ಸಿದ್ದರಾಮಯ್ಯ ಸಿಎಂ ಆಗಬೇಕು ಎಂಬುದು ಜನರ ಅಪೇಕ್ಷೆ : ಶಾಸಕ ಜಮೀರ್

Social Share

ಬೆಂಗಳೂರು,ಡಿ.5- ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಬೇಕು ಎಂಬುದು ಜನರ ಅಪೇಕ್ಷೆ. ಅದನ್ನು ನಾನು ಈಗಲೂ ಹೇಳುತ್ತೇನೆ. ನನ್ನ ಹೇಳಿಕೆಗೆ ನಾನೀಗಲೂ ಬದ್ದ ಎಂದು ಚಾಮರಾಜಪೇಟೆ ಶಾಸಕ ಜಮೀರ್ ಅಹಮ್ಮದ್ ಖಾನ್ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಜನನಾಯಕರು. ಅವರ ಬಗ್ಗೆ ಜನರ ಒಲವಿದೆ. ಇದರಲ್ಲಿ ಎರಡು ಮಾತಿಲ್ಲ. ಅವರು ಮುಖ್ಯಮಂತ್ರಿಯಾಗಬೇಕು ಎಂಬುದು ನನ್ನ ಬಯಕೆ ಎಂದು ತಿಳಿಸಿದರು.

ವಿಶ್ವಕಪ್ ಪುಟ್ಬಾಲ್ ಕ್ವಾರ್ಟರ್ ಫೈನಲ್ ತಲುಪಿದ ಇಂಗ್ಲೆಂಡ್

ಚಾಮರಾಜಪೇಟೆಯಲ್ಲಿ ಬಿಜೆಪಿಯವರು ರೌಡಿ ಸೈಲೆಂಟ್ ಸುನೀಲ ನನ್ನೇ ನಿಲ್ಲಿಸಲಿ, ಜೆಡಿಎಸ್‍ನ ಎಚ್.ಡಿ.ಕುಮಾರಸ್ವಾಮಿ ಅವರೇ ನಿಲ್ಲಲಿ ನನಗೆ ಯಾವುದು ಮುಖ್ಯವಲ್ಲ. 30 ಸಾವಿರ ಮತಗಳ ಅಂತರದಿಂದ ಗೆದ್ದು ಬರುತ್ತೇನೆ ಎಂದು ಹೇಳಿದರು.

ಈ ಬಾರಿ ವಿಭಿನ್ನ ತೀರ್ಪು ನೀಡಿ : ಗುಜರಾತ್ ಜನತೆಗೆ ಕೇಜ್ರಿವಾಲ್ ಮನವಿ

ನಾನು ಚಾಮರಾಜಪೇಟೆಯ ಮನೆಯ ಮಗ. ಯಾರೇ ಬರಲಿ ಅದರ ಬಗ್ಗೆ ತಲೆಕೆಡಿಸಿಕೊಳ್ಳದೆ ಕ್ಷೇತ್ರದ ಜನರ ನನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಅವರ ಆರ್ಶೀವಾದ ನನ್ನ ಮೇಲಿದೆ ಎಂದರು.

Siddaramaiah, Chief Minister, MLA Zameer,

Articles You Might Like

Share This Article