ಗ್ಯಾಂಗ್ಟಾಕ್, ಮಾ 17- ಭಾರೀ ಹಿಮಪಾತದಿಂದ ಪೂರ್ವ ಸಿಕ್ಕಿಂನ ಚಂಗು ಪ್ರದೇಶದಲ್ಲಿ ಸಿಲುಕಿದ್ದ ಮಹಿಳೆಯರು
ಮತ್ತು ಮಕ್ಕಳು ಸೇರಿದಂತೆ 1,000 ಕ್ಕೂ ಹೆಚ್ಚು ಪ್ರವಾಸಿಗರನ್ನು ಭಾರತೀಯ ಸೇನೆ ರಕ್ಷಿಸಿದೆ.
ನತು ಲಾ, ತ್ಸೋಮ್ಗೊ (ಚಾಂಗು) ಸರೋವರ ಮತ್ತು ಪಕ್ಕದ ಪ್ರದೇಶಗಳಲ್ಲಿ ತೀವ್ರವಾದ ಹಿಮಪಾತ ಉಂಟಾಗಿ ತಾಪಮಾನ ಶೂನ್ಯ ಮಟ್ಟಕ್ಕೆ ಇಳಿಸಿತು ಮತ್ತು ಪ್ರಯಾಣಿಕರ ವಾಹನಗಳು ನಿಂತುಹೋಗಿ ಭಾರಿ ಆತಂಕ ನಿರ್ಮಾಣವಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಅದೃಷ್ಟದ ಕಲ್ಲೆಂದು ನಂಬಿಸಿ ಸಾರ್ವಜನಿಕರಿಗೆ ವಂಚನೆ : ಇಬ್ಬರು ಸಿಸಿಬಿ ಬಲೆಗೆ
ಎಲ್ಲಾ ಪ್ರವಾಸಿಗರಿಗೆ ವಸತಿ, ಬಿಸಿ ಊಟ, ಬೆಚ್ಚಗಿನ ಬಟ್ಟೆ ಮತ್ತು ನಿರ್ಣಾಯಕ ವೈದ್ಯಕೀಯ ಸೌಲಭ್ಯ ಒದಗಿಸಲಾಗಿದೆ.
Sikkim, Indian, Army, Rescues, Over 1000 Tourists, Stranded, Heavy, Snowfall,