ಆಸ್ತಿ ಕಬಳಿಕೆಗೆ ಯತ್ನ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪತಿ ವಿರುದ್ಧ ದೂರು

Social Share

ಬೆಂಗಳೂರು, ಡಿ.5- ತಮ್ಮ ಸ್ವಾಧೀನದಲ್ಲಿರುವ ಫಾರಂಹೌಸ್‍ಗೆ ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಅವರ ಪತಿ ಅತಿಕ್ರಮವಾಗಿ ನುಗ್ಗಿ ಆಸ್ತಿ ಕಬಳಿಸಲು ಯತ್ನಿಸಿದ್ದಾರೆ ಎಂದು ಗಾಯಕ ಲಕ್ಕಿ ಆಲಿ ಆರೋಪಿಸಿದ್ದಾರೆ.

ನಟ ಹಾಗೂ ಹಾಸ್ಯ ಕಲಾವಿದರಾಗಿದ್ದ ದಿವಂಗತ ಮೊಹಮ್ಮದ್ ಆಲಿ ಅವರ ಪುತ್ರ ಮಸೂದ್ ಮೊಹಮ್ಮದ್ ಆಲಿ ಎಂದು ಹೇಳಲಾದ ಲಕ್ಕಿ ಆಲಿ ಎಂಬ ಗಾಯಕರು ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸರಣಿ ಟ್ವೀಟ್‍ಗಳ ಮೂಲಕ ದೂರು ನೀಡಿದ್ದಾರೆ.

ತುರ್ತು ಕೆಲಸದ ನಿಮಿತ್ತ ನಾನು ದುಬೈಗೆ ಬಂದಿದ್ದೇನೆ. ಬೆಂಗಳೂರಿನ ಯಲಹಂಕದ ಕೆಂಚೇನಹಳ್ಳಿಯಲ್ಲಿರುವ ಟ್ರಸ್ಟ್ ಒಡೆತನಕ್ಕೆ ಸೇರಿದ್ದ ನಮ್ಮ ಫಾರಂಹೌಸ್‍ಗೆ ಸುೀಧಿರ್ ರೆಡ್ಡಿ ಮತ್ತು ಮಧು ರೆಡ್ಡಿ ಎಂಬ ವ್ಯಕ್ತಿಗಳು ನುಗ್ಗಿ ಅತಿಕ್ರಮವಾಗಿ ಪ್ರವೇಶಿಸಲು ಪ್ರಯತ್ನಿಸಿದ್ದಾರೆ. ಐಎಎಸ್ ಅಧಿಕಾರಿಯಾಗಿರುವ ರೋಹಿಣಿ ಸಿಂಧೂರಿ ಅವರ ಸಹಾಯದ ಮೂಲಕ ಈ ಕೆಲಸ ಮಾಡಲಾಗಿದೆ ಎಂದು ದೂರಿದ್ದಾರೆ.

ಅತಿಕ್ರಮಣಕ್ಕೆ ಯತ್ನಿಸಿದ ಅವರು ರಾಜ್ಯ ಸರ್ಕಾರದ ಆಡಳಿತ ಯಂತ್ರವನ್ನು ತಮ್ಮ ಸ್ವಾರ್ಥಕ್ಕಾಗಿ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಬಲವಂತವಾಗಿ ಮತ್ತು ಅಕ್ರಮವಾಗಿ ನಮ್ಮ ಫಾರಂಹೌಸ್ ಒಳಗೆ ಬಂದಿದ್ದಾರೆ. ಸೂಕ್ತ ದಾಖಲೆಗಳನ್ನು ತೋರಿಸಲು ನಿರಾಕರಿಸಿದ್ದಾರೆ. ನಮ್ಮ ವಕೀಲರು ಈ ಬಗ್ಗೆ ನನಗೆ ಮಾಹಿತಿ ನೀಡಿದ್ದಾರೆ ಎಂದು ಹೇಳಿದ್ದಾರೆ.

ಅತಿಕ್ರಮಣಕಾರರ ಬಳಿ ಯಾವುದೇ ನ್ಯಾಯಾಲಯದ ಆದೇಶಗಳಿಲ್ಲ. ನಾವು ಸದರಿ ಆಸ್ತಿಯಲ್ಲಿ 50 ವರ್ಷಗಳಿಂದ ವಾಸಿಸುತ್ತಿದ್ದೇವೆ. ನಾನು ದುಬೈಗೆ ಬರುವ ಮುನ್ನ ನಿಮ್ಮನ್ನು ಭೇಟಿ ಮಾಡಲು ಯತ್ನಿಸಿದೆ. ಆದರೆ ನೀವು ಸಿಗಲಿಲ್ಲ. ಸ್ಥಳೀಯ ಪೊಲೀಸ್ ಠಾಣೆ ಮತ್ತು ಎಸಿಪಿ ಅವರಿಗೆ ದೂರು ನೀಡಿದ್ದೇವೆ. ಆದರೆ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದು ಪೊಲೀಸ್ ಮಹಾನಿರ್ದೇಶಕರಿಗೆ ತಿಳಿಸಿದ್ದಾರೆ.

ಮಿನಿ ವ್ಯಾನ್ ಮಗುಚಿ ಬಿದ್ದು ನಾಲ್ವರು ಅಯ್ಯಪ್ಪ ಭಕ್ತರ ಸಾವು

ನಮಗೆ ನಿಮ್ಮ ಬೆಂಬಲ ಬೇಕು. ಕಾನೂನು ಬಾಹಿರವಾದ ಇಂತಹ ಕೃತ್ಯಗಳಿಗೆ ಕಡಿವಾಣ ಬೀಳಬೇಕು ಎಂದು ಅವರು ಮನವಿ ಮಾಡಿದ್ದಾರೆ. ಈ ಆಸ್ತಿಗೆ ಸಂಬಂಧಪಟ್ಟಂತ ವಿವಾದ ಡಿ. 7ರಂದು ನ್ಯಾಯಾಲಯದಲ್ಲಿ ಅಂತಿಮ ವಿಚಾರಣೆ ನಡೆಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ. ಈ ಟ್ವೀಟ್‍ಗೆ ಕೆಲವು ಐಎಎಸ್ ಅಧಿಕಾರಿಗಳು ಕೂಡ ಪ್ರತಿಕ್ರಿಯಿಸಿದ್ದಾರೆ.

ಮೂವರು ಆರೋಪಿಗಳ ಬಂಧನ, 5 ಲಕ್ಷ ಮೌಲ್ಯದ ಮಾಲು ಜಪ್ತಿ

ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಗೃಹಸಚಿವ ಆರಗ ಜ್ಞಾನೇಂದ್ರ, ಮಾಧ್ಯಮಗಳ ಮೂಲಕ ಈ ಬಗ್ಗೆ ಮಾಹಿತಿ ತಿಳಿದುಕೊಂಡಿದ್ದೇನೆ. ಸಮಗ್ರವಾದ ವರದಿ ನೀಡುವಂತೆ ಪೊಲೀಸ್ ಮಹಾನಿರ್ದೇಶಕರಿಗೆ ಸೂಚಿಸಿರುವುದಾಗಿ ತಿಳಿಸಿದ್ದಾರೆ.

Singer Lucky Ali, claims, Bengaluru, property, encroached, IAS officer,

Articles You Might Like

Share This Article