ಕೂಡಲೇ ವಿಧಾನಸಭೆ ಚುನಾವಣೆ ಘೋಷಣೆ ಮಾಡಲು ಸಿದ್ದರಾಮಯ್ಯ ಒತ್ತಾಯ

Social Share

ಬೆಳಗಾವಿ,ಮಾ.3- ರಾಜ್ಯದಲ್ಲಿ ಭ್ರಷ್ಟಚಾರ ಮುಗಿಲು ಮುಟ್ಟಿದ್ದು, ಕೂಡಲೇ ಚುನಾವಣಾ ಆಯೋಗ ಕೂಡಲೇ ರಾಜ್ಯ ವಿಧಾನಸಭೆಗೆ ಚುನಾವಣೆ ಘೋಷಣೆ ಮಾಡಬೇಕು, ನೀತಿ ಸಂಹಿತಿ ಜಾರಿಯಾಗಬೇಕು ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.

ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ಪಕ್ಷದಲ್ಲಿ ಚರ್ಚೆ ಮಾಡಿ ಕೇಂದ್ರ ಚುನಾವಣಾ ಆಯೋಗಕ್ಕೂ ಈ ಬಗ್ಗೆ ದೂರು ನೀಡುತ್ತೇವೆ. ನಮ್ಮ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಈ ಸರ್ಕಾರ ಆರು ತಿಂಗಳಿನಿಂದ ನೀಡಿರುವ ಎಲ್ಲಾ ಟೆಂಡರ್‍ಗಳನ್ನು ಮರು ಪರಿಶೀಲನೆ ಮಾಡುತ್ತೇವೆ ಎಂದು ಎಚ್ಚರಿಸಿದರು.

ಮುಖ್ಯಮಂತ್ರಿ ಹುದ್ದೆಗೆ ನಾನು ಆಕಾಂಕ್ಷಿ, ಇದು ಪ್ರಜಾಪ್ರಭುತ್ವ ಇಲ್ಲಿ ಎಲ್ಲರಿಗೂ ಆಕಾಂಕ್ಷೆ ಇರುತ್ತದೆ. ಆಕಾಂಕ್ಷಿಯೇ ಆಗಬಾರದು ಎಂಬುದಕ್ಕೆ ಇದೇನು ಸರ್ವಾಧಿಕಾರವೇ ?. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಕೂಡ ಆಕಾಂಕ್ಷಿಯಾಗಿದ್ದಾರೆ.

ಶಾಸಕ ಮಾಡಾಳ್ ವಿರೂಪಾಕ್ಷಪ್ಪರ ಪುತ್ರನ ಮನೆಯಲ್ಲಿ 6 ಕೋಟಿ ಹಣ ಪತ್ತೆ

ಅಂತಿಮವಾಗಿ ನಮ್ಮ ಪಕ್ಷದ ಚುನಾಯಿತ ಶಾಸಕರು ನಿರ್ಧರಿಸುತ್ತಾರೆ. ಅದಕ್ಕೆ ಹೈಕಮಾಂಡ್ ಮುದ್ರೆ ಒತ್ತಲಿದೆ. ಕಾಂಗ್ರೆಸ್‍ನಲ್ಲಿ ಪ್ರಜಾಪ್ರಭುತ್ವ ಇದೆ. ಬಿಜೆಪಿಯಲ್ಲಿ ಈ ವ್ಯವಸ್ಥೆ ಇಲ್ಲ. ಹಿಂದೆ ಯಡಿಯೂರಪ್ಪ ಅವರನ್ನು ತೆಗೆದು ಹಾಕುವಾಗ ಬಿಜೆಪಿ ಹೈಕಮಾಂಡ್ ರಾಜ್ಯ ಬಿಜೆಪಿ ಶಾಸಕರ ಅಭಿಪ್ರಾಯ ಕೇಳಿತ್ತೆ ಎಂದು ಪ್ರಶ್ನಿಸಿದರು.

ಬಿಜೆಪಿ ಆಯೋಜಿಸಿದ್ದ ಕಾರ್ಯಕ್ರಮಕ್ಕೆ ಜನರನ್ನು ಕರೆ ತರಲು ಒಂದು ಸಾವಿರ ರೂಪಾಯಿ ಕೊಡುತ್ತೇವೆ ಎಂದು ಹೇಳಿ 500 ರೂಪಾಯಿ ಮಾತ್ರ ಕೊಟ್ಟಿದ್ದಾರೆ. ಉಳಿದ 500 ರೂಪಾಯಿ ಕೊಟ್ಟಿಲ್ಲ ಎಂದು ಬಿಜೆಪಿ ಕಾರ್ಯಕರ್ತರ ನಡುವೆ ಮಾರಾಮಾರಿ ಹೊಡೆದಾಟವಾಗಿದೆ.

