2006ರಿಂದ ಎಲ್ಲಾ ಹಗರಣಗಳ ಕುರಿತು ತನಿಖೆಗೆ ಸಿದ್ದರಾಮಯ್ಯ ಒತ್ತಾಯ

Social Share

ಬೆಂಗಳೂರು,ಸೆ.20-ಕಳೆದ 2006ರಿಂದ ಇಲ್ಲಿಯವರೆಗೆ ಕೇಳಿಬಂದಿರುವ ಎಲ್ಲ ಹಗರಣಗಳ ಆರೋಪವನ್ನು ತನಿಖೆಗೆ ಒಳಪಡಿಸಿ ಎಂದು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದರು. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯವರು ನಮ್ಮ ಕಾಲದಲ್ಲೂ ಹಗರಣಗಳಿವೆ ಎಂದು ಹೇಳುತ್ತಿದ್ದಾರೆ. ನಮ್ಮ ಸರ್ಕಾರ ಇದ್ದಾಗ ಇವರು ಏನು ಮಾಡುತ್ತಿದ್ದರು. ಹೈಕೋರ್ಟ್ ಹಾಲಿ ನ್ಯಾಯಮೂರ್ತಿಗಳ ನೇತೃತ್ವದಲ್ಲಿ ತನಿಖೆಯಾಗಲಿ ಎಂದರು.

ಇದನ್ನೂ ಓದಿ : ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪರಿಸರ ಪ್ರೇಮಿ ವೀರಚಾರಿ ಆತ್ಮಹತ್ಯೆ

ಇದಕ್ಕಿಂತ ಇನ್ನೇನು ಹೇಳಲು ಸಾಧ್ಯ. ಅವರ ಬುಟ್ಟಿಯಲ್ಲಿ ಹಾವಿಲ್ಲ. ಆದರೂ ಬುಟ್ಟಿಯಿಂದ ಬುಸ್ ಬುಸ್ ಎಂಬ ಶಬ್ದ ಬರುತ್ತಿದೆ ಎಂದು ವ್ಯಂಗ್ಯವಾಡಿದರು. ಸ್ವಾತಂತ್ರ ಉದ್ಯಾನವನದಲ್ಲಿ ಪ್ರತಿಭಟನೆ ಮಾಡುತ್ತಿದ್ದಾರೆ. ಪಿಎಸ್‍ಐ ಹಗರಣದ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಲಾಗುವುದು. ವಯೋಮಿತಿ ಹೆಚ್ಚಳದ ಬಗ್ಗೆಯೂ ಪ್ರಸ್ತಾಪಿಸುತ್ತೇನೆ.

ಪ್ರತಿಭಟನಾನಿರತರು ಲಂಚ ಕೊಡುವುದಕ್ಕೆ ಆಗುವುದಿಲ್ಲ. ಬೆಳೆದಿರುವ ಅಕ್ಕಿ, ಕಾಳು ಕೊಡುತ್ತೇವೆ ಎಂದಿದ್ದಾರೆ. ಸಭಾಧ್ಯಕ್ಷರ ಮೂಲಕ ಅಕ್ಕಿ, ಕಾಳು ಎಲ್ಲವನ್ನು ಕೊಡುತ್ತೇನೆ ಎಂದರು.

Articles You Might Like

Share This Article