ಹಾಸನ,ಜ.14- ಕಾಫಿ ತೋಟದಲ್ಲಿ ಕೆಲಸ ಮಾಡುವಾಗ ಪುರಾತನ ಕಾಲದ 28 ಬೆಳ್ಳಿ ನಾಣ್ಯಗಳು ಪತ್ತೆಯಾಗಿವೆ. ಸಕಲೇಶಪುರ ತಾಲ್ಲೂಕಿನ ಹಾಲೆಬೇಲೂರು ಗ್ರಾಮದ ಶ್ಯಾಮ್ ಎಂಬುವವರ ಕಾಫಿ ತೋಟದಲ್ಲಿ ಕಾರ್ಮಿಕನೊಬ್ಬ ಕೆಲಸ ಮಾಡುತ್ತಿದ್ದಾಗ ಬ್ರಿಟಿಸ್ ಕಾಲದ ಒಂದು ರೂ. ಮುಖ ಬೆಲೆಯ ರಾಣಿ ವಿಕ್ಟೋರಿಯಾ ಅವರ ಚಿತ್ರವಿರುವ 28 ಬೆಳ್ಳಿ ನಾಣ್ಯಗಳು ಪತ್ತೆಯಾಗಿದ್ದು, ಮಾಲೀಕನಿಗೆ 9 ನಾಣ್ಯಗಳನ್ನು ಕೊಟ್ಟು ಉಳಿದ ನಾಣ್ಯಗಳನ್ನು ಕಾರ್ಮಿಕ ಹರೀಶ್ ಬಚ್ಚಿಟ್ಟುಕೊಂಡಿದ್ದ.
ವಿಷಯ ತಿಳಿದ ಪೊಲೀಸರು ಹರೀಶ್‍ನನ್ನು ಬಂಸಿ ಬೆಳ್ಳಿ ನಾಣ್ಯಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. 1860ರಿಂದ 1904ರ ನಡುವಿನ ನಾಣ್ಯಗಳೆಂದು ಹೇಳಲಾಗಿದ್ದು, ಲಕ್ಷಾಂತರ ರೂ. ಬೆಲೆ ಬಾಳಲಿವೆ ಎಂದು ತಿಳಿದು ಬಂದಿದೆ. ಈ ಸಂಬಂಧ ಸಕಲೇಶಪುರ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
