ಸಾವರ್ಕರ್ ಫೋಟೋಗೆ ನಮ್ಮ ಆಕ್ಷೇಪವಿಲ್ಲ : ಸಿದ್ದರಾಮಯ್ಯ

Social Share

ಬೆಳಗಾವಿ,ಡಿ.19- ಸಾವರ್ಕರ್ ಫೋಟೋಗೆ ನಮ್ಮ ಆಕ್ಷೇಪವಿಲ್ಲ ಆದರೆ ಅವರ ಫೋಟೋದ ಜೊತೆ ಇತರ ಮಹನೀಯರ ಫೋಟೋಗಳನ್ನು ಸಭಾಂಗಣದಲ್ಲಿ ಅಳವಡಿಸಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದರು.

ಸುವರ್ಣ ಸೌಧದಲ್ಲಿ ಮಾತಾನಾಡಿದ ಅವರು, ಇದು ಪ್ರತಿಭಟನೆ ಅಲ್ಲ, ಇದು ನಮ್ಮ ಬೇಡಿಕೆಯಾಗಿದೆ. ವಿಧಾನಸೌಧದ ಹಾಲ್‍ನಲ್ಲಿ ಬಸವಣ್ಣ, ನಾರಾಯಣಗುರು, ವಾಲ್ಮೀಕಿ, ಕನಕದಾಸ ಫೋಟೋವನ್ನು ಹಾಕಿ ಎಂದರು.

ಸಿಎಂ ಬೊಮ್ಮಾಯಿ ಸುಳ್ಳಿನ ರಾಜ : ಡಿಕೆಶಿ

ವಿಧಾನಸೌಧದ ಹಾಲ್‍ನಲ್ಲಿ ಫೋಟೋ ಇಡಲು ಸಭಾಧ್ಯಕ್ಷರು ಅಸೆಂಬ್ಲಿಯನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಚರ್ಚೆ ಮಾಡದೆ ಏಕಾಏಕಿ ಭಾವಾಚಿತ್ರ ಅಳವಡಿಕೆ ಮಾಡಿದ್ದಾರೆ ಎಂದು ಅಸಮಧಾನ ವ್ಯಕ್ತಪಿಸಿದರು.
ಭಾವಾಚಿತ್ರ ಅನಾವರಣ ಕಾರ್ಯಕ್ರಮಕ್ಕೆ ನಮಗೆ ಆಹ್ವಾನ ಇರಲಿಲ್ಲ, ಮಾಧ್ಯಮದ ಮೂಲಕ ತಿಳಿದುಕೊಂಡೆ. ಯಾರದೇ ಫೋಟೋ ಇಡಲು ವಿರೋಧವಿಲ್ಲ. ಆದರೆ ಚರ್ಚೆ ಆಗದೆ ಇಟ್ಟಿರುವುದಕ್ಕೆ ನಮ್ಮ ವಿರೋಧವಿದೆ ಎಂದರು.

ಭಾರತ್ ಜೋಡೊ ಯಾತ್ರೆಗೆ ಕಮಲ್ ಹಾಸನ್..?

ನಾವು ಅನೇಕ ಸಮಸ್ಯೆಗಳನ್ನು ಅಸೆಂಬ್ಲಿಯಲ್ಲಿ ಪ್ರಸ್ತಾಪ ಮಾಡುತ್ತೇವೆ, ಕಾನೂನು ಸುವ್ಯವಸ್ಥೆ, ಭ್ರಷ್ಟಾಚಾರದ ಬಗ್ಗೆ ಚರ್ಚೆಯಗಬೇಕಿದೆ. ಇದನ್ನು ಹೊರತುಪಡಿಸಿ ಬೇರೆಡೆಗೆ ಗಮನಸೆಳೆಯಲು ಈ ರೀತಿ ಫೆಫೋಟೋ ವಿವಾದವನ್ನು ಮುನ್ನಲೆಗೆ ತಂದಿದ್ದಾರೆ ಎಂದು ಸಿದ್ದರಾಮಯ್ಯ ಆರೋಪಿಸಿದರು.

Siddaramaiah, veveer savarkar, photo, suvarna soudha,

Articles You Might Like

Share This Article