ಅಮೆರಿಕಾದಲ್ಲಿ ಮೊದಲ ಸಿಖ್ ನ್ಯಾಯಾಧೀಶೆಯಾದ ಮೋನಿಕಾ ಸಿಂಗ್

Social Share

ಹೂಸ್ಟನ್,ಜ.9- ಅಮೆರಿಕದ ಹ್ಯಾರಿಸ್ ಕೌಂಟಿ ನ್ಯಾಯಾಧೀಶರಾಗಿ ಭಾರತೀಯ ಮೂಲದ ಮನ್‍ಪ್ರೀತ್ ಮೋನಿಕಾ ಸಿಂಗ್ ಅವರು ಪ್ರಮಾಣ ವಚನ ಸ್ವೀಕರಿಸಿದ್ದು, ಯುಎಸ್‍ನ ಮೊದಲ ಮಹಿಳಾ ಸಿಖ್ ನ್ಯಾಯಾಧೀಶರು ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.

ಹೂಸ್ಟನ್‍ನಲ್ಲಿ ಹುಟ್ಟಿ ಬೆಳೆದಿರುವ ಅವರು ತನ್ನ ಪತಿ ಹಾಗೂ ಇಬ್ಬರು ಮಕ್ಕಳೊಂದಿಗೆ ಬೆಲಾರಾಯ್‍ನಲ್ಲಿ ವಾಸಿಸುತ್ತಿದ್ದು, ಅವರು ಟೆಕ್ಸಾಸ್‍ನ ಕಾನೂನು ಸಂಖ್ಯೆ 4 ರಲ್ಲಿ ಹ್ಯಾರಿಸ್ ಕೌಂಟಿ ಸಿವಿಲ್ ಕೋರ್ಟ್‍ನ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ.

1970ರ ದಶಕದಲ್ಲಿ ಸಿಂಗ್ ಅವರ ತಂದೆ ಅಮೆರಿಕಾಕ್ಕೆ ವಲಸೆ ಬಂದಿದ್ದರು. 20 ವರ್ಷಗಳಿಂದ ವಕೀಲರಾಗಿ, ಹಲವಾರು ನಾಗರಿಕ ಸಂಘಟನೆಗಳಲ್ಲಿ ತೊಡಗಿಸಿಕೊಂಡಿರುವ ಅವರು ಸಿಂಗ್ ಅವರು ಇದೀಗ ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿ ಗಮನ ಸೆಳೆದಿದ್ದಾರೆ.

ದಾವಣಗೆರೆಯಲ್ಲಿ ಕನ್ನಡಪರ ಸಂಘಟನೆಯ ತಾಲೂಕು ಅಧ್ಯಕ್ಷನ ಭೀಕರ ಹತ್ಯೆ

ಸಿಂಗ್ ಅವರು ನ್ಯಾಯಾಧೀಶರಾಗಿರುವುದು ಸಿಖ್ ಸಮುದಾಯಕ್ಕೆ ದೊಡ್ಡ ಕ್ಷಣವಾಗಿದೆ ಎಂದು ದಕ್ಷಿಣ ಏಷ್ಯಾದ ನ್ಯಾಯಾಧೀಶರಾಗಿರುವ ಭಾರತೀಯ-ಅಮೆರಿಕನ್ ಮೂಲದ ನ್ಯಾಯಾಧೀಶರವಿ ಸ್ಯಾಂಡಿಲ್ ಹೇಳಿದ್ದಾರೆ. ಸಿಂಗ್ ಅವರ ಬಣ್ಣ ಸ್ವಲ್ಪ ಭೀನ್ನವಾಗಿರಬಹುದು ಅಂದ ಮಾತ್ರಕ್ಕೆ ಅವರು ಕೇವಲ ಸಿಖ್‍ರ ರಾಯಭಾರಿಯಲ್ಲ ಆಕೆ ಎಲ್ಲ ಬಣ್ಣದ ಮಹಿಳೆಯರ ರಾಯಭಾರಿಯಾಗಿರುತ್ತಾರೆ ಎಂದು ಅವರು ಹೇಳಿದರು.

ಅಮೆರಿಕದಲ್ಲಿ ಸುಮಾರು 5 ಲಕ್ಷ ಸಿಖ್ ಜನಾಂಗದವರು ವಾಸಿಸುತ್ತಿದ್ದರೆ, ಹೂಸ್ಟನ್ ನಗರದಲ್ಲಿ 20 ಸಾವಿರಕ್ಕೂ ಹೆಚ್ಚು ಕುಟುಂಬಗಳು ನೆಲೆ ಕಂಡುಕೊಂಡಿವೆ.

Sikh, woman judge, sworn, first time, America,Monica Singh

Articles You Might Like

Share This Article