ಬೆಂಗಳೂರು,ಜ.9- ಸಿದ್ದು ನಿಜ ಕನಸುಗಳ ಎಂಬ ವಿವಾದತ್ಮಕ ಪುಸ್ತಕದ ಮೂಲಕ ಅಪಪ್ರಚಾರ ಮಾಡಲು ಹೊರಟ್ಟಿದ್ದ ಬಿಜೆಪಿ ಬೆಂಬಲಿಗರಿಗೆ ಅಭಿವೃದ್ಧಿ ಯೋಜನೆಗಳ ಪ್ರಸ್ತಾಪ ಮಾಡುವ ಮೂಲಕ ಸಿದ್ದರಾಮಯ್ಯ ಬಣ ಟಾಂಗ್ ನೀಡಿದೆ.
ಪ್ರಕಟಣೆ-ಕರ್ನಾಟಕ ಬಿಜೆಪಿ ಎಂದು ನಮೂದಿಸಿ ಕೆಲವು ಗ್ರಾಫಿಕ್ ಇಮೇಜ್ಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಗಿದೆ. ಸಿದ್ದರಾಮಯ್ಯ ಅವರ ಅಭಿವೃದ್ಧಿ ಪರ ಕನಸುಗಳನ್ನು ಬಿಜೆಪಿ ಪ್ರಚಾರ ಮಾಡುತ್ತಿದೆ ಎಂಬಂತೆ ಭಾಸವಾಗಲು ಈ ಇಮೇಜ್ಗಳನ್ನು ಸೃಷ್ಟಿಸಲಾಗಿದೆ.
ಸಿದ್ದು ಕನಸುಗಳ ಎಂಬ ವಿವಾದಾತ್ಮಕ ಪುಸ್ತಕದಲ್ಲಿ ಸಿದ್ದರಾಮಯ್ಯ ಅವರ ತಲೆಯ ಮೇಲೆ ಟಿಪ್ಪು ಸುಲ್ತಾನ್ ಟೋಪಿ ಹಾಕಿ, ಕೈನಲ್ಲಿ ಖಡ್ಗ ನೀಡಲಾಗಿದೆ. ರಾಜ್ಯವನ್ನು ಇಸ್ಲಾಮಿಕರಣ ಮಾಡುವುದು ಸಿದ್ದರಾಮಯ್ಯ ಅವರ ಕನಸು ಎಂಬರ್ಥದಲ್ಲಿ ವಿವಾದಿತ ಪುಸ್ತಕವನ್ನು ಇಂದು ಬಿಡುಗಡೆ ಮಾಡಲು ಕಾರ್ಯಕ್ರಮ ಆಯೋಜಿಸಲಾಗಿದೆ.
ಇಂದು ಬಿಜೆಪಿ ಬಿಡುಗಡೆ ಮಾಡುತ್ತಿರುವ ಸಿದ್ದು ನಿಜಕನಸುಗಳು ಎಂಬ ಬುಕ್ ನ ಒಂದು ತುಣುಕು..,
ಬಿಜೆಪಿ ನಾಯಕರಿಗೆ ತಲುಪುವವರೆಗೂ ಶೇರ್ ಮಾಡಿ #SidduNijaKanasugalu #Siddaramaiah #Bjp #books pic.twitter.com/jtOORWmDGW— Bhavya Narasimhamurthy (@Bhavyanmurthy) January 9, 2023
ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಅವರ ಕನಸುಗಳು ಭಾವನಾತ್ಮಕ ರಾಜಕಾರಣ ಅಲ್ಲ ಅಭಿವೃದ್ಧಿ ಪರ ಆಡಳಿತ ಎಂದು ಬಿಂಬಿಸಲು ಸಿದ್ದರಾಮಯ್ಯ ಬಣ ಯತ್ನಿಸಿದೆ. ನೆಮ್ಮದಿಯ ಬದುಕಿಗೆ ಆಹಾರದ ಭದ್ರತೆಯ ಅನ್ನಭಾಗ್ಯ, ನೆಮ್ಮದಿಯ ಬದುಕಿಗೆ ಶಾಶ್ವತ ನೆಲೆ ವಸತಿ ಭಾಗ್ಯ, ಶ್ರಮಜೀವಿಗಳಿಗೆ ಸಂತೃತ್ಪಿಯ ಆಹಾರ ಒದಗಿಸುವ ಇಂದಿರಾ ಕ್ಯಾಂಟಿನ್, ಅನ್ನದಾತರ ನೆರವಿಗೆ ಸರ್ಕಾರದ ಹಸ್ತ ಕೃಷಿ ಭಾಗ್ಯ, ಹೈನುಗಾರಿಕೆ ಐತಿಹಾಸಿಕ ಸಾಧನೆಯ ಕ್ಷೀರಧಾರೆ, ದುಡಿಯುವ ಕೈಗಳಿಗೆ ಕೌಶಲ್ಯದ ಆಸರೆ ಕೌಶಲ್ಯ ಕರ್ನಾಟಕ ಸಿದ್ದರಾಮಯ್ಯ ಅವರ ಕನಸುಗಳು ಎಂದು ಬಿಜೆಪಿ ಹೆಸರಿನಲ್ಲಿ ಪ್ರಕಟಿಸಲಾಗಿದೆ.
