ಕೋಮುವಾದಿ ಆರ್‌ಎಸ್‌ಎಸ್‌ ದೇಶ ಹಾಗೂ ಸಮಾಜವನ್ನು ವಿಭಜನೆ ಮಾಡುತ್ತೆ : ಸಿದ್ದರಾಮಯ್ಯ

ಬೆಂಗಳೂರು, ಅ.17- ಆರ್‌ಎಸ್‌ಎಸ್‌ ಕೋಮುವಾದಿ ಸಂಘಟನೆ ಅವರು, ದೇಶ ಹಾಗೂ ಸಮಾಜವನ್ನು ವಿಭಜನೆ ಮಾಡುತ್ತಾರೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಟೀಕಿಸಿದ್ದಾರೆ. ಹುಬ್ಬಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್‌ಎಸ್‌ಎಸ್‌ ಕೋಮುವಾದಿ ಸಂಘಟನೆ, ಮನುಸೃತಿ ಪಾಲನೆ ಮಾಡುತ್ತಾರೆ, ಶ್ರೇಣಿಕೃತ ವ್ಯವಸ್ಥೆಯನ್ನು ಬೆಂಬಲಿಸುತ್ತಾರೆ.

1971ರಲ್ಲಿ ನಾನು ರಾಜಕೀಯಕ್ಕೆ ಬಂದ ದಿನದಿಂದಲೂ ಆರ್‌ಎಸ್‌ಎಸ್‌ನ್ನು ವಿರೋಸುತ್ತಿದ್ದೇನೆ. 1925ರಲ್ಲಿ ಆರ್‌ಎಸ್‌ಎಸ್‌ ಚಟುವಟಿಕೆ ನೋಡಿದಾಗ ಅವರು ದೇಶ ವಿಭಜನೆ ಮಾಡುವುದು, ಸಮಾಜ ವಿಭಜನೆ ಮಾಡುವುದು ಕಂಡು ಬರುತ್ತದೆ. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಎಂದು  ಬಾಯಿ ಮಾತಿಗೆ ಹೇಳುತ್ತಾರೆ. ಬಿಜೆಪಿಯಲ್ಲಿ ಒಬ್ಬರೆ ಒಬ್ಬ ಮುಸ್ಲಿಂ ಶಾಸಕರಿದ್ದಾರಾ. ಆರ್‍ಎಸ್‍ಎಸ್ ಇಂದಿಗೂ ಅಲ್ಪಸಂಖ್ಯಾತರ ವಿರೋಯಾಗಿದೆ ಎಂದು ಹೇಳಿದರು.

ಮುಸ್ಲಿಮರು ಬಿಜೆಪಿ ಕಚೇರಿಯಲ್ಲಿ ಕಸ ಗುಡಿಸಲಿ, ನಂತರ ಅಲ್ಪಸಂಖ್ಯಾತರಿಗೆ ಟಿಕೆಟ್ ನೀಡುವ ಬಗ್ಗೆ ಪರಿಶೀಲಿಸುತ್ತೇವೆ ಎಂದು ಸಚಿವ ಈಶ್ವರಪ್ಪ ಹೇಳಿದ್ದಾರೆ. ಸಂವಿಧಾನ ಬದಲಾಯಿಸುತ್ತೇವೆ ಎಂದು ಬಿಜೆಪಿಯವರು ಹೇಳುತ್ತಾರೆ. ಸಂವಿಧಾನ ಕೊಟ್ಟವರು ಯಾರು ? ಸಂವಿಧಾನದ ಮೂಲ ಆಶಯಗಳೇನು, ಸಮ ಸಮಾಜ, ಭಾತೃತ್ವವನ್ನು ಸಂವಿಧಾನದಲ್ಲಿ ಹೇಳಿದೆ. ಆರ್‍ಎಸ್‍ಎಸ್ ಇದಕ್ಕೆಲ್ಲಾ ವಿರುದ್ಧವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಸಂಗೂರು ಸಕ್ಕರೆ ಕಾರ್ಖಾನೆ ಹಾಳು ಮಾಡಿದ್ದು ಯಾರು ಬಿಜೆಪಿಯವರು. ಶಿವರಾಜ್ ಸಜ್ಜನ್, ಸಿ.ಎಂ.ಉದಾಸಿ ಅಧ್ಯಕ್ಷರಾಗಿದ್ದಾಗ ಕಾರ್ಖಾನೆ ನಷ್ಟಕ್ಕೆ ಹೋಗಿ ಇಂದು ಅದನ್ನು ಖಾಸಗಿಯವರಿಗೆ ಕೊಡಲಾಗಿದೆ. ಇದರಿಂದ ರೈತರಿಗೆ ನಷ್ಟವಾಗಿದೆ ಎಂದು ಸಿದ್ದರಾಮಯ್ಯ ಹೇಳಿದರು.

