ನವದೆಹಲಿ,ನ.2- ಪಂಜಾಬಿ ಗಾಯಕ ಸಿಧು ಮೂಸೆ ವಾಲಾ ಹತ್ಯೆಯ ಪ್ರಮುಖ ಸಂಚುಕೋರರಲ್ಲಿ ಒಬ್ಬನಾದ ಗ್ಯಾಂಗ್‍ಸ್ಟರ್ ಗೋಲ್ಡಿ ಬ್ರಾರ್‍ನನ್ನು ಅಮೆರಿಕಾದಲ್ಲಿ ಬಂಧಿಸಲಾಗಿದೆ ಎಂದು ವರದಿಯಾಗಿದೆ. ಗ್ಯಾಂಗ್‍ಸ್ಟರ್ ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್‍ನ ಸದಸ್ಯ ಗೋಲ್ಡಿ ಬ್ರಾರ್ ಇತ್ತೀಚೆಗೆ ಕೆನಡಾದಿಂದ ಅಮೆರಿಕಾಕ್ಕೆ ಬಂದು ನೆಲೆಸಿದ್ದು, ಕೆಲ ದಿನಗಳ ಹಿಂದಷ್ಟೆ ಆತನನ್ನು ಕ್ಯಾಲಿಫೋರ್ನಿಯಾ ಪೊಲೀಸರು ಬಂಧಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಆದರೆ, ಗೋಲ್ಡಿಬ್ರಾರ್ ಬಂಧನ ಕುರಿತಂತೆ ಅಮೆರಿಕಾದಿಂದ ಭಾರತಕ್ಕೆ ಯಾವುದೇ ಅಧಿಕೃತ ಮಾಹಿತಿ ರವಾನೆಯಾಗಿಲ್ಲ ಎಂದು ಮೂಲಗಳು ವಿವರಿಸಿವೆ. ಮೂಸೆವಾಲಾ ಹತ್ಯೆಯ ಜವಾಬ್ದಾರಿಯನ್ನು ವಹಿಸಿಕೊಂಡ ಬ್ರಾರ್ ಕ್ಯಾಲಿಫೋರ್ನಿಯಾದ ಫ್ರೆಸ್ನೋ ನಗರದಲ್ಲಿ ವಾಸಿಸುತ್ತಿದ್ದರು ಮತ್ತು ಸ್ಯಾಕ್ರಮೆಂಟೊ, ಫ್ರಿಜೋವ್ ಮತ್ತು ಸಾಲ್ಟ ಲೇಕ್‍ನಂತಹ ನಗರಗಳನ್ನು ತನ್ನ ಸುರಕ್ಷಿತ ತಾಣವಾಗಿರಿಸಿಕೊಂಡಿದ್ದರು ಎನ್ನಲಾಗಿದೆ.
ಗೋಲ್ಡಿಬ್ರಾರ್ ಬಂಧನ ವಿಚಾರ ಭಾರತದ ಬೇಹುಗಾರಿಕಾ ಸಂಸ್ಥೆ ರಾ, ದೆಹಲಿ ಗುಪ್ತಚರ ಹಾಗೂ ಪಂಜಾಬ್ ಪೊಲೀಸರಲ್ಲಿ ದೊಡ್ಡ ಸಂಚಲನ ಸೃಷ್ಟಿಸಿದ್ದು, ಆತನ ಬಂಧನ ಕುರಿತಂತೆ ಹೆಚ್ಚಿನ ಮಾಹಿತಿ ಪಡೆಯಲು ಪೊಲೀಸರು ಹರಸಾಹಸ ನಡೆಸುತ್ತಿದ್ದಾರೆ.
ಗುಜರಾತ್ ಮೊದಲ ಹಂತದ ಚುನಾವಣೆ : ಶಾಂತಿಯುತ ಮತದಾನ
ತನ್ನ ಮಗ ಮೂಸೇವಾಲಾನನ್ನು ಹತ್ಯೆ ಮಾಡಿದ ಆರೋಪಿಗಳ ಸುಳಿವು ನೀಡಿದವರಿಗೆ ಎರಡು ಕೋಟಿ ರೂ.ಗಳ ಬಹುಮಾನ ನೀಡುವಂತೆ ಅವರ ತಂದೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದರು ಒಂದು ವೇಳೆ ಸರ್ಕಾರ ಬಹುಮಾನ ನೀಡಲು ಸಮ್ಮತಿಸದಿದ್ದರೆ ನಾನೇ ನನ್ನ ಜೇಬಿನಿಂದ ಬಹುಮಾನ ನೀಡುವುದಾಗಿ ಘೋಷಿಸಿದ ಒಂದು ದಿನದ ನಂತರ ಗೋಲ್ಡಿ ಬಂಧನದ ವಿಚಾರ ಹೊರಬಿದ್ದಿರುವುದು ಅಚ್ಚರಿಗೆ ಕಾರಣವಾಗಿದೆ.
ಪಂಜಾಬ್‍ನ ಮುಕ್ತಸರ್ ಸಾಹಿಬ್ ಮೂಲದ ಗೋಲ್ಡಿಬ್ರಾರ್ 2017ರಲ್ಲಿ ವಿದ್ಯಾರ್ಥಿ ವೀಸಾದ ಮೇಲೆ ಕೆನಡಾಕ್ಕೆ ಹೋಗಿದ್ದರು. ನಂತರ ಗ್ಯಾಂಗ್‍ಸ್ಟರ್ ಆಗಿ ಪರಿವರ್ತನೆಯಾಗಿದ್ದ ಆತ ಡೇರಾ ಸಚ್ಚಾಸೌದಾ ಅನುಯಾಯಿ ಹತ್ಯೆ ಪ್ರಕರಣದಲ್ಲಿ ಪ್ರಮುಖ ಸಂಚುಕೋರನಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಉಗ್ರ ಶಾರೀಕ್‍ಗೆ ಕೇರಳ ನಂಟು ಕುರಿತು ಅಧಿಕಾರಿಗಳಿಂದ ಶೋಧ
ಅದೇ ರೀತಿ ಪಂಜಾಬ್‍ನ ಮಾನ್ಸಾ ಜಿಲ್ಲಾಯಲ್ಲಿ ಸಿಧು ಮೂಸೆ ವಾಲಾ ಎಂದು ಜನಪ್ರಿಯರಾಗಿದ್ದ ಶುಭದೀಪ್ ಸಿಂಗ್ ಸಿಧು ಅವರನ್ನು ಗುಂಡಿಕ್ಕಿ ಹತ್ಯೆ ಮಾಡಲಾಗಿತ್ತು.ಈ ಪ್ರಕರಣದಲ್ಲೂ ಗೋಲ್ಡಿ ಪ್ರಮುಖ ಸಂಚುಕೋರ ಎಂದು ಗುರುತಿಸಲಾಗಿದೆ.
Sidhu Moose Wala, murder, Mastermind Goldy Brar, reportedly, detained, California,