ಸೈಮಾ ರೇಸ್‍ನಲ್ಲಿ ದರ್ಶನ್, ಪುನೀತ್

Social Share

ಬೆಂಗಳೂರು, ಆ. 22- ದಕ್ಷಿಣ ಭಾರತ ಚಿತ್ರರಂಗದಲ್ಲಿ ಪ್ರತಿಷ್ಠಿತ ಪ್ರಶಸ್ತಿಯಾಗಿ ಗುರುತಿಸಿಕೊಂಡಿರುವ ಸೈಮಾ (ಸೌತ್ ಇಂಡಿಯನ್ ಇಂಟರ್‍ನ್ಯಾಷನಲ್ ಪ್ರಶಸ್ತಿ) ಕಾರ್ಯಕ್ರಮವು ಸೆಪ್ಟೆಂಬರ್ 10 ಹಾಗೂ 11 ರಂದು ನಡೆಯಲಿದೆ.

10 ನೇ ಆವೃತ್ತಿಯ ಸಮಾರಂಭವನ್ನು ಇದೇ ಮೊದಲ ಬಾರಿಗೆ ಬೆಂಗಳೂರಿನಲ್ಲಿ ಆಯೋಜಿಸಿದ್ದು ಆ ಕಾರ್ಯಕ್ರಮದಲ್ಲಿ ಪವರ್‍ ಸ್ಟಾರ್ ಪುನೀತ್ ರಾಜ್‍ಕುಮಾರ್ ವಿಶೇಷ ನಮನ ಸಲ್ಲಿಸಲಾಗುವುದು ಎಂದು ಸೈಮಾ ಮುಖ್ಯಸ್ಥೆ ಬೃಂದಾ ಪ್ರಸಾದ್ ಅವರು ಸುದ್ದಿಗಾರರಿಗೆ ತಿಳಿಸಿದ್ದಾರೆ.

ಪ್ರತಿ ಬಾರಿ ಸೈಮಾ ಪ್ರಶಸ್ತಿ ಯಾವ ಕಲಾವಿದರು, ಯಾವ ಚಿತ್ರ ನಾಮ ನಿರ್ದೇಶನಗೊಂಡಿದೆ ಎಂಬ ಕುತೂಹಲವು ಈ ಬಾರಿಯೂ ಇದೆ. ಈ ಬಾರಿ ಸ್ಯಾಂಡಲ್‍ವುಡ್‍ನ ಸ್ಟಾರ್ ನಟರ ದಂಡೇ ಈ ಸಾಲಿನಲ್ಲಿದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ನಟನೆಯ ರಾಬರ್ಟ್ ಸಿನಿಮಾಕ್ಕಾಗಿ ಸೈಮಾ ಪ್ರಶಸ್ತಿ ನಾಮನಿರ್ದೇಶನಗೊಂಡಿದ್ದರೆ, ಪವರ್‍ ಸ್ಟಾರ್ ಪುನೀತ್ ರಾಜ್‍ಕುಮಾರ್ ಅವರು ಯುವರತ್ನ ಸಿನಮಾದ ನಟನೆಗಾಗಿ ಪ್ರಶಸ್ತಿಯ ರೇಸ್‍ನಲ್ಲಿದ್ದಾರೆ.

ಬಡವ ರಸ್ಕಲ್ ಚಿತ್ರದ ನಟನೆಗಾಗಿ ಧನಂಜಯ್, ಸಕ್ಕತ್ ಸಿನಿಮಾದಲ್ಲಿ ವಿಶಿಷ್ಟ ಪಾತ್ರದಲ್ಲಿ ಅಭಿನಯಿಸಿದ್ದ ಗೋಲ್ಡನ್ ಸ್ಟಾರ್ ಗಣೇಶ್, ಭಜರಂಗಿ 2 ಚಿತ್ರಕ್ಕಾಗಿ ಸೆಂಚುರಿಸ್ಟಾರ್ ಶಿವರಾಜ್‍ಕುಮಾರ್, ಗರುಡ ಗಮನ ವೃಷಭ ವಾಹನ ನಟನೆಗಾಗಿ ರಿಷಭ್‍ಶೆಟ್ಟಿ ಅವರು ಈ ಬಾರಿಯ ಸೈಮಾ ಪ್ರಶಸ್ತಿಯ ರೇಸ್‍ನಲ್ಲಿದ್ದಾರೆ.

ಈ ಬಾರಿಯ ಸೈಮಾ ಪ್ರಶಸ್ತಿಯ ರೇಸ್‍ನಲ್ಲಿ ಘಟಾನುಘಟಿ ಕಲಾವಿದರೇ ಇರುವುದರಿಂದ ಪ್ರಶಸ್ತಿ ಯಾರ ಪಾಲಾಗುತ್ತದೆ ಎಂಬ ಕುತೂಹಲ ಮೂಡಿದೆ.

Articles You Might Like

Share This Article