ಮುಂಬೈ,ಫೆ.21-ಬಾಲಿವುಡ್‍ನ ಖ್ಯಾತ ಗಾಯಕ ಸೋನು ನಿಗಮ್ ಅವರ ಮೇಲೆ ಶಾಸಕನ ಪುತ್ರನೊಬ್ಬ ಹಲ್ಲೆ ನಡೆಸಿರುವ ಪ್ರಕರಣ ಮುಂಬೈನಲ್ಲಿ ನಡೆದಿದೆ. ಚೆಂಬೂರಿನಲ್ಲಿ ನಡೆಯುತ್ತಿದ್ದ ಸಂಗಿತೋತ್ಸವ ಮುಗಿಸಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಾಗ ಸೆಲ್ಫಿಗಾಗಿ ಅಭಿಮಾನಿಗಳು ಮುಗಿಬಿದ್ದ ಸಮಯದಲ್ಲಿ ಸೋನು ನಿಗಮ್ ಅವರ ಮೇಲೆ ಸ್ವಪ್ನಿಲ್ ಫಾಟರ್‍ಪೇಕರ್ ಹಲ್ಲೆ ನಡೆಸಿದ್ದಾರೆ ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಸೋನು ನಿಗಮ್ ಅವರ ಅಪ್ತ ಸಹಾಯಕರೊಬ್ಬರಿಗೂ ತೀವ್ರ ಪೆಟ್ಟಾಗಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ನನ್ನೊಂದಿಗೆ ಸೆಲ್ಫಿ ತೆಗೆದುಕೊಳ್ಳಲು ಅಭಿಮಾನಿಗಳು ಮುಗಿಬಿದ್ದಿದಾಗ ಹಿಂದಿನಿಂದ ಬಂದ ವ್ಯಕ್ತಿ ನನ್ನನ್ನು ತಳ್ಳಿದ ನಂತರ ನಾನು ಮೆಟ್ಟಿಲುಗಳ ಮೇಲೆ ಬಿದ್ದೆ. ಆಗ ನನ್ನನ್ನು ರಕ್ಷಿಸಲು ಬಂದ ರಬ್ಬಾನಿಯನ್ನು ಆತ ಕೆಳಗೆ ತಳ್ಳಿದ್ದರಿಂದಙ ಆತ ತೀವ್ರವಾಗಿ ಗಾಯಗೊಂಡಿದ್ದಾನೆ. ಹೀಗಾಗಿ ಅಭಿಮಾನಿಗಳು ಸೆಸೆಲ್ಫಿ ತೆಗೆದುಕೊಳ್ಳುವಾಗ ಸ್ವಲ್ಪ ಯೋಚಿಸಬೇಕು ಎಂದು ಸೋನು ನಿಗಮ್ ಮನವಿ ಮಾಡಿಕೊಂಡಿದ್ದಾರೆ.
ಸಂಕಷ್ಟ ಸವಾಲುಗಳ ನಡುವೆ ಆರ್ಥಿಕ ಸದೃಢತೆ : ಬೊಮ್ಮಾಯಿ
ಚೆಂಬೂರ್ ಉತ್ಸವದಲ್ಲಿ ಸೋನು ನಿಗಮ್ ಅವರ ನೇರ ಪ್ರದರ್ಶನದ ನಂತರ ವೇದಿಕೆಯಿಂದ ನಿರ್ಗಮಿಸುವಾಗ ಈ ಘಟನೆ ಸಂಭವಿಸಿದೆ. ಸೋನು ನಿಗಮ್ ಅವರನ್ನು ಯಾರೋ ಹಿಂಬದಿಯಿಂದ ತಡೆದರು. ಗಾಯಕನ ಜೊತೆಗಿದ್ದ ಇಬ್ಬರು ಅವರನ್ನು ಪಕ್ಕಕ್ಕೆ ಸರಿಸಲು ಪ್ರಯತ್ನಿಸಿದಾಗ, ವ್ಯಕ್ತಿ ಅವರನ್ನು ಮೆಟ್ಟಿಲುಗಳಿಂದ ಕೆಳಗೆ ತಳ್ಳಿದರು ಈ ಕುರಿತಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಹೇಮರಾಜ್ ಸಿಂಗ್ ರಜಪೂತ್ ಹೇಳಿದ್ದಾರೆ.
ಆಯುಷ್ಮಾನ್ ಭಾರತ್ ಯೋಜನೆಯಡಿ ಚಿಕಿತ್ಸೆಗೆ 3ಸಾವಿರ ಕೋಟಿ ಖರ್ಚು : ಸುಧಾಕರ್
ಸೋನು ನಿಗಮ್ ಮೇಲೆ ಹಲ್ಲೆ ನಡೆಸಲು ಮುಂದಾದ ವ್ಯಕ್ತಿಯನ್ನು ಶಾಸಕ ಪ್ರಕಾಶ್ ಫಾಟರ್‍ಪೇಕರ್ ಅವರ ಪುತ್ರ ಸ್ವಪ್ನಿಲ್ ಎಂದು ಗುರುತಿಸಲಾಗಿದ್ದು, ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುವುದಾಗಿ ರಜಪೂತ್ ತಿಳಿಸಿದ್ದಾರೆ.
ಏತನ್ಮಧ್ಯೆ, ಘಟನೆಗೆ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರ ಕುಮ್ಮಕ್ಕೆ ಕಾರಣ ಎಂದು ಬಿಜೆಪಿ ನಾಯಕ ಶೆಹಜಾದ್ ಪೂನಾವಾಲಾ ಆರೋಪಿಸಿದ್ದಾರೆ. ಆದರೆ, ಈ ಹೇಳಿಕೆಯನ್ನು ಪೊಲೀಸರು ಅಲ್ಲಗಳೆದಿದ್ದಾರೆ.
Singer, Sonu Nigam,attacked, MLA’s son, during, concert, Chembur,