ಯಡಿಯೂರಪ್ಪ ಬದಲಾಗೋದು ಗೊತ್ತಿತ್ತು, ಬೊಮ್ಮಾಯಿ ಬಗ್ಗೆ ಗೊತ್ತಿಲ್ಲ : ಸಿದ್ದರಾಮಯ್ಯ

Social Share

ಹುಬ್ಬಳ್ಳಿ,ಆ.10- ರಾಜ್ಯದಲ್ಲಿ ಮೂರನೇ ಸಿಎಂ ಆದರೂ ಬರಲಿ ನಾಲ್ಕನೇಯವರಾದರೂ ಬರಲಿ ನಮಗೇನು ಸಂಬಂಧವಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು. ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು, ಬಿಎಸ್‍ವೈ ಬದಲಾವಣೆ ಬಗ್ಗೆ ನಂಗೆ ಗೊತ್ತಿತ್ತು, ಅದಕ್ಕೆ ನಾನು ಈ ಹಿಂದೆ ಹೇಳಿದ್ದೆ. ರಾಜ್ಯದಲ್ಲಿ ಅಂದಿನ ಮುಖ್ಯಮಂತ್ರಿ ಯಡಿಯೂರಪ್ಪ ಬದಲಾವಣೆ ನನಗರ ಮೊದಲೇ ಗೊತ್ತಿತ್ತು. ಆದರೆ ಬೊಮ್ಮಾಯಿಯವರ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದರು.

ಮುಂಬರುವ ಚುನಾವಣೆಯಲ್ಲಿ ಬಾದಾಮಿಯಿಂದ ಸ್ರ್ಪಸೋ ಬಗ್ಗೆ ಇನ್ನೂ ನಿರ್ಧರಿಸಿಲ್ಲ.ಸುಮಾರು ಕಡೆ ಪಾದಯಾತ್ರೆಗೆ ಹೋಗಿದ್ದೇನೆ, ಅಲ್ಲೆಲ್ಲಾ ಎಲೆಕ್ಷನ್‍ಗೆ ನಿಲ್ಲುವುದಕ್ಕೆ ಆಗುತ್ತದೆಯೇ ಎಂದು ಮರು ಪ್ರಶ್ನೆ ಮಾಡಿದರು.
ಸಧ್ಯ ಬದಾಮಿಯ ಶಾಸಕ, ಮುಂದಿನ ಚುನಾವಣೆಯ ಬಗ್ಗೆ ನಾನೇ ನಿಮಗೇ ಹೇಳುತ್ತೇನೆ ಎಂದು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ನಿತೀಶ್ ಕುಮಾರ್ ಒಳ್ಳೆಯ ಕೆಲಸ ಮಾಡಿದ್ದಾರೆ ಇನ್ನು ಬಿಹಾರ ರಾಜಕೀಯ ಬೆಳವಣಿಗೆ ಕುರಿತು ಮಾತನಾಡಿದ ಸಿದ್ದರಾಮಯ್ಯ, ನೀತೀಶ ಕುಮಾರ ಒಳ್ಳೆಯ ಕೆಲಸ ಮಾಡಿದ್ದಾರೆ. ಇವಾಗ ಏನು ಅಂತಾ ಎನ್‍ಡಿಎಗೆ ತೊರಿದಿದ್ದಾರೆ. ಅವರೊಬ್ಬ ಸಮಾಜವಾದಿ ಹಿನ್ನಲೆಯಿಂದ ಬಂದಿದ್ದರು ಕಾರಣ. ಕೋಮುವಾದಿ ಪಕ್ಷದ ಸ್ನೇಹ ಬಿಟ್ಟಿದ್ದು ಒಳ್ಳೆಯದೇ ಎಂದರು.

ಬಿಜೆಪಿಯವರ ಹರ್ ಘರ್ ತಿರಂಗಾ ಸ್ಲೋಗನ್ ಡೋಂಗಿ ರಾಜಕೀಯ ಎಂದು ಹುಬ್ಬಳ್ಳಿಯಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು. ಡೋಂಗಿ ರಾಜಕೀಯ ಇರಬಾರದು ಎಂದು ನಾನು ಮೊದಲಿನಿಂದಲೂ ಹೇಳಿದ್ದೇನೆ.

ಹಿಂದೆ ಆರ್‍ಎಸ್‍ಎಸ್‍ನ ಪ್ರಮುಖರು ತ್ರಿವರ್ಣ ರಾಷ್ಟ್ರಧ್ವಜ ಬೇಡ ಅಂದಿದ್ದರು ಆದ್ದರಿಂದ ಈ ಬಗ್ಗೆ ಯಾವುದೇ ಸ್ಪಷ್ಟನೆ ಕೊಟ್ಟಿಲ್ಲ. ನಮ್ಮ ರಾಷ್ಟ್ರಧ್ವಜ, ಸಂವಿಧಾನವನ್ನು ವಿರೋಧ ಮಾಡಿದ್ದರು ಎಂದು ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯಾ ಆರ್‍ಎಸ್‍ಎಸ್‍ನವರು ನಾಗರಪುರದ ಕಚೇರಿಯ ಮೇಲೆ ತ್ರಿವರ್ಣ ಧ್ವಜ ಹಾರಿಸ್ತಾರಾ.? ಎಂದು ಪ್ರಶ್ನೆ ಮಾಡಿದರು.

Articles You Might Like

Share This Article