ಹಿತಶತ್ರುಗಳ ಕಾಟದಿಂದ ಎಚ್ಚರಿಕೆ ಹೆಜ್ಜೆ ಇಡುತ್ತಿರುವ ಸಿದ್ದರಾಮಯ್ಯ

Social Share

ಬೆಂಗಳೂರು, ನ.14- ಕಳೆದ ಬಾರಿಯಂತೆ ಎರಡು ಕಡೆಗಳಲ್ಲಿ ಸ್ರ್ಪಧಿಸಲು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇಲ್ಲದಿರುವುದರಿಂದ, ಅವರು ಅತ್ಯಂತ ಸೂಕ್ಷ್ಮವಾಗಿ ಕ್ಷೇತ್ರ ಆಯ್ದುಕೊಳ್ಳಲು ಪೂರ್ವ ತಯಾರಿ ನಡೆಸಿದ್ದಾರೆ.

ನಿನ್ನೆ ಕೋಲಾರಕ್ಕೆ ಭೇಟಿ ನೀಡಿದ್ದ ಸಿದ್ದರಾಮಯ್ಯ ಆರಂಭದಲ್ಲಿ ಅಲ್ಲಿಂದಲೇ ಸ್ರ್ಪಧಿಸುವ ಸುಳಿವು ನೀಡಿದ್ದರು. ಆದರೆ ಕೆಲವೇ ಕ್ಷಣಗಳಲ್ಲಿ ತಾವಿನ್ನೂ ನಿರ್ಧಾರ ಮಾಡಿಲ್ಲ ಎಂದು ಹೇಳುವ ಮೂಲಕ ಗೊಂದಲ ಮೂಡಿಸಿದ್ದಾರೆ. ಸಿದ್ದರಾಮಯ್ಯ ಕ್ಷೇತ್ರ ಆಯ್ಕೆಯಲ್ಲಿ ಗೊಂದಲಕ್ಕೆ ಒಳಗಾಗಿರುವ ಕುರಿತು ರಾಜಕೀಯ ವಿರೋಧಿಗಳು ಕುಹಕವಾಡಲಾರಂಭಿಸಿದ್ದಾರೆ.

ಮೂಲತಃ ಮೈಸೂರು ಜಿಲ್ಲೆಯಿಂದ ಬೆಳೆದು ಬಂದ ಸಿದ್ದರಾಮಯ್ಯ ಕಳೆದ ಬಾರಿ ತಮ್ಮ ಮೂಲ ಕ್ಷೇತ್ರವನ್ನು ಮಗನಿಗೆ ಬಿಟ್ಟುಕೊಟ್ಟು ಹಳೆಯ ಕ್ಷೇತ್ರ ಚಾಮುಂಡೇಶ್ವರಿಯಲ್ಲಿ ನಿಂತು ಸೋಲು ಕಂಡಿದ್ದರು. ಆದರೆ ದ್ವೀಸದಸ್ಯ ಕ್ಷೇತ್ರಗಳಲ್ಲಿ ಸ್ರ್ಪಧಿಸಿದ್ದರಿಂದ ಬಾಗಲಕೋಟೆಯ ಬಾದಾಮಿ ಕ್ಷೇತ್ರ ಕೈ ಹಿಡಿದಿತ್ತು.

ಶಾಲಾ ಕೊಠಡಿಗಳಿಗೆ ಕೇಸರಿ ಬಣ್ಣ ಸಮರ್ಥಿಸಿಕೊಂಡ ಸಿಎಂ ಬೊಮ್ಮಾಯಿ

ತವರು ಜಿಲ್ಲೆಯಲ್ಲಿ ಸೋಲು ಕಂಡ ಬಗ್ಗೆ ತೀವ್ರ ಅಸಮಧಾನಗೊಂಡಿದ್ದ ಸಿದ್ದರಾಮಯ್ಯ ಹಲವು ಸಂದರ್ಭಗಳಲ್ಲಿ ಅದನ್ನು ಹೊರ ಹಾಕಿದ್ದರು ಕೂಡ. ಬಾದಾಮಿಯಲ್ಲಿ ಶಾಸಕರಾಗಿದ್ದ ಬಿ.ಬಿ.ಚಿಮ್ಮನಕಟ್ಟಿ ಕ್ಷೇತ್ರ ಬಿಟ್ಟುಕೊಟ್ಟ ಬಳಿಕ ವಿಧಾನ ಪರಿಷತ್ ಸ್ಥಾನವೂ ದೊರೆಯದೆ ಅಸಮಧಾನಗೊಂಡು, ಈ ಬಾರಿ ತಾವು ಬಾದಾಮಿಯಿಂದ ಸ್ರ್ಪಧಿಸಲು ಬಯಸಿರುವುದಾಗಿ ಸಿದ್ದರಾಮಯ್ಯ ಅವರಿದ್ದ ಕಾರ್ಯಕ್ರಮದಲ್ಲಿ ಬಹಿರಂಗ ಹೇಳಿಕೆ ನೀಡಿದರು.

