ದಿಕ್ಕು ಕಾಣದ ರಾಜಕಾರಣಿ ಸಿದ್ದರಾಮಯ್ಯ :ಆಶೋಕ್ ಟೀಕೆ

Social Share

ಬೆಂಗಳೂರು, ಜ.12- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಒಂದು ರೀತಿ ದಿಕ್ಕು ಕಾಣದಿರುವ ರಾಜಕಾರಣಿ ಎಂದು ಟೀಕಿಸಿರುವ ಕಂದಾಯ ಸಚಿವ ಆರ್.ಅಶೋಕ್ ಅವರು, ಬಾದಾಮಿ ಕ್ಷೇತ್ರ ದಂತೆ ಕೋಲಾರ ಕ್ಷೇತ್ರದಲ್ಲೂ ಓಡಿಸುತ್ತಾರೆ ಎಂದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಚಾಮುಂಡೇಶ್ವರಿ ಕ್ಷೇತ್ರದ ಅಭಿವೃದ್ಧಿ ಮಾಡದ ಹಿನ್ನೆಲೆಯಲ್ಲಿ ಹೀನಾಯ ಸೋಲು ಅನುಭವಿಸಿದ್ದರು. ಬಾದಾಮಿಯಲ್ಲಿ ಅಭಿವೃದ್ಧಿ ಕಾರ್ಯ ಮಾಡಿದ್ದರೆ, ಜನರು ಯಾಕೆ ಓಡಿಸುತ್ತಿದ್ದರು ಎಂದು ಪ್ರಶ್ನಿಸಿದರು.

ಕಾಂಗ್ರೆಸ್ ಮುಖಂಡ ಚಿಮ್ಮನಕಟ್ಟಿ ಅವರು, ವೇದಿಕೆ ಮೇಲೆಯೇ ಮೋಸ ಮಾಡಿದರು ಅಂತಾ ಹೇಳಿ ದರು. ಚಿಮ್ಮನ ಕಟ್ಟಿ ಅವರೇ ವೇದಿಕೆ ಮೇಲಿಂದ ಓಡಿಸಿದರು. ಈಗ ಕೋಲಾರದಲ್ಲಿ ಓಡಿಸುತ್ತಾರೆ. ಸಿದ್ದರಾಮಯ್ಯ ಕೆಲಸ ಮಾಡಿದ್ದರೆ, ಸವಾಲು ಹಾಕಿ ಬಾದಾಮಿಯಲ್ಲಿ ಸ್ಪರ್ಧೆ ಮಾಡುತ್ತಿದ್ದರು. ಈಗ ಕೋಲಾರಕ್ಕೆ ಬಂದಿದ್ದಾರೆ.

ಕ್ಷೇತ್ರಾಂತರ ಮಾಡಿ ಕೊಂಡು ಓಡಾಡುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಮಾಜಿ ಉಪ ಮುಖ್ಯಮಂತ್ರಿ
ಡಾ.ಜಿ.ಪರಮೇಶ್ವರ್, ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಅವರನ್ನು ಚುನಾ ವಣೆಯಲ್ಲಿ ಸೋಲಿಸಿದರು ಎಂದು ಆರೋಪಿಸಿದ ಅವರು, ಇಬ್ಬರೂ ನಿಮ್ಮನ್ನು ಸೋಲಿಸಲು ಕಾಯುತ್ತಿದ್ದಾರೆ. ಎಚ್ಚರದಿಂದ ಇರಿ ಎಂದರು.

ಒಂದು ಕಡೆ ನಿಂತು ರಾಜಕಾರಣ ಮಾಡಿ. ಕ್ಷೇತ್ರದ ಜನತೆ ಮೇಲೆ ವಿಶ್ವಾಸ ಇಡಿ, ಇಂತಹ ಕೆಲಸ ಮಾಡಿಕೊಡುವೆ ಎಂಬ ಭರವಸೆ ನೀಡಿ. ಅದು ಬಿಟ್ಟು ಕೆಲಸ ಮಾಡದೆ ಕ್ಷೇತ್ರದಿಂದ ಕ್ಷೆತ್ರಕ್ಕೆ ಅಲೆ ಯುತ್ತಿದ್ದೀರಿ. ನೆಲೆ ಇಲ್ಲದ ಸಿದ್ದರಾಮಯ್ಯ ಅವರು, ಬಾದಾಮಿ, ಚಾಮುಂಡೇಶ್ವರಿ ಕ್ಷೇತ್ರಕ್ಕಿಂತಲ್ಲೂ ಕೋಲಾರದಲ್ಲಿ ಪರದಾಟ ಪಡುತ್ತೀರಿ. ಕೋಲಾರದ ಶಾಸಕ ಶ್ರೀನಿವಾಸ ಗೌಡರಿಗೆ ಆಮಿಷ ಒಡ್ಡಿರೋದು ಎಲ್ಲರಿಗೂ ಗೊತ್ತಾಗಿದೆ ಎಂದು ವಾಗ್ದಾಳಿ ನಡೆಸಿದರು.

ವಿವೇಕಾನಂದರ ಆಶಯದಂತೆ ರಾಷ್ಟ್ರೀಯ ಶಿಕ್ಷಣ ನೀತಿ: ಸಚಿವ ಅಶ್ವತ್ಥನಾರಾಯಣ

ಬಸ್ ಯಾತ್ರೆ ಪ್ಯಾಕೇಜ್ ಯಾತ್ರೆ ಯಾಗಿದೆ. ಕ್ಷೇತ್ರಕ್ಕೆ ಹೋಗೋದು ಪ್ಯಾಕೇಜ್ ಘೋಷಣೆ ಮಾಡೋದು. ಕಾಂಗ್ರೆಸ್ ಕ್ಷೇತ್ರದಲ್ಲಿ ಕಾಣೆಯಾಗಿದೆ.

ಭಾರತದಲ್ಲಿ ಕಾಂಗ್ರೆಸ್ ಮುಳುಗುತ್ತಿದೆ. ಚುನಾವಣೆ ಆದ ಬಳಿಕ ಕಾಂಗ್ರೆಸ್ ರಾಜ್ಯದಲ್ಲಿ ಇರೋದಿಲ್ಲ. ಸಿದ್ದರಾಮಯ್ಯ ಅವರಿಗೆ ಹಿತೈಶಿಯಾಗಿ ಅಂತಲಾದರೂ ತಿಳಿ ಯಲಿ, ಶತ್ರು ಅಂತಲಾದರೂ ತಿಳಿಯಲಿ. ನಾವು ಜನರಿಗೆ ಕೆಲಸ ಮಾಡಿದರೆ ಯಾಕೆ ಸೋಲಿಸುತ್ತಾರೆ ಎಂದು ಪ್ರಶ್ನಿಸಿದರು.

siddaramaiah, Kolar, constituency, Minister, Ashok,

Articles You Might Like

Share This Article