ರಾಜಕೀಯ ಚದುರಂಗದಾಟದಲ್ಲಿ ಸಿದ್ದರಾಮಯ್ಯ ನಿಸ್ಸೀಮ: ಬಿಜೆಪಿ ಟ್ವೀಟ್

Social Share

ಬೆಂಗಳೂರು,ಜು.23- ರಾಜಕೀಯ ಚದುರಂಗದಾಟದಲ್ಲಿ ಸಿದ್ದರಾಮಯ್ಯ ನಿಸ್ಸೀಮರು. ಸಿದ್ದರಾಮೋತ್ಸವ ಏಕಾಏಕಿ ಆಯೋಜನೆಗೊಂಡಿದ್ದಲ್ಲ. ಯಾವ ದಾಳವನ್ನು ಯಾವಾಗ ಯಾರ ಮುಂದೆ ಉರುಳಿಸಬೇಕೆಂಬ ಅನುಭವ ಸಿದ್ದರಾಮಯ್ಯಗಿದೆ ಎಂದು ಬಿಜೆಪಿ ಎಚ್ಚರಿಸಿದೆ.

ಈ ಕುರಿತು ಸರಣಿ ಟ್ವೀಟ್ ಮಾಡಿರುವ ಬಿಜೆಪಿ, ಸಿದ್ದರಾಮೋತ್ಸವದ ಮೂಲಕ ಮುಂದೆ ಡಿಕೆಶಿ, ಪರಮೇಶ್ವರ್ ಹಾಗೂ ಖರ್ಗೆ ಅವರನ್ನು ಮಕಾಡೆ ಮಲಗಿಸುವ ಉದ್ದೇಶವಿದೆಯೇ? ಎಂದು ಪ್ರಶ್ನಿಸಿದೆ. ಕೆಪಿಸಿಸಿ ಕಚೇರಿಯಲ್ಲಿ ಪಿಸುಮಾತು ಬಂದಾಗಲೇ ಡಿ.ಕೆ.ಶಿವಕುಮಾರ್ ಎಚ್ಚೆತ್ತುಕೊಳ್ಳಬೇಕಿತ್ತು. ಸಿದ್ದರಾಮಯ್ಯ ಟೂಲ್‍ಕಿಟ್ ಆಟ ಅದಾಗಲೇ ಶುರುವಾಗಿತ್ತು, ಅಮಾಯಕರ ತಲೆದಂಡವಾಯಿತಷ್ಟೇ ಎಂದು ಎಚ್ಚರಿಕೆ ನೀಡಿದೆ.

ಈಗ ಸಿದ್ದರಾಮಯ್ಯನವರ ಮತ್ತೊಂದು ಸುತ್ತಿನ ಟೂಲ್‍ಕಿಟ್ ಪ್ರಹಸನ ಆರಂಭಿಸಿದ್ದಾರೆ, ಈ ಬಾರಿ ದೊಡ್ಡ ಬೇಟೆಯಾಡುವುದು ಖಚಿತ ಎಂದು ಪರೋಕ್ಷವಾಗಿ ಡಿ.ಕೆ.ಶಿವಕುಮಾರ್‍ಗೆ ಟಾಂಗ್ ನೀಡಿದೆ.

ಸಿದ್ದರಾಮೋತ್ಸವ ಎನ್ನುವುದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಅವರ ಬಣದ ಪೊಲಿಟಿಕಲ್ ಟೂಲ್ ಕಿಟ್! ಇದೊಂದು ವ್ಯವಸ್ಥಿತವಾದ ರಾಜಕೀಯ ಗುಪ್ತಮಾರ್ಗಸೂಚಿಯ ಭಾಗ, ಮೂಲ ಕಾಂಗ್ರೆಸಿಗರ ಸರ್ವನಾಶವೇ ಇದರ ಉದ್ದೇಶ ಎಂದು ಎಚ್ಚರಿಕೆ ನೀಡಿದೆ.

Articles You Might Like

Share This Article