ಬ್ರೇಕಿಂಗ್ : ಹಿರಿಯ ನಾಗರಿಕರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿ
ಜೊತೆಗೆ ಗುಡಿಸಲು ಮುಕ್ತ ಕರ್ನಾಟಕ, ಹಸಿವು ಮುಕ್ತ ಕರ್ನಾಟಕ, ಆರೋಗ್ಯದ ಕನಸು, ನೀರಾವರಿ, ಕೃಷಿ ಅಭಿವೃದ್ಧಿ ಸಿದ್ದರಾಮಯ್ಯ ಅವರ ಕನಸು ಎಂದು ಹಲವು ಸಾಧನೆಗಳನ್ನು ಬಣ್ಣಿಸುವ ಚಿತ್ರಗಳನ್ನು ವೈರಲ್ ಮಾಡಲಾಗಿದೆ.
ಈ ಮೊದಲು ಕಾಂಗ್ರೆಸ್ ಸೃಷ್ಟಿಸಿದ್ದ ಪೇ ಸಿಎಂ ಪೋಸ್ಟರ್ ವೈರಲ್ ಆಗಿ ಬಿಜೆಪಿಗೆ ಮುಜುಗರ ಉಂಟು ಮಾಡಿದ್ದವು. ಬಿಜೆಪಿ ಬೆಂಬಲಿತ ಕೆಲವು ಲೇಖಕರು ಸಿದ್ದರಾಮಯ್ಯ ಅವರ ವಿರುದ್ಧ ಪುಸ್ತಕ ಬರೆದಿದ್ದು, ಅದನ್ನು ಸಚಿವ ಅಶ್ವಥನಾರಾಯಣ ಬಿಡುಗಡೆ ಮಾಡುತ್ತಿದ್ದಾರೆ.
ಬಂಧನಕ್ಕೊಳಗಾಗಿದ್ದ ಐಸಿಐಸಿಐ ಬ್ಯಾಂಕ್ ಮಾಜಿ ಮುಖ್ಯಸ್ಥೆ ಕೊಚ್ಚರ್ ಬಿಡುಗಡೆ
ಈ ಮೂಲಕ ಜನರಲ್ಲಿ ಭಾವನಾತ್ಮಕ ಪ್ರಚೋದನೆ ಮಾಡಿ ಮತ ಸೆಳೆಯುವ ಯತ್ನ ನಡೆದಿದೆ. ಇದಕ್ಕೆ ಪ್ರತಿಯಾಗಿ ಸಿದ್ದರಾಮಯ್ಯ ಬಣ ಬಿಜೆಪಿಯ ಹೆಸರಿನಲ್ಲೆ ಸಿದ್ದರಾಮಯ್ಯ ಅವರ ಅಭಿವೃದ್ಧಿಯ ಕನಸುಗಳಿಗೆ ಜೈಕಾರ ಹಾಕುವ ಇಮೇಜ್ಗಳನ್ನು ಸೃಷ್ಟಿಸಿ ಜನರನ್ನು ಗೊಂದಲ ಉಂಟು ಮಾಡುವ ಯತ್ನ ನಡೆಸಿದೆ.
Siddu Nija Kanasugalu, Siddaramaiah, BJP, Book,