ಸಿದ್ದೇಶ್ವರ ಶ್ರೀಗಳ ಆರೋಗ್ಯದಲ್ಲಿ ಏರುಪೇರು

Social Share

ವಿಜಯಪುರ,ಜ.1- ಖ್ಯಾತ ಪ್ರವಚನಕಾರರು, ನಡೆದಾಡುವ ದೇವರೆಂದೆ ಇಡೀ ವಿಶ್ವದಾದ್ಯಂತ ಭಕ್ತರಿಂದ ಕರೆಸಿಕೊಳ್ಳುವ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳು ವಯೋ ಸಹಜ ಕಾಯಿಲೆಗಳಿಂದ ಬಳಲುತ್ತಿದ್ದು, ಅಸ್ವಸ್ಥರಾಗಿರುವುದು ಭಕ್ತ ಸಮೂಹವನ್ನು ಕಳವಳಕ್ಕೆ ಈಡುಮಾಡಿದೆ.

ನಿತ್ಯ ಸಾವಿರಾರು ಭಕ್ತರು, ಜನಪ್ರತಿನಿಧಿಗಳು ಆಶ್ರಮಕ್ಕೆ ಭೇಟಿ ನೀಡುತ್ತಿದ್ದು, ಕಳೆದ ರಾತ್ರಿ ಸಿಎಂ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಶ್ರೀಗಳು ಆರೋಗ್ಯವಿಚಾರಿಸಿದ್ದಾರೆ.

ಅವರ ಎಲ್ಲಾ ವೈದ್ಯಕೀಯ ವರದಿಗಳು ಅವರ ಸಾಮಾನ್ಯವಾಗಿದೆ. ಅವರು ಇನ್ನಷ್ಟು ದಿನ ಬದುಕಿ ನಮ್ಮೆಲ್ಲರಿಗೂ ಮಾರ್ಗದರ್ಶನ ಮಾಡುವಂತಾಗಲಿ ಎಂದು ಪ್ರಾರ್ಥನೆ ಮಾಡುತ್ತೇನೆ. ಶ್ರೀ ಸಿದ್ದೇಶ್ವರ ಸ್ವಾಮೀಜಿ ಧರ್ಮದ ಚೌಕಟ್ಟನ್ನು ಮೀರಿ ತತ್ವಗಳ ಮೇಲೆ ನಿಂತವರು, ಸಮಾಜದಲ್ಲಿ ಮೌಲ್ಯಗಳನ್ನು ಜೀವಂತವಾಗಿಡಲು ಶ್ರೀಗಳ ಅವಶ್ಯಕತೆ ಇದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದರು.

ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾತನಾಡಿ, ವೈರಾಗ್ಯ ಮೂರ್ತಿ, ನಡೆದಾಡುವ ದೇವರು ನಮ್ಮೆಲ್ಲರಿಗೂ ಒಂದಲ್ಲ ಒಂದು ರೀತಿ ಮಾರ್ಗದರ್ಶನ ಮಾಡಿ ಪ್ರೇರಣೆ ನೀಡಿದವರು ಶ್ರೀ ಸಿದ್ದೇಶ್ವರ ಸ್ವಾಮೀಜಿ. ಸಾರ್ವಜನಿಕ ಬದುಕಿನ ಬಗ್ಗೆ ಸಾರ್ವಜನಿಕ ಬದುಕಿನ ಮೌಲ್ಯಗಳನ್ನು ಕಲಿಸಿದ ಗುರುಗಳು. ನಡೆದಂತೆ ನುಡಿದು ಇತರರಿಗೆ ಆದರ್ಶ ಪ್ರಾಯವಾದ ಜೀವನ ನಡೆಸುತ್ತಿದ್ದಾರೆ. ಅವರ ಆರೋಗ್ಯ ಕಳವಳಕಾರಿಯಾಗಿದೆ ಎಂದು ಕೆಲ ದಿನಗಳಿಂದ ನಮಗೆ ಗೊತ್ತಾಗಿದೆ. ಶ್ರೀಗಳ ಆರೋಗ್ಯದ ಬಗ್ಗೆ ಪ್ರಧಾನಿ ಮೋದಿ ಅವರು ವಿಚಾರಿಸಿದ್ದಾರೆ ಎಂದು ಹೇಳಿದ್ದಾರೆ.