ಡಿಸೇಲ್, ಪೆಟ್ರೋಲ್ ಬೆಲೆ ತೀವ್ರವಾಗಿ ಹೆಚ್ಚಾಗುತ್ತಿದೆ. ಈ ಹಿಂದೆ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ ಡಿಸೇಲ್ 47 ರೂ. ಇತ್ತು. ಅವತ್ತು ಕಚ್ಚಾ ತೈಲದ ಬೆಲೆ 125 ಡಾಲರ್ ಇತ್ತು. ಇಂದು 87 ಡಾಲರ್ ಇದೆ, ಆದರೆ ಡಿಸೇಲ್ ಲೀಟರ್‍ಗೆ 100 ರೂ. ದಾಟಿದೆ. ಕೇಂದ್ರ ಸರ್ಕಾರ ದುಬಾರಿ ತೆರಿಗೆ ಹಾಕುತ್ತಿದೆ, ಅದಕ್ಕಾಗಿ ಪೆಟ್ರೋಲ್, ಡಿಸೇಲ್ ಬೆಲೆ ದುಬಾರಿಯಾಗಿದೆ. ಅಸಲಿಗೆ ಲೀಟರ್ ಪೆಟ್ರೋಲ್ ಬೆಲೆ 40 ರೂ.ಗಳು ಮಾತ್ರ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳ ತೆರಿಗೆಯಿಂದಾಗಿ ಜನ ಸಾಮಾನ್ಯರಿಗೆ ಹೊರೆಯಾಗುತ್ತಿದೆ ಎಂದು ಟೀಕಿಸಿದರು.

ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ತಲಾ 10 ರೂ. ತೆರಿಗೆ ಕಡಿಮೆ ಮಾಡಿದರೆ ದರ ಇಳಿಕೆಯಾಗಲಿದೆ. ಇಂಧನವನ್ನು ಜಿಎಸ್‍ಟಿ ವ್ಯಾಪ್ತಿಗೆ ನೀಡಲು ನನ್ನ ವಿರೋಧವಿದೆ. ಜಿಎಸ್‍ಟಿಗೆ ಸೇರ್ಪಡೆಯಾದರೆ ಎಲ್ಲಾ ತೆರಿಗೆಯೂ ಕೇಂದ್ರ ಸರ್ಕಾರದ ಅೀನಕ್ಕೆ ಸೇರುತ್ತದೆ. ಈಗಾಗಲೇ ಬಹಳಷ್ಟು ವಸ್ತುಗಳ ಮೇಲೆ ಜಿಎಸ್‍ಟಿ ಹಾಕಿ ಕೇಂದ್ರ ಸರ್ಕಾರವೇ ತೆರಿಗೆ ಪಡೆದುಕೊಳ್ಳುತ್ತಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ರಾಜ್ಯಕ್ಕೆ ಅಕಾರವೇ ಇಲ್ಲವಾಗುತ್ತದೆ. ಅದಕ್ಕಾಗಿ ಪೆಟ್ರೋಲ್, ಡಿಸೇಲ್ ರಾಜ್ಯಗಳ ವ್ಯಾಟ್ ವ್ಯಾಪ್ತಿಯಲ್ಲೇ ಇರಬೇಕು ಎಂದು ಹೇಳಿದರು.

ಜಿಎಸ್‍ಟಿ ಕೌನ್ಸಿಲ್ ಸಭೆಗೆ ಹಾಲಿ ಮುಖ್ಯಮಂತ್ರಿಯೇ ಸದಸ್ಯರಾಗಿದ್ದರು. ರಾಜ್ಯದ ಆರ್ಥಿಕ ಪರಿಸ್ಥಿತಿ  ಮನೆ ಬಾಗಿಲಿಗೆ ಪಡಿತರ ಈಗಾಗಲೇ
ರಾಹುಲ್‍ಗಾಂ ಮತ್ತೆ ಎಐಸಿಸಿ ಅಧ್ಯಕ್ಷರಾಗಬೇಕು ಎಂಬುದು ನನ್ನ ಅಭಿಪ್ರಾಯ. ನಿನ್ನೆ ನಡೆದ ಎಐಸಿಸಿ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬಹಳಷ್ಟು ಮಂದಿ ಒತ್ತಾಯಿಸಿದ್ದಾರೆ. ಅದಕ್ಕೆ ಪರಿಶೀಲಿಸುತ್ತೇನೆ ಎಂದು ಮುಂದಿನ ಮುಖ್ಯಮಂತ್ರಿಯನ್ನು ನಮ್ಮ ಪಕ್ಷದ ಹೈಕಮಾಂಡ್ ತೀರ್ಮಾನ ಮಾಡುತ್ತೆ.

ಈಗ ಬಸವರಾಜ ಬೊಮ್ಮಾಯಿ ಅವರನ್ನು ಶಾಸಕರು ಮಾಡಿದ್ದಾ, ಹೈಕಮಾಂಡ್ ಮಾಡಿದ್ದಾರೆ. ಅದೇ ರೀತಿ ನಮ್ಮ ಪಕ್ಷದಲ್ಲೂ ಹೈಕಮಾಂಡ್ ತೀರ್ಮಾನ ಮಾಡುತ್ತೆ ಎಂದು ಸಿದ್ದರಾಮಯ್ಯ ಹೇಳಿದರು.