ದೇಶಪಾಂಡೆ ಅಜಾತ ಶತ್ರು : ಸಿದ್ದರಾಮಯ್ಯ ಬಣ್ಣನೆ

Social Share

ಬೆಳಗಾವಿ, ಡಿ.28- ಅಜಾತಶತ್ರು ಹಾಗೂ ಆಡುಮುಟ್ಟದ ಸೊಪ್ಪಿಲ್ಲ ಎಂಬಂತೆ ಹಲವು ಖಾತೆಗಳನ್ನು ಸಮರ್ಥವಾಗಿ ನಿಭಾಯಿಸಿರುವ ಹಿರಿಯ ಶಾಸಕ ದೇಶಪಾಂಡೆ ಅವರಿಗೆ ಅತ್ಯುತ್ತಮ ಶಾಸಕ ಪ್ರಶಸ್ತಿ ನೀಡಿ ಗೌರವಿಸಿರುವುದು ಅತ್ಯಂತ ಸ್ತುತ್ಯಾರ್ಹವಾಗಿದೆ ಎಂದು ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ವಿಧಾನಸಭೆಗೆ ತಿಳಿಸಿದರು.

ಹಿರಿಯ ಶಾಸಕ ಆರ್.ವಿ.ದೇಶಪಾಂಡೆ ಅವರನ್ನು ಅಭಿನಂದಿಸಿ ಮಾತನಾಡಿದ ಅವರು, ಸ್ನೇಹಜೀವಿಯಾದ ದೇಶಪಾಂಡೆ ಎಲ್ಲ ರಾಜಕಾರಣಿಗಳೊಂದಿಗೆ ಅತ್ಯಂತ ಆಪ್ತವಾಗಿ ನಡೆದುಕೊಳ್ಳುತ್ತಾರೆ. ಶ್ರಮಜೀವಿಯಾಗಿರುವ ಅವರು, ತಮಗೆ ವಹಿಸುವ ಕೆಲಸವನ್ನು ಅತ್ಯಂತ ಶ್ರದ್ಧೆ ಮತ್ತು ನಿಷ್ಠೆಯಿಂದ ಮಾಡುವ ಛಾತಿ ರೂಢಿಸಿಕೊಂಡಿದ್ದಾರೆ ಎಂದು ಶ್ಲಾಘಿಸಿದರು.

ಎಂಟು ಬಾರಿ ಶಾಸಕರಾಗಿರುವ ಅವರು, ರಾಜ್ಯ, ದೇಶದ ಒಳಿತಿಗಾಗಿ ಹಗಲಿರುಳು ಶ್ರಮಿಸಿದ್ದಾರೆ. ವಿಧಾನಸಭೆಗೆ ನಿರಂತರವಾಗಿ ಹಾಜರಾಗಿ ಅರ್ಥಪೂರ್ಣ ಚರ್ಚೆಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ವಿಶೇಷವಾಗಿ ಹನ್ನೆರಡು ವರ್ಷ ಕೈಗಾರಿಕಾ ಸಚಿವರಾಗಿ ಕೈಗಾರಿಕಾ ಬೆಳವಣಿಗೆಗೆ ತಮ್ಮದೇ ಕೊಡುಗೆ ನೀಡಿದ್ದಾರೆ ಎಂದರು.

ಮಾಜಿ ಸಚಿವ ಆರ್.ವಿ.ದೇಶಪಾಂಡೆ ಅತ್ಯುತ್ತಮ ಶಾಸಕ ಪ್ರಶಸ್ತಿ

ಇತ್ತೀಚಿನ ದಿನಗಳಲ್ಲಿ ಸದನದಲ್ಲಿ ಚರ್ಚೆಯ ಗುಣಮಟ್ಟ ಕಡಿಮೆಯಾಗುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ. ಆದರೆ, ದೇಶಪಾಂಡೆ ಅವರು ಚರ್ಚೆಯ ಗುಣಮಟ್ಟ ಹಾಗೂ ಸದನದ ಗೌರವ ಎತ್ತಿಹಿಡಿಯುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ ಎಂದು ಅಭಿನಂದಿಸಿದರು.

ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ದೇಶಪಾಂಡೆ, ತಮ್ಮನ್ನು ಆಯ್ಕೆ ಮಾಡಿದ ಸಭಾಧ್ಯಕ್ಷರ ನೇತೃತ್ವದ ಸಮಿತಿಯ ಎಲ್ಲ ಸದಸ್ಯರಿಗೆ ಕೃತಜ್ಞತೆ ಸಲ್ಲಿಸುವುದಾಗಿ ತಿಳಿಸಿದರು. ಸಾರ್ವಜನಿಕ ಜೀವನದಲ್ಲಿ ಮೌಲ್ಯಗಳು ಕಡಿಮೆಯಾಗುತ್ತಿವೆ. ರಾಜಕಾರಣಿಗಳ ಬಗ್ಗೆ ಮೊದಲಿದ್ದ ಗೌರವ ಈಗಿಲ್ಲ. ಇದಕ್ಕೆ ನಾವು ಮತ್ತು ಜನರು ಕಾರಣ. ನಾವು ಶಾಸಕರಾಗಿ ಆಯ್ಕೆಯಾಗಿ ಬಂದ ನಂತರ ಜನಸೇವೆ ಮಾಡುವುದು ನಮ್ಮ ಕರ್ತವ್ಯ ಎಂದು ಭಾವಿಸಬೇಕು ಎಂದರು.

ಸದನದಲ್ಲಿ ನೂತನ ಶಾಸಕರು ಸದನದಲ್ಲಿ ಶಿಸ್ತು ಪಾಲಿಸಬೇಕು. ಸಭಾಧ್ಯಕ್ಷರ ಸೂಚನೆಗಳಿಗೆ ಗೌರವ ಸಲ್ಲಿಸಿ ಹೇಳಬೇಕಾದ ವಿಚಾರವನ್ನು ಪ್ರಸ್ತಾಪಿಸುವ ಮೂಲಕ ತಾವು ಪ್ರತಿನಿಸುವ ಕ್ಷೇತ್ರದ ಜನರ ಋಣ ತೀರಿಸಬೇಕೆಂದು ಕಿವಿಮಾತು ಹೇಳಿದರು.

ಪ್ರಧಾನಿ ಮೋದಿ ತಾಯಿ ಹೀರಾ ಬೇನ್ ಆರೋಗ್ಯದಲ್ಲಿ ಏರುಪೇರು

ಬಳಿಕ ಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ಬಹಳಷ್ಟು ಸದಸ್ಯರು ದೇಶಪಾಂಡೆ ಅವರನ್ನು ಅಭಿನಂದಿಸಿ ಮಾತನಾಡಬೇಕು ಎಂಬ ಬಯಕೆ ಇದೆ. ಆದರೆ ಸಮಯದ ಅಭಾವದಿಂದ ಎಲ್ಲರಿಗೂ ಅವಕಾಶ ಮಾಡಿಕೊಡಲು ಸಾಧ್ಯವಾಗುತ್ತಿಲ್ಲ. ಎಲ್ಲ ಸದಸ್ಯರ ಪರವಾಗಿ ತಾವು ಮತ್ತೊಮ್ಮೆ ದೇಶಪಾಂಡೆ ಅವರನ್ನು ಅಭಿನಂದಿಸುವುದಾಗಿ ತಿಳಿಸಿ ಪ್ರಶ್ನೋತ್ತರ ಕಲಾಪ ಕೈಗೆತ್ತಿಕೊಂಡರು.

siddaramaiah, MLA Deshpand, Legislative Assembly, Belagavi,

Articles You Might Like

Share This Article