ಅದರ ಬೆನ್ನಲ್ಲೆ ಹಲವು ಕ್ಷೇತ್ರಗಳಲ್ಲಿ ಸಿದ್ದರಾಮಯ್ಯ ತಮ್ಮ ಕ್ಷೇತ್ರಗಳಲ್ಲಿ ಸ್ರ್ಪಧಿಸಬೇಕು ಎಂಬ ಒತ್ತಡಗಳು ಕೇಳಿ ಬರುತ್ತಿವೆ. ಕೆಲವು ಶಾಸಕರು ಮತ್ತು ನಾಯಕರು ಕ್ಷೇತ್ರ ತ್ಯಾಗದ ಮಾತುಗಳನ್ನು ಆಡಿದ್ದಾರೆ. ಬಾದಾಮಿಯಲ್ಲೇ ಮತ್ತೆ ಸ್ರ್ಪಧಿಸಬೇಕು ಎಂದು ಕೆಲವು ನಾಯಕರು ಒತ್ತಡ ಹೇರಿದ್ದಾರೆ.

ಬೆಂಗಳೂರಿನಿಂದ ದೂರ ಇರುವುದರಿಂದ ವಾರಕ್ಕೊಮ್ಮೆ ಹೋಗಿ ಬರಲು ಸಾಧ್ಯವಾಗುವುದಿಲ್ಲ ಎಂಬ ಕಾರಣಕ್ಕೆ ಸಿದ್ದರಾಮಯ್ಯ ಬಾದಾಮಿಯಿಂದ ಹಿಂದೆ ಸರಿಯುವ ಮಾತನಾಡಿದ್ದಾರೆ.

ಇಡಿ ಮುಂದೆ ಡಿ.ಕೆ.ಶಿವಕುಮಾರ್ ಮತ್ತೆ ಹಾಜರು

ಉಳಿದಂತೆ ಚಾಮರಾಜನಗರ, ಹುಣಸೂರು, ಬೆಂಗಳೂರಿನ ಚಾಮರಾಜಪೇಟೆ, ಹೆಬ್ಬಾಳ, ಕೋಲಾರ, ತುಮಕೂರು ಜಿಲ್ಲೆಯ ಚಿ.ನಾ.ಹಳ್ಳಿ ಸೇರಿ ಹಲವು ಕ್ಷೇತ್ರಗಳು ಸಿದ್ದರಾಮಯ್ಯ ಅವರ ಆಯ್ಕೆಯಲ್ಲಿವೆ. ಪ್ರಭಾವಿ ನಾಯಕರಾಗಿರುವ ಸಿದ್ದರಾಮಯ್ಯ ಯಾವುದೇ ಕ್ಷೇತ್ರದಲ್ಲೂ ನಿಂತರೂ ಗೆಲ್ಲುತ್ತಾರೆ ಎಂಬ ಪ್ರತೀತಿ ಇದೆ. ಅನಿರೀಕ್ಷಿತವಾಗಿ ಬಾದಾಮಿಗೆ ವಲಸೆ ಹೋಗಿ ಜಯ ಸಾಧಿಸಿದ್ದ ಸಿದ್ದರಾಮಯ್ಯ, ಈ ಬಾರಿಯೂ ಅದೇ ರೀತಿ ಗೆಲ್ಲುವ ಸಾಮಥ್ರ್ಯ ಹೊಂದಿದ್ದಾರೆ ಎನ್ನಲಾಗಿದೆ. ಆದರೂ ಸಿದ್ದರಾಮಯ್ಯ ಎಚ್ಚರಿಕೆಯ ಹೆಜ್ಜೆ ಇಡಲಾರಂಭಿಸಿದ್ದಾರೆ.

