ಸಿದ್ದು ವಿರುದ್ಧ ಪ್ರಬಲ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಲು ಬಿಜೆಪಿ ಸಜ್ಜು

Social Share

ಬೆಂಗಳೂರು,ನ.14- ಒಂದು ವೇಳೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೋಲಾರದಿಂದ ಕಣಕ್ಕಿಳಿಯುವುದೇ ಆದರೆ ಬಿಜೆಪಿ ಪ್ರಬಲ ಅಭ್ಯರ್ಥಿಯನ್ನು ಅಖಾಡಕ್ಕಿಳಿಸಲು ಸಜ್ಜಾಗಿದೆ.

ಶತಾಯಗತಾಯ 2023ರ ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರನ್ನು ಕಟ್ಟಿ ಹಾಕಲೇಬೇಕೆಂದು ತೀರ್ಮಾನಿಸಿರುವ ಬಿಜೆಪಿ ಕೋಲಾರದಿಂದ ಮಾಜಿ ಸಚಿವ ವರ್ತೂರು ಪ್ರಕಾಶ್ ಇಲ್ಲವೇ ಪರ್ಯಾಯ ಪ್ರಬಲ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಚಿಂತನೆ ನಡೆಸಿದೆ.

ಕೊನೆಯ ಕ್ಷಣದವರೆಗೂ ಅಭ್ಯರ್ಥಿ ಹೆಸರನ್ನು ಬಿಟ್ಟುಕೊಡದ ಬಿಜೆಪಿ ವರ್ತೂರು ಪ್ರಕಾಶ್‍ಗೆ ಈಗಾಗಲೇ ಪಕ್ಷದ ಸಂಘಟನೆ ಹಾಗೂ ಚುನಾವಣೆಗೆ ಬೇಕಾದ ಸಿದ್ದತೆಗಳನ್ನು ಕೈಗೊಳ್ಳುವಂತೆ ಸೂಚಿಸಿದೆ. ಒಂದು ವೇಳೆ ವರ್ತೂರು ಪ್ರಕಾಶ್ ಕೊನೆ ಕ್ಷಣದಲ್ಲಿ ಮನಸ್ಸು ಬದಲಾಯಿಸಿ ಕಣದಿಂದ ಹಿಂದೆ ಸರಿದರೆ ಎಂಬ ಚಿಂತೆಯು ಬಿಜೆಪಿಗೆ ಕಾಡುತ್ತಿದ್ದು, ಪರ್ಯಾಯ ಅಭ್ಯರ್ಥಿಯನ್ನು ಸಹ ಸದ್ದಿಲ್ಲದೆ ಅಖಾಡಕ್ಕಿಳಿಸಲು ಮುಂದಾಗಿದೆ.

ಟರ್ಕಿ ರಾಜಧಾನಿ ಇಸ್ತಾನ್‍ಬುಲ್‍ನಲ್ಲಿ ಬಾಂಬ್ ಸ್ಪೋಟ, 6 ಮಂದಿ ಸಾವು

ಈ ಹಿಂದೆ 2018ರ ವಿಧಾನಸಭೆ ಚುನಾವಣೆಯಲ್ಲಿ ಬಾದಾಮಿಯಿಂದ ಸ್ರ್ಪಧಿಸಿದ್ದ ಸಿದ್ದರಾಮಯ್ಯ ವಿರುದ್ಧ ಹಾಲಿ ಸಚಿವ ಬಿ.ಶ್ರೀರಾಮುಲು ಅವರನ್ನು ಕಣಕ್ಕಿಳಿಸಿತು. ಅಂತಿಮ ಕ್ಷಣದಲ್ಲಿ ತುಸು ಎಡವಟ್ಟು ಮಾಡಿಕೊಂಡ ಪರಿಣಾಮ ಸಿದ್ದರಾಮಯ್ಯ ಕೆಲವೇ ಕೆಲವು ಮತಗಳ ಅಂತರದಿಂದ ಗೆಲುವು ಸಾಧಿಸಿದರು.

ಈ ಬಾರಿ ಇದಕ್ಕೆ ಅವಕಾಶ ಕೊಡಲೇಬಾರದೆಂದು ತೀರ್ಮಾನಿಸಿರುವ ಬಿಜೆಪಿ ಈಗಾಗಲೇ ವರ್ತೂರು ಪ್ರಕಾಶ್ ಅವರನ್ನೇ ಅಭ್ಯರ್ಥಿ ಎಂದು ಪರೋಕ್ಷವಾಗಿ ಘೋಷಿಸಿದೆ.

ಇದಕ್ಕೆ ನಿದರ್ಶನವೆನ್ನುವಂತೆ ಭಾನುವಾರ ಸಿದ್ದರಾಮಯ್ಯ ಆವರಿಸಿದ ಸಂದರ್ಭದಲ್ಲಿ ವರ್ತೂರು ಪ್ರಕಾಶ್ ತಮ್ಮ ಬೆಂಬಲಿಗರ ಮೂಲಕ ಬೈಕ್ ರ್ಯಾಲಿ ನಡೆಸಿ ಶಕ್ತಿ ಪ್ರದರ್ಶಿಸಿದ್ದರು. ವರುಣಾ ಇಲ್ಲವೇ ಕೋಲಾರದಿಂದ ಸಿದ್ದರಾಮಯ್ಯ ಸ್ರ್ಪಧಿಸಿದರೆ ಅವರನ್ನು ಸಂಪೂರ್ಣವಾಗಿ ಕಟ್ಟಿ ಹಾಕಿದರೆ ಪಕ್ಷಕ್ಕೆ ಲಾಭ ಬರಲಿದೆ ಎಂದು ಬಿಜೆಪಿ ಲೆಕ್ಕಾಚಾರವಾಗಿದೆ.

