ದೇಶದಲ್ಲಿ ಮತ್ತೆ ಹೆಚ್ಚುತ್ತಿದೆ ಕೋವಿಡ್

Social Share

ನವದೆಹಲಿ,ಮಾ.19- ಸುಮಾರು ನಾಲ್ಕುವರೆ ತಿಂಗಳ ಬಳಿಕ ಮೊದಲ ಬಾರಿಗೆ ದೇಶದಲ್ಲಿ ಕೋವಿಡ್-19 ಸೋಂಕುಗಳ ಸಂಖ್ಯೆ ಒಂದು ಸಾವಿರದ ಗಡಿ ದಾಟಿತ್ತು, ಹೊಸ ಆತಂಕಗಳನ್ನು ಸೃಷ್ಟಿಸಿದೆ.

ಇಂದು ಬೆಳಗ್ಗೆ ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಬಿಡುಗಡೆ ಮಾಡಿರುವ ಅಂಕಿ ಅಂಶಗಳ ಪ್ರಕಾರ ನಿನ್ನೆ ದೈನಂದಿನ ಸೋಂಕಿನ ಪ್ರಮಾಣ 1071 ಆಗಿದೆ. ಈ ಮೂಲಕ ದೇಶದಲ್ಲಿ ಒಟ್ಟು ಸಕ್ರಿಯ ಕೋವಿಡ್ ಪ್ರಕರಣಗಳ ಸಂಖ್ಯೆಯ 5915 ಆಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಳೆದ ನಾಲ್ಕು ತಿಂಗಳಿನಿಂದ ಕೋವಿಡ್ ಪ್ರಕರಣಗಳ ಸಂಖ್ಯೆ ತೀವ್ರ ಗತಿಯಲ್ಲಿ ಕುಸಿದು, ಎರಡಂಕಿಗೆ ಇಳಿದಿತ್ತು. ಕಳೆದ ಮೂರ್ನಾಲ್ಕು ದಿನಗಳಿಂದ ದಿಡೀರ್ ಏರಿಕೆ ಕಾಣುತ್ತಿದೆ. ಕೋವಿಡ್-19 ಜೊತೆಗೆ ಎಚ್3ಎನ್2 ಸೋಂಕು ಕೂಡ ಹಲವು ರಾಜ್ಯಗಳಲ್ಲಿ ವ್ಯಾಪಿಸಲಾರಂಭಿಸಿದೆ.

ಭಾರತ-ಬಾಂಗ್ಲಾ ನಡುವೆ ರೈಲ್ವೆ ಮಾರ್ಗ ಕಾಮಗಾರಿ ಚುರುಕುಗೊಳಿಸಲು ಕ್ರಮ

129 ದಿನಗಳ ನಂತರ ಮೊದಲ ಬಾರಿಗೆ ದೈನಂದಿನ ಸೋಂಕಿನ ಪ್ರಮಾಣ 1071ಕ್ಕೆ ಹೆಚ್ಚಿದೆ. ಇದರಿಂದ ದೇಶದ ಒಟ್ಟು ಸೋಂಕಿನ ಸಂಖ್ಯೆ 4,46,95,420ರಷ್ಟಾಗಿದ್ದು, ಶೇಕಡವಾರು 4.46ರಷ್ಟು ಎಂದು ತಿಳಿಸಲಾಗಿದೆ. ಸಮಧಾನಕರ ಅಂಶವೆಂದರೆ ಸಕ್ರಿಯ ಪ್ರಕರಣಗಳ ಸಂಖ್ಯೆ ಶೇ.0.01ರಷ್ಟಿದೆ. ಗುಣಮುಖರಾಗುತ್ತಿರುವವರ ಪ್ರಮಾಣ ಶೇ.98.8ರಷ್ಟಿದೆ. ಈವರೆಗೂ 4,41,58,703 ಮಂದಿ ಚಿಕಿತ್ಸೆಯಿಂದ ಚೇತರಿಸಿಕೊಂಡಿದ್ದಾರೆ.

ಕಾವೇರಿದ ಚುನಾವಣೆ : ವಲಸೆ ತಡೆಯಲು ನಾಯಕರ ಹೆಣಗಾಟ

ಕೋವಿಡ್‍ನಿಂದ ನಿನ್ನೆ ರಾಜಸ್ಥಾನ, ಮಹಾರಾಷ್ಟ್ರ, ಕೇರಳದಲ್ಲಿ ತಲಾ ಒಬ್ಬರು ಸೇರಿ ಮೂರು ಮಂದಿ ಸಾವನ್ನಪ್ಪಿದ್ದಾರೆ. ಒಟ್ಟು ಸಾವಿನ ಸಂಖ್ಯೆ 5,30,802ರಷ್ಟಾಗಿದೆ. ಮರಣದ ಪ್ರಮಾಣ ಶೇ.1.19ರಷ್ಟಿದೆ. ಈವರೆಗೂ ದೇಶದ 220.65 ಕೋಟಿ ಡೋಸ್ ಲಸಿಕೆಗಳನ್ನು ನೀಡಲಾಗಿದೆ.

Single, day, rise, 1071, Covid-19, cases , India,

Articles You Might Like

Share This Article