180 ಭಾರತೀಯ ವೈದ್ಯರ ನೇಮಕಕ್ಕೆ ಸಿಂಗಾಪುರ ನಿರ್ಧಾರ

Social Share

ಸಿಂಗಾಪುರ,ಅ.4- ಮುಂದಿನ ಮೂರು ವರ್ಷಗಳಲ್ಲಿ ಭಾರತದ 180 ಕಿರಿಯ ವೈದ್ಯರನ್ನು ನೇಮಿಸಿಕೊಳ್ಳಲು ಸಿಂಗಾಪುರ ಮುಂದಾಗಿದೆ. 2022 ರಿಂದ 2024 ರವರೆಗೆ ಭಾರತದಿಂದ ವಾರ್ಷಿಕವಾಗಿ 60 ವೈದ್ಯಕೀಯ ಅಧಿಕಾರಿಗಳನ್ನು ನೇಮಕ ಮಾಡುವ ಗುರಿಯನ್ನು ಹೊಂದಿದೆ, ಯೋಜನೆಯನ್ನು 2025 ಕ್ಕೂ ವಿಸ್ತರಿಸುವ ಸಾಧ್ಯತೆಯಿದೆ ಎಂದು ತಿಳಿದುಬಂದಿದೆ.

ಸಿಂಗಾಪುರದಲ್ಲಿರುವ ವೈದ್ಯರು ಭಾರೀ ಕೆಲಸದ ಹೊರೆ ಕಡಿಮೆ ಮಾಡಲು ಮತ್ತು ಅದರ ಆರೋಗ್ಯ ಸಾಮಥ್ರ್ಯದ ಅಗತ್ಯಗಳನ್ನು ಪೂರೈಸಲು ವಿದೇಶಿ ವೈದ್ಯರನ್ನು ನೇಮಿಸಿಕೊಳ್ಳಲಾಗುತ್ತಿದೆ ಎಂದು ಸಿಂಗಾಪುರದ ಸಾರ್ವಜನಿಕ ಆರೋಗ್ಯ ಸಂಸ್ಥೆ ತಿಳಿಸಿದೆ.
ಈ ಯೋಜನೆಯಡಿ ಭಾರತದಿಂದ ಮುಂದಿನ ಮೂರು ವರ್ಷಗಳಲ್ಲಿ 180 ವೈದ್ಯರು ಹಾಗೂ ಆಸ್ಟ್ರೇಲಿಯಾ ಮತ್ತು ಬ್ರಿಟನ್ ವೈದ್ಯರ ನೇಮಕಕ್ಕೂ ತೀರ್ಮಾನಿಸಲಾಗಿದೆ ಎಂದು ಸಂಸ್ಥೆ ಹೇಳಿಕೊಂಡಿದೆ.

ವಿದೇಶಗಳಲ್ಲಿ ವೈದ್ಯಕೀಯ ನೋಂದಣಿ ಕಾಯಿದೆಯಲ್ಲಿ ಪಟ್ಟಿ ಮಾಡಲಾದ ವೈದ್ಯಕೀಯ ಶಾಲೆಗಳಿಂದ ಪದವಿ ಪಡೆದ ಅಭ್ಯರ್ಥಿಗಳನ್ನು ಹುಡುಕುತ್ತಿರುವುದಾಗಿ ಕಂಪನಿ ಹೇಳಿದೆ.

ಹಲವಾರು ಆನ್‍ಲೈನ್ ಬಳಕೆದಾರರು ಈ ಹಿಂದೆ ಭಾರತೀಯ ವೈದ್ಯರನ್ನು ಆಮದು ಮಾಡಿಕೊಳ್ಳುವ ನಿರ್ಧಾರವನ್ನು ಪ್ರಶ್ನಿಸಿದರು, ಕೆಲವರು ನಕಲಿ ಪ್ರಮಾಣೀಕರಣದ ಬಗ್ಗೆ ತಮ್ಮ ಆತಂಕವನ್ನು ವ್ಯಕ್ತಪಡಿಸಿದ್ದರು. ಆದರೂ ಸಿಂಗಾಪುರ ಭಾರತೀಯ ವೈದ್ಯರಿಗೆ ಮಣೆ ಹಾಕಲು ಮುಂದಾಗಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.

Articles You Might Like

Share This Article