ಸಿದ್ದರಾಮಯ್ಯನವರೇ ನಿಮ್ಮ ಕ್ಷೇತ್ರ ಅಂತಿಮಗೊಳಿಸಿ : ಸಿಎಂ ಬೊಮ್ಮಾಯಿ

Social Share

ಬೆಂಗಳೂರು,ನ.8- ನೀವು ಅಧಿಕಾರಕ್ಕೆ ಬರುವುದರ ಬಗ್ಗೆ ಚಿಂತಿಸುವುದನ್ನು ಬಿಟ್ಟು ನಿಮಗಾಗಿ ಒಂದು ಕ್ಷೇತ್ರವನ್ನು ಮೊದಲು ಅಂತಿಮಗೊಳಿಸಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯನವರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸವಾಲು ಹಾಕಿದ್ದಾರೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಅವರು, ಕಾಂಗ್ರೆಸ್ ಅಧಿಕಾರಕ್ಕೆ ಬರುವುದರ ಬಗ್ಗೆ ಸಿದ್ದರಾಮಯ್ಯನವರು ಕನಸು ಕಾಣುತ್ತಿದ್ದಾರೆ. ನೀವೆಲ್ಲೇ ಸ್ರ್ಪಧಿಸಿದರೂ ಪರಮೇಶ್ವರ್, ಖರ್ಗೆ, ಡಿಕೆಶಿ ನಿಮಗೆ ಖೆಡ್ಡಾ ತೋಡುವುದು ಖಚಿತ ಎಂದು ಎಚ್ಚರಿಸಿದ್ದಾರೆ.

ಕಾಂಗ್ರೆಸ್ಸಿನ ಎವರ್ ಗ್ರೀನ್ ಬಾಲಕ ಬಾಲಕ ರಾಹುಲ್ ಗಾಂಧಿ ಅವರನ್ನು ಒಗ್ಗೂಡಿಸಲು ಮಾಡಿದ ಎಲ್ಲಾ ಕಸರತ್ತುಗಳು ವಿಫಲವಾಗಿದೆ. ಬಿಜೆಪಿ ನಾಯಕರು ಕಾಂಗ್ರೆಸ್ ನಾಯಕರಂತೆ ಸಿಎಂ ಹುದ್ದೆಗಾಗಿ ಕಚ್ಚಾಡುತ್ತಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಸತೀಶ್ ಜಾರಕಿಹೊಳಿ ಹೇಳಿಕೆ ಪೂರ್ವ ಯೋಜಿತ ಮತ್ತು ವ್ಯವಸ್ಥಿತ: ಸಿಎಂ ಬೊಮ್ಮಾಯಿ

ಪಕ್ಷವನ್ನು ಅಧಿಕಾರಕ್ಕೆ ತರಲು ಬಿಜೆಪಿಗರು ಜೊತೆಯಾಗಿ ಜನಸಂಕಲ್ಪ ಯಾತ್ರ ಮಾಡುತ್ತಿದ್ದಾರೆ. ಯಾತ್ರೆಗೆ ರಾಜ್ಯಾದಾದ್ಯಂತ ಸಿಗುತ್ತಿರುವ ಜನ ಬೆಂಬಲದಿಂದ ಕಾಂಗ್ರೆಸ್ ನಾಯಕರು ಕಂಗಾಲಾಗಿದ್ದಾರೆ ಎಂದು ಕುಟುಕಿದ್ದಾರೆ.

ಪ್ರೀತಿಸಿದವಳಿಗಾಗಿ ಲಿಂಗ ಬದಲಾವಣೆ ಮಾಡಿಸಿಕೊಂಡ ದೈಹಿಕ ಶಿಕ್ಷಕಿ

ರಾಹುಲ್ ಗಾಂಧಿ ಸಹಿತ ಯಾರಿಂದಲೂ ಸಿದ್ದರಾಮಯ್ಯ ಮತ್ತು ಡಿಕೆಶಿ ಅವರನ್ನು ಜೋಡಿಸಲು ಸಾಧ್ಯವಿಲ್ಲ. ಇವರಿಬ್ಬರು ಒಂದಾಗಲು ಕುರ್ಚಿಯ ಆಸೆ ಬಿಡಬೇಕು, ಸಿದ್ದರಾಮಯ್ಯ ನಿಮ್ಮಿಂದ ಸಿಎಂ ಕುರ್ಚಿ ಆಸೆ ಬಿಡಲು ಸಾಧ್ಯವೇ? ಎಂದು ಸಿಎಂ ಪ್ರಶ್ನಿಸಿದ್ದಾರೆ.

Articles You Might Like

Share This Article