ಹಿತಶತ್ರುಗಳ ಕಾಟ:
ಸಿದ್ದರಾಮಯ್ಯ ಅವರಿಗೆ ಜನಪ್ರಿಯತೆಯಷ್ಟೆ ಹಿತ ಶತ್ರುಗಳ ಕಾಟವೂ ಇದೆ. ಬಿಜೆಪಿ, ಜೆಡಿಎಸ್ ಎದುರಾಳಿಗಳಿಗಿಂತ ಕಾಂಗ್ರೆಸ್‍ನಲ್ಲೇ ಇರುವ ಪ್ರತಿಸ್ರ್ಪಧಿಗಳು ಸಿದ್ದರಾಮಯ್ಯ ಅವರಿಗೆ ತಲೆ ನೋವಾಗಿದ್ದಾರೆ. ಕೆಲವು ಜಿಲ್ಲೆಗಳಲ್ಲಿ ಸಿದ್ದರಾಮಯ್ಯ ಅವರನ್ನು ಸೋಲಿಸಲೇಬೇಕು ಎಂಬ ಷಡ್ಯಂತ್ರ ರೂಪಿಸುವ ನಾಯಕರು ಹೆಚ್ಚಿದ್ದಾರೆ. ಹಾಗಾಗಿ ಸಿದ್ದರಾಮಯ್ಯ ಪ್ರತಿ ಹಂತದಲ್ಲೂ ಎಚ್ಚರಿಕೆಯ ಹೆಜ್ಜೆ ಇಡಲಾರಂಭಿಸಿದ್ದಾರೆ.

ದ್ವಿಕ್ಷೇತ್ರ ಸ್ಪರ್ಧೆ ಅನಿಶ್ಚಿತತೆ:
2013ರಿಂದ 2018ರವರೆಗೂ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯ ನಂತರ ನಡೆದ ಚುನಾವಣೆಯ ಸಂಪೂರ್ಣ ಜವಾಬ್ದಾರಿಯನ್ನು ಹೆಗಲ ಮೇಲೆ ಹೊತ್ತುಕೊಂಡಿದ್ದರು. ಆ ವೇಳೆ ಸಿದ್ದರಾಮಯ್ಯ ಅವರಿಗೆ ದ್ವಿಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಲು ಹೈಕಮಾಂಡ್ ಅವಕಾಶ ನೀಡಿತ್ತು. ಅದರ ಪರಿಣಾಮ ಚಾಮುಂಡೇಶ್ವರಿಯಲ್ಲಿ ಸೋಲು ಕಂಡರು, ಬಾದಾಮಿಯಲ್ಲಿ ಜಯಗಳಿಸಿ ರಾಜಕೀಯ ಭವಿಷ್ಯದಲ್ಲಿ ಸಕ್ರಿಯವಾಗಿ ಉಳಿದುಕೊಂಡರು. ಪ್ರಸ್ತುತ ರಾಜ್ಯದಲ್ಲಿ ರಾಜಕೀಯವಾಗಿ ಕಾಂಗ್ರೆಸ್‍ಗೆ ಪೂರಕ ವಾತಾವರಣ ಇದೆ ಎಂಬ ಮಾತುಗಳಿವೆ. ಹಾಗಾಗಿ ಮುಂದಿನ ಮುಖ್ಯಮಂತ್ರಿ ಹುದ್ದೆಯ ರೇಸ್‍ನಲ್ಲಿ ಸಿದ್ದರಾಮಯ್ಯ ಮುಂಚೂಣಿಯಲ್ಲಿದ್ದಾರೆ. ಈ ಬಾರಿಯ ಗೆಲುವು ಸಿದ್ದರಾಮಯ್ಯ ಅವರಿಗೆ ಬಹಳ ಮುಖ್ಯವಾಗಿದೆ.

ಕಳೆದ ಬಾರಿಯಂತೆ ಸಿದ್ದರಾಮಯ್ಯ ಅವರಿಗೆ ದ್ವಿಕ್ಷೇತ್ರಗಳಲ್ಲಿ ಸ್ರ್ಪಧಿಸಲು ಅವಕಾಶ ಮಾಡಿಕೊಡಬೇಕು ಎಂದು ಸಿದ್ದರಾಮಯ್ಯ ಬೆಂಬಲಿಗರು ಒತ್ತಾಯಿಸುತ್ತಿದ್ದಾರೆ. ಆದರೆ ಅದು ಸಾಧ್ಯವಾಗುವ ಲಕ್ಷಣಗಳು ಕ್ಷೀಣವಾಗಿವೆ.
ಕಳೆದ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಅಚ್ಚುಮೆಚ್ಚಿನವರಾದ ರಾಹುಲ್‍ಗಾಂಧಿ ಎಐಸಿಸಿ ಅಧ್ಯಕ್ಷರಾಗಿದ್ದರು. ಹಾಗಾಗಿ ರಾಜ್ಯ ರಾಜಕಾರಣದಲ್ಲಿ ಸಿದ್ದರಾಮಯ್ಯ ಅವರ ಮಾತುಗಳೇ ವೇದವಾಖ್ಯವಾಗಿದ್ದವು.

