ವಿಶೇಷ ಬಸ್‍ನಲ್ಲಿ ಕೋಲಾರಕ್ಕೆ ಬಂದ ಸಿದ್ದರಾಮಯ್ಯ

Social Share

ಬೆಂಗಳೂರು, ನ.13- ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವಂತೆ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಚುರುಕುಗೊಳ್ಳುತ್ತಿದ್ದು, ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ತಮ್ಮ ಕ್ಷೇತ್ರದ ಕುರಿತು ಸೂಕ್ತ ನಿರ್ಧಾರ ಕೈಗೊಳ್ಳಲು ಇಂದು ಕೋಲಾರ ಪ್ರವಾಸ ಕೈಗೊಂಡಿದ್ದಾರೆ.

ವಿಶೇಷವಾಗಿ ರೂಪಿಸಲಾಗಿರುವ ವಿಶೇಷ ಬಸ್‍ನಲ್ಲಿ ಇಂದು ಬೆಳಗ್ಗೆ ಕೋಲಾರಕ್ಕೆ ತೆರಳಿದರು. ಅಲ್ಲಿ ಸುಮಾರು 10ಕ್ಕೂ ಹೆಚ್ಚು ಆಯಕಟ್ಟಿನ ಸ್ಥಳಗಳಿಗೆ ಭೇಟಿ ನೀಡಿದರು. ಕೋಲಾರ ನಗರದ ಕೋಲಾರಮ್ಮ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿ ನಂತರ ಮೆಥೋಡಿಸ್ಟ್ ಚರ್ಚ್‍ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು. ನಂತರ ಕಾಲೇಜು ವೃತ್ತದಲ್ಲಿ ವಾಲ್ಮಿಕಿ ಮಹರ್ಷಿ ಪ್ರತಿಮೆ, ನಂತರ ಇಟಿಸಿಎಂ ಸರ್ಕಲ್‍ನಲ್ಲಿರುವ ಸಂಗೋಳ್ಳಿರಾಯಣ್ಣ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದರು.

ಮಹಾತ್ಮಗಾಂಧಿ ಹಾಗೂ ಅಂಬೇಡ್ಕರ್ ಪ್ರತಿಮೆಗಳಿಗೂ ಮಾಲಾರ್ಪಣೆ ಮಾಡಿದ ಬಳಿಕ ಕ್ಲಾಕ್‍ಟವರ್ ಬಳಿ ಕುತುಬ್ ಶಾ ದರ್ಗಾಕ್ಕೆ ಭೇಟಿ ನೀಡಿ ನಂತರ ಕೈವಾರ ತಾತಯ್ಯ ವಿಗ್ರಹಕ್ಕೂ ಮಾಲಾರ್ಪಣೆ ಮಾಡಿದರು. ನಂತರ ಕೆ.ಸಿ.ವ್ಯಾಲಿ ಯೋಜನೆಯಿಂದ ಸೃಷ್ಟಿಯಾದ ನರಸಾಪುರ ಕೆರೆಗೆ ಭೇಟಿ ನೀಡಿ ಪರಿಶೀಲಿಸಿದರು.

ತೈವಾನ್ ಸಮೀಪ ಹಾರಾಡಿದ 36 ಚೀನೀ ಫೈಟರ್ ಜೆಟ್‌ಗಳು

ಮಾಜಿ ಸಚಿವರಾದ ಎಂ.ಆರ್.ಸೀತಾರಾಮ್, ಶಾಸಕ ಬೈರತಿ ಸುರೇಶ್, ಮಾಜಿ ಶಾಸಕರಾದ ಸುಧಾಕರ್, ವಿ.ಮುನಿಯಪ್ಪ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು. ಚುನಾವಣಾ ಪ್ರಚಾರಕ್ಕಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಿರುವ ಐಷಾರಾಮಿ ಬಸ್‍ನಲ್ಲಿ 8 ಆಸನಗಳಿದ್ದು, ಇಂದು ಸಿದ್ದರಾಮಯ್ಯ ಪ್ರಯೋಗಾರ್ಥ ಬಸ್‍ನಲ್ಲಿ ಪ್ರಯಾಣ ಮಾಡಿದರು.

ಆರಂಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಇಂದು ತಾವು ಕೋಲಾರಕ್ಕೆ ತೆರಳುತ್ತಿದ್ದು, ಅಲ್ಲಿ ಸ್ಥಳೀಯ ನಾಯಕರ ಜತೆ ಚರ್ಚೆ ನಡೆಸುವುದಾಗಿ ಹೇಳಿದರು. ಹಾಲಿ ಶಾಸಕರಾಗಿರುವ ಶ್ರೀನಿವಾಸ್‍ಗೌಡ ಅವರು ಮುಂದಿನ ಚುನಾವಣೆಯಲ್ಲಿ ಸ್ರ್ಪಧಿಸುವುದಿಲ್ಲ ಎಂದು ಹೇಳಿದ್ದಾರೆ. ಅವರು ಕಾಂಗ್ರೆಸ್‍ಗೆ ಬರಲಿದ್ದಾರೆ. ಅಭ್ಯರ್ಥಿಗಳ ಕೊರತೆ ಇರುವುದರಿಂದ ತಮಗೆ ಆಹ್ವಾನ ನೀಡುತ್ತಿದ್ದು, ಅಲ್ಲಿಂದಲೇ ಸ್ರ್ಪಧಿಸುವಂತೆ ಒತ್ತಡ ಹೇರಲಾಗುತ್ತಿದೆ ಎಂದರು.

ಟೈರ್ ಸ್ಪೋಟಗೊಂಡು ಸುಟ್ಟು ಕರಕಲಾದ ಖಾಸಗಿ ಬಸ್

ತಾವಿನ್ನು ನಾಯಕರ ಜತೆ ಚರ್ಚೆ ಮಾಡಲು ತೆರಳುತ್ತಿದ್ದೇವೆ. ನಾಮಪತ್ರ ಸಲ್ಲಿಸಲು ಹೋಗುತ್ತಿಲ್ಲ. ಮೊದಲು ಚರ್ಚಿಸಿ ನಂತರ ನಿರ್ಧಾರ ಕೈಗೊಳ್ಳಲಾಗುವುದು. ಬಾದಾಮಿ, ವರುಣ, ಹೆಬ್ಬಾಳ, ಸೇರಿದಂತೆ ಹಲವು ಕ್ಷೇತ್ರಗಳಿಂದ ತಮಗೆ ಆಹ್ವಾನ ಬಂದಿತ್ತು.

ಇಲ್ಲಿಂದಲೇ ಸ್ಪರ್ಧೆ ಮಾಡಿ ಎಂಬ ಒತ್ತಡ ಹಾಕುತ್ತಿದ್ದಾರೆ. ಅದರಲ್ಲೂ ಕೋಲಾರದಿಂದ ಹೆಚ್ಚು ಒತ್ತಡ ಬರುತ್ತಿದೆ. ಹೀಗಾಗಿ ಅಲ್ಲಿಗೆ ಭೇಟಿ ನೀಡುತ್ತಿದ್ದೇನೆ ಎಂದು ಹೇಳಿದರು.

Articles You Might Like

Share This Article