ಕ್ಷುಲ್ಲಕ ಹೇಳಿಕೆ ನೀಡಬಾರದೆಂದು ಆಕ್ಷೇಪಿಸಿದ್ದಾರೆ.
ಸಿದ್ದರಾಮಯ್ಯನವರು ಈ ರೀತಿ ನಾಲಿಗೆ ಹರಿಬಿಡುವುದು ಇದೇ ಮೊದಲಲ್ಲ. ಈ ಹಿಂದೆಯೂ ಅವರು ಪ್ರಧಾನಿ ನರೇಂದ್ರಮೋದಿ ಕುರಿತು ವಿವಾದಾತ್ಮಕ ಹೇಳಿಕೆ ನೀಡಿ ಕೇಂದ್ರ ಚುನಾವಣಾ ಆಯೋಗದಿಂದ ಛೀಮಾರಿ ಹಾಕಿಸಿಕೊಂಡಿದ್ದರು. ಅದನ್ನು ಮರೆತು ಪುನಃ ಸಿಎಂ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ ಇದಕ್ಕೆ ರಾಜ್ಯದ ಜನತೆ ತಕ್ಕ ಉತ್ತರ ಕೊಡಲಿದ್ದಾರೆ ಎಂದು ಎಚ್ಚರಿಸಿದ್ದಾರೆ.
ಸುಳ್ಳು ಆರೋಪದ ಸೆರವಾಸಕ್ಕೆ 10 ಸಾವಿರ ಕೋಟಿ ಪರಿಹಾರ ಕೇಳಿದ ನಿರ್ದೋಷಿ
ಸಿದ್ದರಾಮಯ್ಯ ಅವರು ತಮ್ಮ ಇತಿಹಾಸವನ್ನು ಮರೆತು ಇನ್ನೊಬ್ಬರ ಬಗ್ಗೆ ಮಾತನಾಡಬಾರದು. ಪ್ರಧಾನಿ ಹುದ್ದೆಗೆ ಪ್ರತಿಯೊಬ್ಬರು ಗೌರವ ಕೊಡುತ್ತಾರೆ. ರಾಷ್ಟ್ರಪತಿಗಳ ಮುಂದೆ ಪ್ರಧಾನಿಯವರು ಗೌರವ ಕೊಡುತ್ತಾರೆ. ಅದೇ ರೀತಿ ಪ್ರಧಾನಿಗಳಿಗೆ ಮುಖ್ಯಮಂತ್ರಿಗಳು ಗೌರವ ಕೊಡುತ್ತಾರೆ. ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಇದೇ ನರೇಂದ್ರಮೋದಿ ಅವರು ಗೌರವ ಕೊಟ್ಟಿರಲಿಲ್ಲವೇ? ಎಂದು ಪ್ರಶ್ನಿಸಿದ್ದಾರೆ.
10 ವರ್ಷಗಳ ಕಾಲ ಸೂಪರ್ ಪವರ್ ಪ್ರಧಾನಿ ಎನಿಸಿದ್ದ ಸೋನಿಯಾ ಗಾಂಧಿ ಮುಂದೆ ಕೈಕಟ್ಟಿ ನಿಲ್ಲುವಾಗ ಸಿದ್ದರಾಮಯ್ಯ ಅವರ ಸ್ವಾಭಿಮಾನ ಎಲ್ಲಿ ಹೋಗಿತ್ತು. ಪ್ರಿಯಾಂಕ ಗಾಂಧಿ, ರಾಹುಲ್ ಗಾಂಧಿ ಅಂಥವರ ಮುಂದೆ ಜೀ ಹುಜೂರ್ ಎನ್ನುವ ನಿಮಗೆ ಭಾರತದ ಸಂಸ್ಕøತಿ, ಸಂಸ್ಕಾರ ಕೊಟ್ಟಿದೆಯೇ ಎಂದು ನಿರಾಣಿ ತರಾಟೆಗೆ ತೆಗೆದುಕೊಂಡಿದ್ದಾರೆ.
ನಮ್ಮ ದೇಶದಲ್ಲಿ ಹುದ್ದೆಗಿಂತ ವ್ಯಕ್ತಿ ಮತ್ತು ವಯಸ್ಸಿಗೆ ಬೆಲೆ ಕೊಡುತ್ತಾರೆ. ನರೇಂದ್ರ ಮೋದಿ ಅವರು ಇದುವರೆಗೂ ಒಬ್ಬರಿಂದಲ ಕಾಲಿಗೆ ನಮಸ್ಕರಿಸಿಕೊಂಡಿಲ್ಲ. ನನ್ನ ಮುಂದೆ ಕೈ ಕಟ್ಟಿ ನಿಲ್ಲಿ ಎಂದು ಹೇಳಿಲ್ಲ. ಒಬ್ಬ ಅತ್ಯುತ್ತಮ ಸಂಸದೀಯ ಪಟು ಎನಿಸಿದ ಬೊಮ್ಮಾಯಿ ಅವರ ಬಗ್ಗೆ ಈ ರೀತಿ ಮಾತನಾಡಿರುವುದು ಕಾಂಗ್ರೆಸ್ ಪಕ್ಷದ ಹಾಗೂ ನಿಮ್ಮ ಕೀಳು ಅಭಿರುಚಿ ತೋರಿಸುತ್ತದೆ ಎಂದಿದ್ದಾರೆ.
ಶಬರಿಮಲೆ ಅಯ್ಯಪ್ಪ ಚಿತ್ರಕ್ಕೆ ಬೆಂಬಲ ನೀಡಿದ್ದ ವ್ಯಕ್ತಿಯ ಅಂಗಡಿ ಧ್ವಂಸ
ಕೂಡಲೇ ಸಿದ್ದರಾಮಯ್ಯನವರು ರಾಜ್ಯದ ಜನತೆಯ ಕ್ಷಮೆ ಕೇಳಬೇಕು. ಇಲ್ಲದಿದ್ದರೆ ನಮ್ಮ ಕಾರ್ಯಕರ್ತರು ಕೂಡ ಅದೇ ಭಾಷೆಯಲ್ಲೇ ಉತ್ತರ ಕೊಡುತ್ತಾರೆ ಎಂದು ಸಚಿವ ನಿರಾಣಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Siddaramaiah, apologize, people, Minister, Murugesh Nirani,