ಅದನ್ನು ಉಲ್ಲೇಖಿಸಿ ನಾನು ಬಿಜೆಪಿ ಕಾರ್ಯಕ್ರಮಕ್ಕೆ ದುಡ್ಡುಕೊಟ್ಟು ಜನರನ್ನು ಕರೆ ತರಲಾಗಿದೆ ಎಂದು ಹೇಳಿದ್ದೇನೆ. ಅದನ್ನು ಬಿಜೆಪಿಯವರು ತಿರುಚಿ ಕಾಂಗ್ರೆಸ್ ಕಾರ್ಯಕ್ರಮಕ್ಕೆ ದುಡ್ಡು ಕೊಟ್ಟು ಜನರನ್ನು ಕರೆದುಕೊಂಡು ಬನ್ನಿ ಎಂದು ಹೇಳಿದ್ದೇನೆ ಎಂದು ಪ್ರಸಾರ ಮಾಡಿದ್ದಾರೆ . ಇದು ಸುಳ್ಳು ಎಂದು ಆಕ್ರೋಶ ವ್ಯಕ್ತ ಪಡಿಸಿದರು.

ಟಿಪ್ಪು ಮುಗಿಸಿದ ರೀತಿಯಲ್ಲಿ ಸಿದ್ದರಾಮಯ್ಯರನ್ನು ಮುಗಿಸಿ ಎಂದು ಸಚಿವ ಅಶ್ವಥನಾರಾಯಣ ಹೇಳಿದ್ದಾರೆ. ಇದರ ವಿರುದ್ಧ ಪ್ರಧಾನ ಮಂತ್ರಿ ಒಂದು ಮಾತನ್ನು ಆಡಲಿಲ್ಲ. ಮಂತ್ರಿಯಾಗಿ ಈ ರೀತಿ ಮಾತನಾಡುವುದು ಸರಿಯಲ್ಲ.

ಕೂಡಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡು ಎಂದು ತಾಕೀತು ಮಾಡಬೇಕಿತ್ತು. ಅದನ್ನು ಬಿಟ್ಟು ಕಾಂಗ್ರೆಸಿಗರು ಮರ್ಜಾ ಮೋದಿ ಎಂದು ಹೇಳುತ್ತಿದ್ದಾರೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ಪ್ರಧಾನಿಯಾಗಿ ತಮ್ಮನ್ನೇ ತಾವು ರಕ್ಷಣೆ ಮಾಡಿಕೊಳ್ಳಲಾಗದ ಮೋದಿ ಅವರು ದೇಶಕ್ಕೆ ಹೇಗೆ ರಕ್ಷಣೆ ನೀಡಲು ಸಾಧ್ಯ. ಕೇಂದ್ರ ರಕ್ಷಣಾ ಸಂಸ್ಥೆಗಳು, ಗುಪ್ತಚರ ಸೇರಿದಂತೆ ಎಲ್ಲವೂ ಪ್ರಧಾನಿ ಕೈನಲ್ಲಿದೆ.

ಅವುಗಳನ್ನು ಬಳಸಿಕೊಂಡು ಮರ್ಜಾ ಮೋದಿ ಎಂದು ಕೂಗಿದವರ ವಿರುದ್ಧ ಕ್ರಮ ಕೈಗೊಳ್ಳಲಿ. ಯಾರು ಕೂಗಿದರು ಎಂದು ಬಹಿರಂಗ ಪಡಿಸಿ. ಅದನ್ನು ಬಿಟ್ಟು ತನ್ನ ಸಾವನ್ನು ಬಯಸುತ್ತಿದ್ದಾರೆ ಎಂದು ಆರೋಪಿಸಿರುವುದು ಹಾಸ್ಯಾಸ್ಪದವಾಗಿದೆ ಎಂದರು.

ಸಿಕ್ಕಿಬಿದ್ದ ನಕಲಿ ಕೇಂದ್ರ ಸಚಿವ

ಈಶಾನ್ಯ ರಾಜ್ಯಗಳಲ್ಲಿ ಯಾವಾಗಲೂ ಕೇಂದ್ರದಲ್ಲಿ ಆಡಳಿತ ನಡೆಸುವ ಸರ್ಕಾರದ ಪಕ್ಷಗಳ ಪರವಾಗಿಯೇ ಮತದಾನವಾಗುತ್ತದೆ. ಈ ಹಿಂದೆ ಕಾಂಗ್ರೆಸ್ ಆಡಳಿತವಿದ್ದಾಗ ಕಾಂಗ್ರೆಸ್ ಗೆಲ್ಲುತ್ತಿತ್ತು. ಈಗ ಬಿಜೆಪಿ ಅಧಿಕಾರದಲ್ಲಿದೆ ಬಿಜೆಪಿ ಗೆದ್ದಿದೆ. ಅದು ನಿರೀಕ್ಷಿತ ಫಲಿತಾಂಶ ಎಂದರು.

