ಸಿಂಗಾಪುರ್, ಜು. 17- ಭಾರತದ ಖ್ಯಾತ ಶೆಟರ್ ಆಟಗಾರ್ತಿ ಪಿ.ವಿ.ಸಿಂಧು ಅವರು ಸಿಂಗಾಪುರ್ ಓಪನ್‍ನ ಫೈನಲ್ ಪಂದ್ಯದಲ್ಲಿ ಗೆಲ್ಲುವ ಮೂಲಕ ತಮ್ಮ ಜೀವನದ ಚೊಚ್ಚಲ ಸೂಪರ್ 500 ಪ್ರಶಸ್ತಿಯನ್ನು ಗೆದ್ದು ಸಂಭ್ರಮಿಸಿದ್ದಾರೆ.
ಜುಲೈ 28ರಿಂದ ಕಾಮನ್‍ವೆಲ್ತ್ ಕ್ರೀಡಾಕೂಟಗಳು ನಡೆಯುವ ಸಂದರ್ಭದಲ್ಲಿ ಬ್ಯಾಡ್ಮಿಂಟನ್ ಆಟಗಾರ್ತಿ, 2 ಬಾರಿ ಒಲಿಂಪಿಕ್ಸ್ ವಿಜೇತೆ ಪಿ.ವಿ.ಸಿಂಧು ಅವರು ಸಿಂಗಾಪೂರ್ ಓಪನ್À ಪ್ರಶಸ್ತಿಯನ್ನು ಗೆದ್ದಿದ್ದು ಕಾಮನ್‍ವೆಲ್ತ್ ಗೇಮ್ಸ್‍ನಲ್ಲೂ ಪದಕ ಗೆಲ್ಲುವ ಭರವಸೆ ಮೂಡಿಸಿದ್ದಾರೆ.
ಸಿಂಗಾಪುರ್ ಓಪನ್‍ನ ಫೈನಲ್ ಪಂದ್ಯದಲ್ಲಿ ಭಾರತದ ಪಿ.ವಿ.ಸಿಂಧು ಅವರು ಚೀನಾದ ವಾಂಗ್ ಜೆ ವೈ ಅವರ ಸವಾಲನ್ನು ಎದುರಿಸಿದರು. ಮೊದಲ ಸುತ್ತಿನಲ್ಲಿ 21-9 ಅಂತರದಿಂದ ಪಂದ್ಯ ಗೆದ್ದು ಶುಭಾರಂಭ ಮಾಡಿದ ಸಿಂಧು ಎರಡನೇ ಸುತ್ತಿನಲ್ಲಿ ವಾಂಗ್‍ರ ಕಠಿಣ ಸವಾಲನ್ನು ಎದುರಿಸಿ 11-21 ಭಾರೀ ಸೆಟ್‍ನಿಂದ ಪರಾಭವಗೊಂಡರು.
ಪ್ರಶಸ್ತಿ ಗೆಲ್ಲಲು ನಿರ್ಣಾಯಕವಾಗಿದ್ದ ಅಂತಿಮ ಸೆಟ್‍ನಲ್ಲಿ ಮತ್ತೆ ಹೋರಾಟದ ಪ್ರವೃತ್ತಿ ತೋರಿದ ಸಿಂಧು 21-15 ರಿಂದ ವಿಜಯ ಸಾಸುವ ಮೂಲಕ ಸೈನಾ ನೆಹ್ವಾಲ್ ನಂತರ ಸಿಂಗಾಪುರ್ ಓಪನ್ ಪ್ರಶಸ್ತಿ ಗೆದ್ದ ಆಟಗಾರ್ತಿ ಎಂಬ ಕೀರ್ತಿಗೆ ಪಿ.ವಿ.ಸಿಂಧು ಭಾಜನರಾದರು.