ರಾತ್ರಿಯಿಡೀ ಸುರಿದ ಮಳೆಗೆ  ಕೆಸರುಗದ್ದೆಯಾದ ಸಿಲಿಕಾನ್ ಸಿಟಿ ರಸ್ತೆಗಳು 

ಬೆಂಗಳೂರು, ಅ.12- ನಗರದಲ್ಲಿ ನಿನ್ನೆ ರಾತ್ರಿಇಡೀ ಸುರಿದ ಮಳೆಯಿಂದಾಗಿ ಸಾಕಷ್ಟು ಅನಾಹುತಗಳು ಸಂಭವಿಸಿವೆ. ಬಹುತೇಕ ತಗ್ಗು ಪ್ರದೇಶ ಗಳಿಗೆ ನೀರು ನುಗ್ಗಿದ್ದರಿಂದ ಮನೆಗಳಲ್ಲಿ ನೀರು ತುಂಬಿಕೊಂಡಿದೆ. ಇದರಿಂದಾಗಿ ಜನ ತೀವ್ರ ಸಮಸ್ಯೆ ಎದುರಿಸಬೇಕಾಯಿತು. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಸುತ್ತಮುತ್ತ ಸಂಪೂರ್ಣ ಜಲಾವೃತವಾಗಿದ್ದ ವಿಮಾನ ಪ್ರಯಾಣಿಕರು ಟ್ರ್ಯಾಕ್ಟರ್ ಮೂಲಕ ತೆರಳಬೇಕಾಯಿತು ಇದರಿಂದ ಬೆಂಗಳೂರಿನ ಮಾನ ಹರಾಜಾದಂತಾಗಿದೆ.

ಪ್ರತಿಕ್ರಿಯೆ: ಈ ಕುರಿತು ಪ್ರತಿಕ್ರಿಯಿಸಿದ ವಿಮಾನ ನಿಲ್ದಾಣ ಅಕಾರಿಯೊಬ್ಬರು, 2008ರಲ್ಲಿ ವಿಮಾನ ನಿಲ್ದಾಣ ಕಾರ್ಯಾರಂಭ ಮಾಡಿದೆ. ಆದರೆ ಈ 13 ವರ್ಷದಲ್ಲಿ ಮಳೆ ನೀರು ಈ ಮಟ್ಟದವರೆಗೂ ಬಂದಿರಲಿಲ್ಲ ಸದ ಯಾವುದೇ ಅನಾಹುತ ಸಂಭವಿಸಿಲ್ಲ ಎಂದು ತಿಳಿಸಿದರು. ಅಲ್ಲದೆ, ಇಲ್ಲಿ ಮೆಟ್ರೋ ಕಾಮಗಾರಿ ಮತ್ತು ರನ್ ವೇಗೆ ಸಂಬಂಸಿದಂತೆ ಅಂಡರ್‍ಪಾಸ್ ಮತ್ತು ರಸ್ತೆ ಕಾಮಗಾರಿಗಳು ನಡೆಯುತ್ತಿದೆ ಇದರಿಂದ ಮಳೆನೀರು ನಿಂತು ತೊಂದರೆ ಉಂಟಾಗಿದೆ ಎಂದು ಹೇಳಿದರು.

ಸಹಜ ಸ್ಥಿತಿಗೆ: ಮಳೆ ನೀರು ಸರಾಗವಾಗಿ ಹರಿದು ಹೋಗಲು ಏಪೆರ್ರ್ಟ್ಪೋ ಸಿಬ್ಬಂದಿ ಶ್ರಮಿಸಿದ ಫಲವಾಗಿ ಬೆಳಗ್ಗೆ ಏರ್‍ಪೆಪೋರ್ಟ್ ಸಹಜ ಸ್ಥಿತಿಗೆ ಮರಳಿತು. ಪಾರ್ಕಿಂಗ್ ಹಾಗೂ ರಸ್ತೆ ಮೇಲೆ ನಿಂತಿದ್ದ ಮಳೆ ನೀರು ಕಡಿಮೆಯಾಗಿದೆ. ಹೀಗಾಗಿ ವಿಮಾನ ನಿಲ್ದಾಣ ಎಂದಿನಂತೆ ಕಾರ್ಯ ನಿರ್ವಹಿಸುತ್ತಿದೆ ಎಂದು ತಿಳಿಸಿದರು.