ಲೈಂಗಿಕ ಕಿರುಕುಳ: ಹರ್ಯಾಣದ ಸಚಿವ ಸಂದೀಪ್ ಸಿಂಗ್ ವಿರುದ್ಧ ಕ್ರಿಮಿನಲ್ ಕೇಸ್

ಸ್ವಾಮೀಜಿಯವರು ಚಿಕಿತ್ಸೆ ಪಡೆದುಕೊಳ್ಳಬೇಕೆಂಬ ಅಪೇಕ್ಷೆ ಪ್ರಧಾನಮಂತ್ರಿ ಮೋದಿ ಸೇರಿದಂತೆ ನಮ್ಮೆಲ್ಲರದ್ದಾಗಿದೆ. ಶ್ರೀಗಳು ಆದರ್ಶ ಪ್ರಾಯರು. ಅವರು ಬೇಗ ಗುಣಮುಖರಾಗಲಿ ಎಂದು ನರೇಂದ್ರ ಮೋದಿ, ಅಮಿತ್ ಷಾ ಅವರು ಹಾರೈಸಿದ್ದಾರೆ. ಅವರಿಗೆ ಬೇಕಾದ ಎಲ್ಲ ಚಿಕಿತ್ಸಾ ಸೌಲಭ್ಯ ಹಾಗೂ ಸಕಲ ಸಹಾಯ ಮಾಡುವಂತೆ ಸೂಚಿಸಿದ್ದಾರೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಎಲ್ಲ ರೀತಿಯ ಸಹಕಾರ ನೀಡಲಿದೆ ಎಂದರು.

ಕಳೆದ ಕೆಲ ದಿನಗಳಿಂದ ಅನಾರೆÉೂೀಗ್ಯಕ್ಕೀಡಾಗಿದ್ದರೂ ಭಕ್ತರಿಗೆ ದರ್ಶನ ನೀಡುವುದನ್ನು ಶ್ರೀಗಳು ಮಾತ್ರ ಮರೆತಿಲ್ಲ. ದೈಹಿಕ ಬಳಲಿಕೆ ನಡುವೆಯೂ ಆಶ್ರಮಕ್ಕೆ ಹರಿದುಬರುವ ಸಾವಿರಾರು ಭಕ್ತರಿಗೆ ಸಿದ್ದೇಶ್ವರ ಶ್ರೀಗಳು ನಿತ್ಯ ದರ್ಶನ ನೀಡುತ್ತಿದ್ದಾರೆ. ನಿನ್ನೆಯವರೆಗೂ ಆಶ್ರಮದ ಕಟ್ಟಡದ ಆವರಣದಲ್ಲಿ ಭಕ್ತರಿಗೆ ದರ್ಶನ ನೀಡುತ್ತ ಬಂದಿದ್ದಾರೆ.

ನಂದಿನಿ ತಂಟೆಗೆ ಬಂದರೆ ಬಿಜೆಪಿ ಭಸ್ಮ : ಹೆಚ್.ಡಿ.ಕುಮಾರಸ್ವಾಮಿ

ಇನ್ನು ವೈದ್ಯರ ಸಲಹೆಯಂತೆ ಸ್ವಾಮೀಜಿ ಅವರನ್ನು ನೇರವಾಗಿ ಆಶ್ರಮದ ವೆಬ್‍ಸೈಟ್ ಹಾಗೂ ಫೇಸ್‍ಬುಕ್‍ನಲ್ಲಿ ದರ್ಶನ ಮಾಡಬೇಕೆಂದು ಆಶ್ರಮದ ಅಧ್ಯಕ್ಷರು ಮನವಿ ಮಾಡಿಕೊಂಡಿದ್ದರೂ ಸಹ ಅಪಾರ ಪ್ರಮಾಣದಲ್ಲಿ ಭಕ್ತರು ಆಶ್ರಮಕ್ಕೆ ಹರಿದು ಬಂದಿದ್ದರು.

ಮಧ್ಯಾಹ್ನ 1 ಗಂಟೆ ಸುಮಾರಿಗೆ ಮೊದಲ ಮಹಡಿಯಿಂದ ಭಕ್ತರಿಗೆ ದರ್ಶನ ನೀಡಿದ ಬಳಿಕ ಶ್ರೀ ಸಿದ್ದೇಶ್ವರ ಸ್ವಾಮೀಜಿ ಅವರು ನೆಲಮಹಡಿವರೆಗೂ ವೀಲ್‍ಚೇರ್‍ನಲ್ಲಿ ಆಗಮಿಸಿ ಸುತ್ತಾಡಿದರು.

ಮಠದಲ್ಲಿ ವೈದ್ಯರ ತಂಡವಿದ್ದು, ಶ್ರೀಗಳ ಆರೋಗ್ಯದ ಮೇಲೆ ನಿಗಾ ವಹಿಸಿದೆ. ವಿವಿಧ ಮಠಾೀಧಿಶರು ಮಠದಲ್ಲೇ ವಾಸ್ತವ್ಯ ಹೂಡಿ ಶ್ರೀಗಳು ಗುಣಮುಖರಾಗಲೆಂದು ಪ್ರಾರ್ಥಿಸಿದ್ದಾರೆ.

Siddheshwar Swamiji, health, Vijayapura,

Articles You Might Like

Share This Article