ಸಿಂದಗಿಯಲ್ಲಿ ಬಿಜೆಪಿ ಮತ್ತು ಹಾನಗಲ್‌ನಲ್ಲಿ ಕಾಂಗ್ರೆಸ್ ಗೆಲುವು, ಜೆಡಿಎಸ್‌ಗೆ ನಿರಾಸೆ

Spread the love

ಬೆಂಗಳೂರು,ನ.2- ಹಾನಗಲ್ ವಿಧಾನಸಭೆ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ 7426 ಮತ್ತು ಸಿಂಧಗಿ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿ 31,088 ಮತಗಳ ಅಂತರದಿಂದ ಜಯಗಳಿಸಿದ್ದಾರೆ. ಅ.30ರಂದು ಎರಡೂ ಕ್ಷೇತ್ರಗಳಿಗೆ ನಡೆದಿದ್ದ ಚುನಾವಣೆ ಫಲಿತಾಂಶ ಇಂದು ಪ್ರಕಟಗೊಂಡಿದೆ. ಸಿಂಧಗಿ ಕ್ಷೇತ್ರದಲ್ಲಿ ಬಿಜೆಪಿ ಶೇ.57.31ರಷ್ಟು ಮತ ಪಡೆದರೆ, ಕಾಂಗ್ರೆಸ್ ಶೇ.38.27ರಷ್ಟು, ಜೆಡಿಎಸ್ ಶೇ.2.66ರಷ್ಟು ಮತಗಳಿಸಿದೆ.

ಕಾಂಗ್ರೆಸ್ ಅಭ್ಯರ್ಥಿ ಅಶೋಕ್ ಮನಗೂಳಿ 62,292 ಮತ ಪಡೆದರೆ, ಬಿಜೆಪಿಯ ರಮೇಶ್ ಭೂಸನೂರು 93,380 ಮತಗಳನ್ನು ಪಡೆದಿದ್ದಾರೆ. ಜೆಡಿಎಸ್‍ನ ನಾಜಿಯಾ ಅಂಗಡಿ 4321, ಕರ್ನಾಟಕ ರಾಷ್ಟ್ರೀಯ ಸಮಿತಿ ಅಭ್ಯರ್ಥಿ ಡಾ.ಸುನೀಲ್‍ಕುಮಾರ್ ಹೆಬ್ಬಿ 916, ಪಕ್ಷೇತರರಾದ ಜಿಲಾನಿ ಗುದುಸಾಬ್ ಮುಲ್ಲಾ 505, ದೀಪಕಾ ಎಸ್.409 ಮತಗಳನ್ನು ಪಡೆದಿದ್ದಾರೆ. 1029 ನೋಟಾ ಮತಗಳು ಚಲಾವಣೆಯಾಗಿವೆ.

ಹಾನಗಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಶೇ.50.95ರಷ್ಟು, ಬಿಜೆಪಿ ಶೇ.46.55ರಷ್ಟು, ಜೆಡಿಎಸ್ ಶೇ.0.54ರಷ್ಟು ಮತಗಳನ್ನು ಪಡೆದಿವೆ. ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ್ ಮಾನೆ 87,300 ಮತ ಪಡೆದರೆ, ಬಿಜೆಪಿ ಅಭ್ಯರ್ಥಿ 79,874 ಮತ ಪಡೆದಿದ್ದಾರೆ. ಜೆಡಿಎಸ್‍ನ ನಿಯಾಜ್‍ಶೇಕ್ 923 ಮತ ಪಡೆದಿದ್ದಾರೆ.

ಕರ್ನಾಟಕ ರಾಷ್ಟ್ರೀಯ ಸಮಿತಿಯ ಉದ್ದೇಚಪ್ಪಾ ಬಸವನಪ್ಪ ಉದ್ದಾನಕಾಲ ಅವರು 583, ರಾಷ್ಟ್ರೀಯ ಭಾರತ್ ಪಾರ್ಟಿಯ ಪಕೀರಗೌಡ ಶಂಕರಗೌಡ ಗಜೀಗೌಡರ 105, ಲೋಕಶಕ್ತಿ ತಲವಾರ್ ಶಿವಕುಮಾರ್ 65, ಪಕ್ಷೇತರರಾದ ಉಮೇಶ್ ಕೃಷ್ಣಪ್ಪ ದಿವ್ಯಾಜ್ಞ 45, ನಜೀರ್ ಅಹಮ್ಮದ್ ಸವಣೂರ್ 649, ಪರುಷುರಾಮ ಹೊನಗಲ್ 50, ಸಿದ್ದಪ್ಪಕಾಲಪ್ಪ ಪೂಜಾರ್ 168, ಎಸ್.ಎಸ್.ದೊಡ್ಡಲಿಂಗಣ್ಣನವರ್ 149 ಮತಗಳನ್ನು ಪಡೆದರೆ, ಕೊತ್ತಂಬರಿ ಸೋಮಶೇಖರ ಮಹದೇವಪ್ಪ 426, ಹೊನ್ನಪ್ಪ ಹನುಮಂತಪ್ಪ ಹಕ್ಕಿವಳ್ಳಿ 389 ಮತಗಳಿಸಿದ್ದಾರೆ. 529 ನೋಟಾ ಮತಗಳು ಚಲಾವಣೆಯಾಗಿವೆ.

# ಸಿಂದಗಿ :
ಬಿಜೆಪಿ : ರಮೇಶ್ ಬೂಸನೂರ್ – 93380 – ಗೆಲುವು
ಕಾಂಗ್ರೆಸ್ : ಅಶೋಕ್ ಮನಗೊಳಿ –  62292 – ಸೋಲು
ಜೆಡಿಎಸ್ : ನಾಜಿಯಾ ಅಂಗಡಿ    – 4353- ಸೋಲು
ಇತರೆ :

# ಹಾನಗಲ್ :
ಬಿಜೆಪಿ : ಶಿವರಾಜ್ ಸಜ್ಜನರ್ – 75999 – ಸೋಲು
ಕಾಂಗ್ರೆಸ್ : ಶ್ರೀನಿವಾಸ್ ಮಾನೆ – 83324 – ಗೆಲುವು
ಜೆಡಿಎಸ್ : ನೀರಜ್ ಶೇಕ್ – 921 – ಸೋಲು
ಇತರೆ :                          –

 

Facebook Comments

Sri Raghav

Admin