ಬೆಂಗಳೂರು,ಜ.31- ಪ್ರಚಾರಕ್ಕಾಗಿ ಕೇವಲ ಘೋಷಣೆ ಮಾಡದೆ ಯೋಜನೆಗಳಿಗೆ ಹಣ ಮೀಸ ಲಿಡಬೇಕು ಆಗ ಮಾತ್ರ ಜನರ ನಿರೀಕ್ಷೆಗಳನ್ನು ಈಡೇರಿಸಲು ಸಾಧ್ಯವಾಗುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು. ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ವಸತಿ ಇಲಾಖೆ ವತಿಯಿಂದ ಹಮ್ಮಿಕೊಂಡಿದ್ದ ರಾಜೀವ್ಗಾಂ ವಸತಿ ನಿಗಮದಿಂದ ಮುಖ್ಯಮಂತ್ರಿಗಳ 1 ಲಕ್ಷ ಬಹುಮಹಡಿ ವಸತಿ ಯೋಜನೆಯಡಿ ನಿರ್ಮಿಸಿದ್ದ ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ ಅವರು ಮಾತನಾಡಿದರು.
ಹಿಂದಿನ ಕಾಂಗ್ರೆಸ್ ಸರ್ಕಾರ ಚುನಾವಣೆಗೂ ಮುನ್ನ 15 ಲಕ್ಷ ಮನೆ ಕಟ್ಟುವ ಘೋಷಣೆ ಮಾಡಿ ಅದಕ್ಕೆ ಹಣ ಮೀಸಲಿಡದೆ ಓಡಿಹೋದರು. ಈ ಯೋಜನೆಗೆ ಬೇಕಾಗಿದ್ದು 15 ಸಾವಿರ ಕೋಟಿ. ಮೀಸಲಿಟ್ಟಿದ್ದು ಕೇವಲ 3 ಸಾವಿರ ಕೋಟಿ ಎಂದು ದೂರಿದರು.
ಆಡಳಿತ ನಡೆಸುವವರು ಒಂದನ್ನು ಅರ್ಥ ಮಾಡಿಕೊಳ್ಳಬೇಕು. ಈಗಿನ ಜನರು ತುಂಬ ಬುದ್ದಿವಂತರು. ಸುಳ್ಳು ಭರವಸೆ ಕೊಟ್ಟು ಜನರನ್ನು ದಾರಿ ತಪ್ಪಿಸಲು ಸಾಧ್ಯವಿಲ್ಲ. ಎಲ್ಲ ಸಮಯದಲ್ಲಿ ಎಲ್ಲರನ್ನು ಮೋಸ ಮಾಡಲು ಸಾಧ್ಯವಿಲ್ಲ ಎಂದು ಪರೋಕ್ಷವಾಗಿ ಕಾಂಗ್ರೆಸ್ ಹೆಸರು ಹೇಳದೆ ಸಿಎಂ ವಾಗ್ದಾಳಿ ನಡೆಸಿದರು.
ಮನುಷ್ಯನ ಆಸೆ ತಾನು ತನ್ನ ಕುಟುಂಬ ಸುರಕ್ಷಿತವಾಗಿ ಇರಬೇಕು ಎನ್ನುವುದು. ಮನುಷ್ಯ ಬಿಡಿ ಪಕ್ಷಿಗಳು ಒಂದು ಗೂಡು ಕಟ್ಟಿ ಇರಬೇಕೆಂಬ ಬಯಕೆ ಇರುತ್ತದೆ. ಬೃಹತ್ ಪ್ರಮಾಣದಲ್ಲಿ ಬೆಳೆಯುತ್ತಿರುವ ನಾಗರಿಕತೆಯಲ್ಲಿ ಬಡವರಿಗೆ ಮನೆ ಕಟ್ಟಿ ಕೊಡುವ ಕೆಲಸ ಆಗಬೇಕು. ಸರ್ಕಾರ ಈ ಕೆಲಸ ಮಾಡಬೇಕು ಎಂದರು.