ಸಿದ್ದು ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಲು ಬಿಜೆಪಿ ಸಜ್ಜು

ಈಗ ಪರಿಸ್ಥಿತಿ ಬದಲಾಗಿದೆ. ರಾಜ್ಯದವರೇ ಆದ ಮಲ್ಲಿಕಾರ್ಜುನ ಖರ್ಗೆ ಎಐಸಿಸಿ ಅಧ್ಯಕ್ಷರಾಗಿದ್ದಾರೆ. ಅವರಿಗೆ ರಾಜ್ಯ ರಾಜಕಾರಣದಲ್ಲಿ ಪ್ರತಿ ಬೆಳವಣಿಗೆಗಳ ಬಗ್ಗೆ ಹತ್ತಿರದ ಸಂಬಂಧವಿದೆ. ಇದರ ಜೊತೆಗೆ ಇತ್ತೀಚೆಗೆ ರಾಜಸ್ಥಾನದ ಉದಯಪುರ್‍ನಲ್ಲಿ ನಡೆದ ಚಿಂತನ್ ಶಿವಿರ್‍ನ ಘೋಷಣೆಯಲ್ಲಿ ದ್ವಿಕ್ಷೇತ್ರಗಳ ಸ್ಪರ್ಧೆಗೆ ಅವಕಾಶ ನಿರಾಕರಿಸಲಾಗಿದೆ.

ಪಕ್ಷದಲ್ಲಿ ಕೆಲಸ ಮಾಡದೇ ನೇರವಾಗಿ ರಾಜಕೀಯ ಪ್ರವೇಶಿಸುವ ಪ್ರಭಾವಿಗಳ ಮಕ್ಕಳು ಟಿಕೆಟ್ ಪಡೆದು ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಕ್ಕೂ ಕಡಿವಾಣ ಹಾಕಲಾಗಿದೆ.

ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ಅವರಿಗೆ ದ್ವಿಕ್ಷೇತ್ರ ಸ್ಪರ್ಧೆಗೆ ಅವಕಾಶ ಕಷ್ಟಸಾಧ್ಯವಾಗುವ ಸಾಧ್ಯತೆ ಇದೆ. ನಿನ್ನೆ ಕೋಲಾರದಲ್ಲಿ ಸ್ಥಳೀಯ ನಾಯಕರ ಜೊತೆ ಸಮಾಲೋಚನೆ ನಡೆಸಿದ್ದಾರೆ. ಇಂದು ಮೈಸೂರಿಗೆ ಭೇಟಿ ನೀಡಿ ಸ್ಥಳೀಯ ನಾಯಕರ ಜೊತೆಗೆ ಚರ್ಚೆ ಮಾಡುತ್ತಿದ್ದಾರೆ.

G20 ಶೃಂಗಸಭೆಯಲ್ಲಿ ಭಾಗವಹಿಸಲಿದ್ದಾರೆ ಪ್ರಧಾನಿ ಮೋದಿ

ಯಾವ ಕ್ಷೇತ್ರ ಸುರಕ್ಷಿತ ಎಂಬ ಪ್ರಶ್ನೆಗಳು ಸಿದ್ದರಾಮಯ್ಯ ಅವರನ್ನು ಗೊಂದಲಕೀಡು ಮಾಡಿವೆ. ಅಭಿಮಾನಿಗಳು ಮತ್ತು ಆಪ್ತರು ಸಿದ್ದರಾಮಯ್ಯ ಯಾವುದೇ ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿದರೂ ಗೆಲ್ಲುತ್ತಾರೆ ಎಂದು ಹೇಳುತ್ತಾರಾದರೂ ವಾಸ್ತವದಲ್ಲಿ ಸ್ವಪಕ್ಷದಲ್ಲೇ ಇರುವ ಹಿತಶತ್ರುಗಳು ತಂದೊಡ್ಡುವ ಸಂಭವನೀಯ ಅಪಾಯದ ನಿಯಂತ್ರಣಕ್ಕೆ ಪೂರ್ವ ತಯಾರಿ ಆರಂಭಿಸಿದ್ದಾರೆ.

Articles You Might Like

Share This Article