ಪ್ರಬಲ ಹಿಂದುಳಿದ ವರ್ಗದ ನಾಯಕರಾಗಿರುವ ಸಿದ್ದರಾಮಯ್ಯ ಅವರನ್ನು ಒಂದೇ ಕ್ಷೇತ್ರಕ್ಕೆ ಹೈಕಮಾಂಡ್ ಸೀಮಿತಗೊಳಿಸಿ ಕೋಲಾರದಿಂದಲೆ ಕಣಕ್ಕಿಳಿಯುವಂತೆ ಸೂಚಿಸಿದರೆ ವರ್ತೂರು ಪ್ರಕಾಶ್ ಬಿಜೆಪಿ ಅಭ್ಯರ್ಥಿಯಾಗುವುದು ಪ್ರಬಲ ಎನ್ನಲಾಗುತ್ತಿದೆ.

ಸಂಗೊಳ್ಳಿ ರಾಯಣ್ಣ ಸಮಾಧಿಗೆ ತರಳಬಾಳು ಶ್ರೀಗಳಿಂದ ಗೌರವ ಪ್ರಾರ್ಥನೆ

ಒಂದು ವೇಳೆ ಸಮುದಾಯದ ಒತ್ತಡಕ್ಕೆ ಮಣಿದು ವರ್ತೂರು ಪ್ರಕಾಶ್ ಸ್ರ್ಪಧಿಸುವುದಿಲ್ಲ ಎಂದರೆ ಉಂಟಾಗಬಹುದಾದ ಮುಜುಗರನ್ನು ತಪ್ಪಿಸಿಕೊಳ್ಳಲು ಬಿಜೆಪಿ ಮತ್ತೊಬ್ಬ ಪ್ರಬಲ ಅಭ್ಯರ್ಥಿಯನ್ನು ಹಾಕಲು ಕಸರತ್ತು ನಡೆಸಿದೆ.

ಬಿಜೆಪಿ ಟಾರ್ಗೆಟ್ ಮಾಡಿರುವ ಕ್ಷೇತ್ರಗಳಲ್ಲಿ ವರುಣಾ, ಕೋಲಾರ, ಬಾದಾಮಿ, ಕನಕಪುರ, ರಾಮನಗರ, ಚನ್ನಪಟ್ಟಣ, ಚಿತ್ತಾಪುರ ಸೇರಿದಂತೆ ಕಾಂಗ್ರೆಸ್‍ನ ಪ್ರಭಾವಿ ನಾಯಕರ 15 ಕ್ಷೇತ್ರಗಳಲ್ಲಿ ಸಮರ್ಥನೀಯವಾದ ಅಭ್ಯರ್ಥಿಯನ್ನೇ ಕಣಕ್ಕಿಳಿಸಬೇಕೆಂದು ಬಿಜೆಪಿ ಹೈಕಮಾಂಡ್ ಸೂಚಿಸಿದೆ.

ರಾತ್ರೋ ರಾತ್ರಿ ನಂ.1 ತಂಡ ಕಟ್ಟಲಾಗಲ್ಲ : ಸಚಿನ್

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಕಾಂಗ್ರೆಸ್‍ನ ನಾಯಕರಾದ ಎಂ.ಬಿ.ಪಾಟೀಲ್, ಪ್ರಿಯಾಂಕ ಖರ್ಗೆ, ಕೃಷ್ಣಭೈರೇಗೌಡ, ಯು.ಟಿ.ಖಾದರ್ ಆರ್.ವಿ.ದೇಶಪಾಂಡೆ, ಕೆ.ಜೆ.ಜಾರ್ಜ್, ಡಾ.ಜಿ.ಪರಮೇಶ್ವರ್, ಸತೀಶ್ ಜಾರಕಿಹೊಳಿ, ರಮೇಶ್‍ಕುಮಾರ್ ಸೇರಿದಂತೆ 15 ನಾಯಕರನ್ನು ಶತಾಯಗತಾಯ ಸೋಲಿಸಲೇಬೇಕೆಂದು ಪಣ ತೊಟ್ಟಿದೆ.

ಈ ಎಲ್ಲ ಕ್ಷೇತ್ರಗಳಿಗೂ ಪ್ರಬಲ ಅಭ್ಯರ್ಥಿ, ಸಂಪನ್ಮೂಲ, ಆಚಾರ, ಚುನಾವಣಾ ಕಾರ್ಯತಂತ್ರ ಸೇರಿದಂತೆ ಪ್ರತಿಯೊಂದು ಕೂಡ ವರಿಷ್ಠರ ನಿರ್ದೇಶನದಂತೆ ನಡೆಯಲಿದೆ.

Articles You Might Like

Share This Article