ಚೆಕ್ ಪಡೆದು ಪ್ರಭಾವಿ ಹುದ್ದೆ ನೀಡಿದ್ದ ಸಿದ್ದರಾಮಯ್ಯ : N.R.ರಮೇಶ್ ಆರೋಪ

Social Share

ಬೆಂಗಳೂರು, ಅ.30- ಚೆಕ್ ರೂಪದಲ್ಲಿ ಹಣ ಪಡೆದು ಪ್ರಭಾವಿ ವ್ಯಕ್ತಿಯೊಬ್ಬರಿಗೆ ಪ್ರಭಾವಿ ಹುದ್ದೆಯನ್ನು 2014ರಲ್ಲಿ ಅಂದಿನ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರು ನೀಡಿದ್ದಾರೆ ಎಂದು ಆರೋಪಿಸಿರುವ ಬೆಂಗಳೂರು ದಕ್ಷಿಣ ಜಿಲ್ಲಾ ಘಟಕದ ಅಧ್ಯಕ್ಷ ಎನ್.ಆರ್.ರಮೇಶ್ ಈ ಬಗ್ಗೆ ತನಿಖೆ ನಡೆಸಬೇಕೆಂದು ಲೋಕಾಯುಕ್ತಕ್ಕೆ ದೂರು ದಾಖಲಿಸುವುದಾಗಿ ತಿಳಿಸಿದ್ದಾರೆ.

ಈ ಕುರಿತು ಪತ್ರಿಕಾಗೋಷ್ಠಿ ನಡೆಸಿದ ಅವರು, ಕಿಂಗ್ಸ್‍ಕೋರ್ಟ್ ವಿವೇಕ್ ಎಂದೇ ಪ್ರಸಿದ್ಧಿ ಪಡೆದಿರುವ ಎಲ್.ವಿವೇಕಾನಂದ ಎಂಬ ಪ್ರಭಾವಿ ವ್ಯಕ್ತಿಯಿಂದ 1 ಕೋಟಿ 30 ಲಕ್ಷ ಹಣ ಪಡೆದು ಬೆಂಗಳೂರು
ಟರ್ಫ್‍ಕ್ಲಬ್‍ನ ಸ್ಟೀವರ್ಟ್ (ಉಸ್ತುವಾರಿ ಹುದ್ದೆ)ಗೆ ಸಿದ್ದರಾಮಯ್ಯ ನೇಮಕ ಮಾಡಿದ್ದರು ಎಂದು ಆರೋಪಿಸಿದ್ದಾರೆ.

ಮೂರು ವರ್ಷಗಳ ಅವಧಿಗೆ ಬೆಂಗಳೂರು ಟರ್ಫ್‍ಕ್ಲಬ್‍ನ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಇವರನ್ನು ನೇಮಕ ಮಾಡಲಾಗಿತ್ತು. ಇವರಿಂದ 1 ಕೋಟಿ 30 ಲಕ್ಷ ರೂ.ಗಳ ಚೆಕ್ ಸ್ವೀಕರಿಸಿರುವ ಬಗ್ಗೆ ದಾಖಲೆಗಳನ್ನು ಬಹಿರಂಗ ಮಾಡಿದ್ದಾರೆ. ಸಿದ್ದರಾಮಯ್ಯನವರು ಲೋಕಾಯುಕ್ತ ಮತ್ತು ರಾಜ್ಯ ಚುನಾವಣಾ ಆಯೋಗಕ್ಕೆ 2018ರ ಏ.21ರಂದು ಸಲ್ಲಿಸಿರುವ ಪ್ರಮಾಣದಲ್ಲಿ ಸಾಲ ಪಡೆದುಕೊಂಡಿರುವುದಾಗಿ ಮಾಹಿತಿ ನೀಡಿದ್ದಾರೆ.

CBI ತನಿಖೆಗೆ ವಹಿಸಿದ್ದ ಪ್ರಕರಣಗಳನ್ನು ಹಿಂಪಡೆದ ತೆಲಂಗಾಣ ಸರ್ಕಾರ

ಇಷ್ಟು ಹಣ ಪಡೆದು ವಿವೇಕ್ ಅವರಿಗೆ ಟರ್ಫ್‍ಕ್ಲಬ್ ಸ್ಟೀವರ್ಟ್ ಸ್ಥಾನ ನಿಯೋಜನೆ ಮಾಡಿರುವುದು ಕಾನೂನು ರೀತಿ ಅಕ್ಷಮ್ಯವಾಗಿದೆ. ಕೇಂದ್ರ ಸರ್ಕಾರದ ಗೃಹ ಇಲಾಖೆ ನಿಯಮ 4.1ರಂತೆ ಮುಖ್ಯಮಂತ್ರಿಗಳಾಗಲಿ ಅಥವಾ ಯಾವುದೇ ಸಚಿವರಾಗಲಿ ಯಾವುದೇ ವ್ಯಕ್ತಿಗೆ ಪ್ರಭಾವಿ ಹುದ್ದೆ ನೀಡಿ ಫಲಾನುಭವಿಯಿಂದ ಯಾವುದೇ ರೀತಿಯ ಉಡುಗೊರೆಗಳನ್ನಾಗಲಿ, ನಗದನ್ನಾಗಲಿ ಯಾವುದೇ ರೂಪದಲ್ಲಿ ಸ್ವೀಕರಿಸುವುದು ಅಕ್ಷಮ್ಯ ಅಪರಾಧವಾಗುತ್ತದೆ.

ಈ ಹಿನ್ನೆಲೆಯಲ್ಲಿ ಸಿದ್ದರಾಮಯ್ಯ ವಿರುದ್ಧ ಭ್ರಷ್ಟಾಚಾರ, ಅಧಿಕಾರ ದುರುಪಯೋಗ ಮತ್ತು ವಂಚನೆ ಪ್ರಕರಣಕ್ಕೆ
ಸಂಬಂಧಿಸಿದಂತೆ ಲೋಕಾಯುಕ್ತದಲ್ಲಿದೂರು ದಾಖಲಿಸಲಾಗುವುದು ಎಂದು ಹೇಳಿದರು.

ಪಾದಯಾತ್ರೆಯಲ್ಲಿ ಇದ್ದಕ್ಕಿದ್ದಂತೆ ಓಡಿದ ರಾಹುಲ್, ಭದ್ರತಾ ಸಿಬ್ಬಂದಿ ಕಕ್ಕಾಬಿಕ್ಕಿ

ಈ ಕಿಕ್‍ಬ್ಯಾಗ್ ಹಗರಣವನ್ನು ನ್ಯಾಯಾಂಗ ತನಿಖೆ ನಡೆಸಬೇಕು ಅಥವಾ ಸಿಬಿಐಗಾಗಲಿ ಅಥವಾ ಸಿಐಡಿಗಾಗಲಿ ತನಿಖೆಗೆ ವಹಿಸಬೇಕೆಂದು ಮುಖ್ಯಮಂತ್ರಿಗಳಿಗೆ ರಮೇಶ್ ಆಗ್ರಹಿಸಿದ್ದಾರೆ.

Articles You Might Like

Share This Article