ಬೆಂಗಳೂರು,ಫೆ.10 – ರಾಜ್ಯ ವಿಧಾನ ಮಂಡಲದ ಜಂಟಿ ಅಧಿವೇಶನಕ್ಕೆ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಅವರು ಗೈರು ಹಾಜರಾಗಿದ್ದರು.
ರಾಜ್ಯಪಾಲರ ಭಾಷಣದ ವೇಳೆ ಕಾಂಗ್ರೆಸ್ ಕುರ್ಚಿಗಳು ಖಾಲಿ ಖಾಲಿ
ವಿರೋಧ ಪಕ್ಷದ ಉಪನಾಯಕ ಯು.ಟಿ ಖಾದರ್, ಜೆಡಿಎಸ್ ಶಾಸಕಾಂಗ ಪಕ್ಷದ ಉಪನಾಯಕ ಬಂಡ್ಯಪ್ಪ ಕಾಂಶಪೂರ್ ಭಾಗಿಯಾಗಿದ್ದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಜಾಧ್ವನಿ ಯಾತ್ರೆಯ ಪ್ರವಾಸದಲ್ಲಿದ್ದಾರೆ. ಅದೇ ರೀತಿ ಮಾಜಿ ಸಿಎಂ ಎಚ್‍ಡಿ ಕುಮಾರ ಸ್ವಾಮಿ ಪಂಚರತ್ನ ರಥ ಯಾತ್ರೆ ಪ್ರವಾಸದಲ್ಲಿರುವುದರಿಂದ ಸದನಕ್ಕೆ ಗೈರಾಗಿದ್ದರು.
ಸರ್ಕಾರಕ್ಕೆ ರಾಜ್ಯಪಾಲರ ಶಭಾಷ್‍ಗಿರಿ
ಬೆಳಗಾವಿ ಜಿಲ್ಲೆಯ ಶಾಸಕರಾದ ರಮೇಶ್ ಜಾರಕಿಹೊಳಿ, ಸತೀಶ್ ಜಾರಕಿಹೊಳಿ , ಲಕ್ಷ್ಮೀ ಹೆಬ್ಬಾಳ್ಕರ್ ಅವರ ಹಾಜರಾತಿಯೂ ಸದನದಲ್ಲಿ ಕಂಡುಬರಲಿಲ್ಲ.
Siddaramaiah, Kumaraswamy, joint session,