ನಾವು ಅಧಿಕಾರಕ್ಕೆ ಬಂದ ಮೇಲೆ 10 ಲಕ್ಷ ಮನೆ ನಿರ್ಮಾಣದ ಗುರಿ ಹೊಂದಿ ಈಗಾಗಲೇ 5 ಲಕ್ಷ ಮನೆ ನಿರ್ಮಾಣ ಮಾಡಲಾಗಿದೆ. ಈಗಾಗಲೇ ನಾವು ಹೇಳಿದಂತೆ ಕಾರ್ಯಕ್ರಮ ಮಾಡಿದ್ದೇವೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಮುಖ್ಯಮಂತ್ರಿಗಳ 1 ಲಕ್ಚ ಮನೆ ನಿರ್ಮಾಣ ಮಾಡುವ ಘೋಷಣೆ ಮಾಡಿದರು. ಅದಕ್ಕೆ ಜಾಗವೆ ಇರಲಿಲ್ಲ.
ನಾವು ಬಂದ ಮೆಲೆ 492 ಎಕರೆ ಜಮೀನು ಬೇರೆ ಬೇರೆ ಪ್ರದೇಶದಲ್ಲಿ ಜಮಿನು ಪಡೆದು ಮೊದಲ ಹಂತದಲ್ಲಿ 5000 ಮನೆಗಳನ್ನು ನೀಡಲಾಗುತ್ತಿದೆ. ಹಂತ ಹಂತವಾಗಿ 50 ಸಾವಿರ ಮನೆಗಳನ್ನು ಹಸ್ತಾಂತರಿಸಲಾಗುವುದು ಎಂದು ತಿಳಿಸಿದರು.
ಬರುವಂತ ದಿನಗಳಲ್ಲಿ ರಾಜ್ಯದಲ್ಲಿ ಮನೆ ಕಟ್ಟುವುದು ಕಷ್ಟ. ನಮ್ಮ ಕಂದಾಯ ಕಾಯ್ದೆಯಲ್ಲಿ ಮನೆ ಕಟ್ಟಲು ರ್ನಿಷ್ಟ ಕಾಯ್ದೆಗಳಿಲ್ಲ. ನಾವು ಮಾಡಿರುವ ಕಾನೂನುಗಳಿಂದ ಜನರು ಮನೆ ಕಟ್ಟಲು ಜಾಗ ಪಡೆಯಲು ಅವಕಾಶವಿಲ್ಲದಂತಾಗಿದೆ. ಮನೆ ಕಟ್ಟಲು ಅವಕಾಶ ಸಿಗುವಂತೆ ಕಾನೂನಿಗೆ ತಿದ್ದುಪಡಿ ತಂದು ಕಾನೂನು ಸರಳೀಕರಣ ಮಾಡಲಾಗುವುದು. ಕಡಿಮೆ ಬೆಲೆಗೆ ಮನೆ ಕಟ್ಟಲು ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ನಮ್ಮ ಸರ್ಕಾರ ಸಮಸ್ಯೆಯನ್ನು ಬಿಟ್ಟು ಹೊಗುವುದಿಲ್ಲ ಪರಿಹಾರ ಕೊಟ್ಟು ಹೊಗುತ್ತೇವೆ. ವಿಶ್ವನಾಥ ಅವರು ಜನೋಪಯೊಗಿ ಶಾಸಕರು. ಜನರ ಪರ ಕೆಲಸ ಮಾಡುವವರು ಮಾತ್ರ ಜನೋಪಯೋಗಿ ಶಾಸಕರಾಗುತ್ತಾರೆ. ವಿಶ್ವನಾಥ ಶಾಸಕರಾದ ಮೇಲೆ ಯಲಹಂಕ ಚಿತ್ರಣವೇ ಬೇರೆ ಆಗಿದೆ. ಗ್ರಾಮೀಣ ಮತ್ತು ನಗರ ಪ್ರದೇಶ ಎರಡನ್ನೂ ಯಶಸ್ವಿಯಾಗಿ ನಿಭಾಯಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
#Simplification, #law, #construction, #house #lowcost,