ಕೆ.ಆರ್. ಮಾರುಕಟ್ಟೆ ಅದ್ವಾನ : ನಗರದ ಕೆ.ಆರ್.ಮಾರುಕಟ್ಟೆ ಯಲ್ಲೂ ನೀರು ನುಗ್ಗಿದ ಪರಿಣಾಮ ವ್ಯಾಪಾರಿಗಳು ಪರದಾಡಬೇಕಾಯಿತು.
ನಗರದ ವಿವಿಧ ಭಾಗಗಳಲ್ಲಿ ಕಾರು, ಬೈಕ್‍ಗಳು ಕೂಡ ನೀರಲ್ಲಿ ಅರ್ಧದಷ್ಟು ಮುಳುಗ್ಗಿದ್ದರಿಂದ ಸವಾರರು ತೀವ್ರ ತೊಂದರೆ ಅನುಭವಿಸಿದರು.

ಭಾಷ್ಯಂ ವೃತ್ತ, ಸದಾಶಿವನಗರ, ರಾಜಾಜಿನಗರ ರಸ್ತೆಗಳಲ್ಲಿ ನೀರು ನಿಂತಿದ್ದು ಬೆಳಿಗ್ಗೆ ಸ್ವಲ್ಪ ಬಿಸಿಲು ಬಂದಿದ್ದರಿಂದ ಜನ ನಿಟ್ಟುಸಿರು ಬಿಟ್ಟಿದ್ದಾರೆ.
ವಸಂತನಗರದಲ್ಲಿ ಕೆಲ ರಸ್ತೆಗಳಲ್ಲಿ ಮರಗಳು ಧರೆಗುರುಳಿವೆ. ಗಾಯತ್ರಿನಗರದಲ್ಲಿ ಮನೆಗಳಿಗೆ ಕಾಲುವೆ ನೀರು ನುಗ್ಗಿದ ಘಟನೆ ಕೂಡ ನಡೆದಿದೆ.ಬೊಮ್ಮನಹಳ್ಳಿ, ಪಶ್ಚಿಮ ಹಾಗೂ ದಕ್ಷಿಣ ವಲಯ ಗಳಲ್ಲಿ ಹೆಚ್ಚು ಮಳೆಯಾಗುತ್ತಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.

ಮಳೆಗೆ ಕುಸಿದ ಕಾಂಪೌಂಡ್: ನಿರಂತರ ಮಳೆಯಿಂದ ಶೇಷಾದ್ರಿ ಪುರಂನಲ್ಲಿ ತಡೆಗೋಡೆ ಕುಸಿದಿದೆ. ರಸ್ತೆಗೆ ಅಡ್ಡಲಾಗಿ ಮಣ್ಣು, ಕಲ್ಲು ಕುಸಿದು ಬೀಳುವುದನ್ನು ತಡೆಯಲು ಮಣ್ಣಿನ ಚೀಲ ಇಡಲಾಗಿದೆ. ಇನ್ನು, ತಡೆಗೋಡೆಗೆ ಹೊಂದಿಕೊಂಡ ಮನೆ ಕುಸಿಯುವ ಸಾಧ್ಯತೆಯಿದೆ ಆತಂಕ ಎದುರಾಗಿದೆ. ಹೀಗಾಗಿ ನಿವಾಸಿಗಳು ತಮ್ಮ ವಸ್ತುಗಳ ಸಮೇತ ಮನೆ ಖಾಲಿ ಮಾಡಿದ್ದಾರೆ.

ಕೆಸರು ಗದ್ದಾಯಾದ ರಸ್ತೆಗಳು:
ನಗರದಲ್ಲಿ ರಾತ್ರಿ ಸುರಿದ ಧಾರಕಾರ ಮಳೆಯಿಂದ ಇಲ್ಲಿನ ಕೊತ್ತನೂರು ಮುಖ್ಯ ರಸ್ತೆ ಸೇರಿದಂತೆ ಸ್ಮಾರ್ಟ್ ಸಿಟಿ, ಇನ್ನಿತರೆ ಕಾಮಗಾರಿ ನಡೆಯುತ್ತಿರುವ ರಸ್ತೆಗಳು ಕೆಸರು ಗದ್ದಾಯಂತೆ ಮಾರ್ಪಾಟ್ಟಿದ್ದು ವಾಹನ ಸವಾರರು ಸಂಚರೊಸಲು ಪರದಾಡಿದ್ದಾರೆ.