ಸಿದ್ದರಾಮಯ್ಯನವರ ಮತ್ತೊಂದು ಭೂಹಗರಣ ಬಯಲಿಗೆ

Social Share

ಬೆಂಗಳೂರು,ಡಿ.7- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮತ್ತೊಂದು ಡಿನೋಟಿಫಿಕೇಷನ್ ಹಗರಣವನ್ನು ಬಯಲಿಗೆಳೆದಿರುವ ಬೆಂಗಳೂರು ದಕ್ಷಿಣ ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಅವರು ಇಡಿ ಪ್ರಕರಣವನ್ನು ಸಿಬಿಐ ಇಲ್ಲವೇ ಸಿಐಡಿ ತನಿಖೆಗೆ ವಹಿಸುವಂತೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಮೂಡಾ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ಅವರು ಅತ್ಯಾಪ್ತನ ಮೂಲಕ ಕಾನೂನಿನ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಡಿನೋಟಿಫಿಕೇಷನ್ ನಡೆಸಲಾಗಿದೆ ಎಂದು ಅವರು ಪತ್ರಿಕಾಗೋಷ್ಠಿಯಲ್ಲಿಂದು ದಾಖಲೆ ಬಿಡುಗಡೆ ಮಾಡಿದರು.

ಮೈಸೂರಿನ ಹಿನಕಲ್ ಗ್ರಾಮದ ಸಾಕಮ್ಮ ಎಂಬುವವರ ಮಾಲೀಕತ್ವದ ಸರ್ವೆ ನಂ. 70/4ಅ ರ ಜಮೀನು ಸೇರಿದಂತೆ ಹಲವು ಜಮೀನುಗಳನ್ನು 1985 ರಲ್ಲಿ ವಿಜಯನಗರ 2ನೇ ಹಂತದ ಬಡಾವಣೆ ನಿರ್ಮಾಣಕ್ಕೆಂದು ಮೈಸೂರು ನಗರ ಅಭಿವೃದ್ಧಿ ಪ್ರಾಧಿಕಾರ ಭೂಸ್ವಾಧಿನ ಮಾಡಿಕೊಂಡು ಬಡಾವಣೆ ನಿರ್ಮಿಸಲಾಗಿತ್ತು.

ಸ್ವಾಧಿನ ಪಡಿಸಿಕೊಂಡ ಸರ್ವೇ ನಂಬರ್ 70/4ರಲ್ಲಿ 3160, 3161, 3162 ಹಾಗೂ 3163 ನಿವೇಶನಗಳನ್ನು ಹಂಚಿಕೆ ಮಾಡಲಾಗಿತ್ತು. ಇದರಲ್ಲಿ ಸುಂದರ್‍ರಾಜ್ ಎಂಬುವರು ತಮಗೆ ಹಂಚಿಕೆಯಾಗಿದ್ದ 3161 ನಂಬರಿನ ನಿವೇಶನದಲ್ಲಿ ಮನೆ ನಿರ್ಮಿಸಿಕೊಂಡಿದ್ದರು.

ಮಹಾರಾಷ್ಟ್ರ – ಕರ್ನಾಟಕ ನಡುವೆ ಬಸ್ ಸೇವೆ ಬಂದ್

ಅದರೆ, ಭೂಮಿ ಕಳೆದುಕೊಂಡ ಭೂ ಮಾಲಿಕರು ಭೂ ಸ್ವಾಧಿನ ಪ್ರಕ್ರಿಯೆಯನ್ನು ಕೈ ಬಿಡುವಂತೆ ಮಾಡಿಕೊಂಡಿದ್ದ ಮನವಿಯವನ್ನು ಮೂಡಾ ಆಯುಕ್ತರು ತಿರಸ್ಕರಿಸಿದ್ದರು. ಇದಾದ ನಂತರ 1997ರಲ್ಲಿ ಮೂಡಾ ಅಧ್ಯಕ್ಷರಾಗಿ ನೇಮಕರಾದ ಸಿದ್ದರಾಮಯ್ಯ ಅವರ ಭಂಟ ಬಸವೇಗೌಡ ಎಂಬುವರು ಕಾನೂನು ನಿಯಮಗಳನ್ನು ಗಾಳಿಗೆ ತೂರಿ ಸರ್ವೇ ನಂಬರ್ 70/4ರ ಜಮೀನನ್ನು ಡಿನೋಟಿಫಿಕೇಷನ್ ಮಾಡಿದ್ದರು. ಮಾತ್ರವಲ್ಲ ಡಿನೋಟಿಫಿಕೇಷನ್ ಆಗಿದ್ದ 3161ನೆ ಸಂಖ್ಯೆಯ ನಿವೇಶನವನ್ನು ಸಿದ್ದರಾಮಯ್ಯ ಅವರು ಸಾಕಮ್ಮ ಎಂಬುವರಿಂದ ಖರೀದಿಸಿದ್ದಾರೆ ಎಂದು ರಮೇಶ್ ಆರೋಪಿಸಿದ್ದಾರೆ.

ಮಾತ್ರವಲ್ಲ 3161ರ ನಿವೇಶನದಲ್ಲಿ ಸುಂದರ್‍ರಾಜ್ ಅವರು ಕಾನೂನುಬದ್ಧವಾಗಿ ನಿರ್ಮಿಸಿಕೊಂಡಿದ್ದ ಮನೆಯನ್ನು ಕೆಡವಿ ಹಾಕಿ ಸಿದ್ದರಾಮಯ್ಯ ಅವರು ಭವ್ಯ ಬಂಗಲೆ ಕಟ್ಟಿಸಿಕೊಂಡಿದ್ದಾರೆ ಎಂದು ಅವರು ದೂರಿದ್ದಾರೆ.

ದೆಹಲಿ ಪಾಲಿಕೆ ಗದ್ದುಗೆಗೆ ಬಿಜೆಪಿ-ಆಪ್ ನಡುವೆ ಪ್ರಬಲ ಪೈಪೋಟಿ

ತಾವು ಸಾಚಾ ರಾಜಕಾರಣಿ ಎಂದು ಬಿಂಬಿಸಿಕೊಳ್ಳುವ ನೀವು ನಿವೇಶನವನ್ನು ಖರೀದಿಸಿರುವುದು ನಿಜವೇ ಸುಳ್ಳೆ, ನಂತರ ಆ ಭೂಮಿಯನ್ನು ಒಂದು ಕೋಟಿ ರೂ.ಗಳಿಗೆ ಮಾರಾಟ ಮಾಡಿಲ್ಲವೆ ಎಂದು ರಮೇಶ್ ಅವರು ಸಿದ್ದರಾಮಯ್ಯ ಅವರಿಗೆ 10 ಪ್ರಶ್ನೆಗಳನ್ನು ಕೇಳಿ ಸೂಕ್ತ ಉತ್ತರ ನೀಡುವಂತೆ ಒತ್ತಾಯಿಸಿದ್ದಾರೆ.

ಹೀಗಾಗಿ ಇಡಿ ಪ್ರಕರಣವನ್ನು ಸಿಬಿಐ ಇಲ್ಲವೇ ಸಿಐಡಿ ತನಿಖೆಗೆ ವಹಿಸಬೇಕು ಎಂದು ರಮೇಶ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

#Siddaramaiah, #Denotification, #NRRamesh, #BJP,

Articles You Might Like

Share This Article