ಯಡಿಯೂರಪ್ಪರನ್ನು ಮುಖ್ಯಮಂತ್ರಿ ಹುದ್ದೆಯಿಂದ ತೆಗೆದು ಹಾಕಲಾಗಿದೆ. ಯಡಿಯೂರಪ್ಪ ಸ್ವಯಿಚ್ಚೆಯಿಂದ ಅಧಿಕಾರ ತ್ಯಾಗ ಮಾಡಿದ್ದರೆ ರಾಜೀನಾಮೆ ನೀಡುವಾಗ ಕಣ್ಣೀರು ಹಾಕಿದ್ದೇಕೆ. ವಯಸ್ಸಾಗಿದೆ ಎಂದಾದರೆ ಪ್ರಧಾನಿ ನರೇಂದ್ರ ಮೋದಿ ಅವರಿಗೂ 72 ವರ್ಷವಾಗಿದೆ, ಅವರನ್ನೇಕೆ ಹುದ್ದೆಯಿಂದ ಇಳಿಸಿಲ್ಲ. ಮುಂದೆಯೂ ಮತ್ತೊಂದು ಅವಧಿಗೆ ಅವರನ್ನೇ ಪ್ರಧಾನಿಯಾಗಿ ಮುಂದುವರೆಸುತ್ತೇವೆ ಎಂದು ಬಿಜೆಪಿಯವರು ಹೇಳುತ್ತಿದ್ದಾರೆ.

ಯಡಿಯೂರಪ್ಪರನ್ನು ಮುಖ್ಯಮಂತ್ರಿ ಹುದ್ದೆಯಿಂದ ಕಿತ್ತು ಹಾಕಿದ್ದೇಕೆ ಎಂದು ಬಿಜೆಪಿ ಸ್ಪಷ್ಟಪಡಿಸಲಿ ಎಂದು ಒತ್ತಾಯಿಸಿದರು.

ಬೆಳಗಾವಿ ಗ್ರಾಮೀಣ ಕ್ಷೇತ್ರದಲ್ಲಿ ಶಿವಾಜಿ ಪ್ರತಿಮೆ ನಿರ್ಮಾಣಕ್ಕೆ ಹಣ ಕೊಟ್ಟಿದ್ದೇನೆ ಎಂದು ನಾನು ಎಲ್ಲಿಯೂ ಹೇಳಿಲ್ಲ. ನನ್ನ ಬಳಿ ಬಂದು ಯಾರು ಹಣ ಕೇಳಿರಲಿಲ್ಲ. ಶಿವಾಜಿ ಪ್ರತಿಮೆ ಮಾಡಿಸಿದ್ದ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್, ಉದ್ಘಾಟನೆ ಮಾಡಿದ್ದು ಬಿಜೆಪಿ ಮುಖ್ಯಮಂತ್ರಿ ಬಸವರಾಜಬೊಮ್ಮಾಯಿ.

ಫರಿದಾಬಾದ್ : ಭೀಕರ ರಸ್ತೆ ಅಪಘಾತದಲ್ಲಿ 6 ಜನ ಸಾವು

ಸರ್ಕಾರಿ ಕಾರ್ಯಕ್ರಮ ಅಂದ ಮೇಲೆ ಸ್ಥಳೀಯ ಶಾಸಕಿಯೇ ಆಯೋಜನೆ ಮಾಡಬೇಕಿತ್ತು. ಇಲ್ಲಿ ಪರಿಸ್ಥಿತಿ ತಿರುವು ಮುರುವಾಗಿದೆ, ಮುಖ್ಯಮಂತ್ರಿ ಕಾರ್ಯಕ್ರಮ ಮಾಡಿ ಶಾಸಕಿಯನ್ನು ಕರೆಯುವುದು ಶಿಷ್ಟಾಚಾರ ಉಲ್ಲಂಘಟನೆ. ಉಳಿದ ಕ್ಷೇತ್ರಗಳ ಬಿಜೆಪಿ ಶಾಸಕರು ಕಾರ್ಯಕ್ರಮದಲ್ಲಿ ಯಾಕಿದ್ದರು ಎಂದು ಪ್ರಶ್ನಿಸಿದರು.

Siddaramaiah, immediately, announce, assembly, elections,

Articles You Might Like

Share This Article