ಖಾಸಗಿ ಆಸ್ಪತ್ರೆ ಆರಂಭಕ್ಕೆ ಏಕಗವಾಕ್ಷಿ ವ್ಯವಸ್ಥೆ ಜಾರಿ

Social Share

ಬೆಂಗಳೂರು, ಡಿ.17- ಖಾಸಗಿ ಆಸ್ಪತ್ರೆ ಮತ್ತು ನರ್ಸಿಂಗ್ ಹೋಮ್ ಗಳನ್ನು ಪ್ರಾರಂಭಿಸಲು ಎದುರಾಗುವ ಅಡೆ ತಡೆಗಳ ನಿವಾರಣೆಗೆ ಏಕಗವಾಕ್ಷಿ ವ್ಯವಸ್ಥೆ ತರಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಸುಧಾಕರ್ ಭರವಸೆ ನೀಡಿದರು.

ನಗರದ ಖಾಸಗಿ ಹೋಟಲ್ಲಿಂದು ಆರಂಭವಾದ ಎರಡು ದಿನಗಳ ಕರ್ನಾಟಕ ಖಾಸಗಿ ಆಸ್ಪತ್ರೆಗಳು ಮತ್ತು ನರ್ಸಿಂಗ್ ಹೋಂಗಳ ಸಂಘಟನೆಯ 3ನೇ ರಾಷ್ಟ್ರೀಯ ಆರೋಗ್ಯ ಶೃಂಗಸಭೆ – 2022ರ ಸಮಾವೇಶದಲ್ಲಿ ಅವರು ಮಾತನಾಡಿದರು.

ಖಾಸಗಿ ನರ್ಸಿಂಗ್ ಹೋಮ್ ಗಳನ್ನು ಪ್ರಾರಂಭಿಸಲು ಇರುವ ಅಡ್ಡಿ-ಆತಂಕಗಳ ಬಗ್ಗೆ ಗಮನ ಸೆಳೆಯಲಾಗಿದೆ. ಎಲ್ಲಾ ಅಡೆ ತಡೆ ನಿವಾರಿಸಿ ಏಕಗವಾಕ್ಷಿ ವ್ಯವಸ್ಥೆ ಮೂಲಕ ಮಂಜೂರಾತಿ ನೀಡಲು ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಈ ಸಂಬಂಧ ಮುಖ್ಯಮಂತ್ರಿ ಬೊಮ್ಮಾಯಿ ಅವರ ಜೊತೆ ಯೋಚನೆ ನಡೆಸಲಾಗುವುದು ಎಂದರು.

ವಿಧಾನಸಭೆಗೆ ಸ್ಪರ್ಧಿಸಲು ಲೋಕಸಭೆ ಮಾಜಿ ಸದಸ್ಯರ ಭರ್ಜರಿ ಲಾಬಿ

ಕೋವಿಡ್ ಸಂದರ್ಭದಲ್ಲಿ ಖಾಸಗಿ ಆಸ್ಪತ್ರೆಗಳು ಸಲ್ಲಿಸಿರುವ ಸೇವೆ ಪ್ರಶಂಸನೀಯ. ಖಾಸಗಿ ಆಸ್ಪತ್ರೆಗಳ ಸಹಕಾರವಿಲ್ಲದೆ ಕೋವಿಡ್ ಅನ್ನು ಪರಿಣಾಮಕಾರಿಯಾಗಿ ನಿಯಂತ್ರಿಸಲು ಸಾಧ್ಯವಾಗುತ್ತಿರಲಿಲ್ಲ. ವೈದ್ಯ ಕೇಂದ್ರಿತ ಆರೋಗ್ಯ ಸೇವೆಯಿಂದ ರೋಗಿ ಮತ್ತು ರೋಗ ಕೇಂದ್ರಿತ ಚಿಕಿತ್ಸಾ ವ್ಯವಸ್ಥೆಗೆ ಬದಲಾಗಬೇಕಿದೆ. ಎಲ್ಲಾ ಉನ್ನತ ತಂತ್ರಜ್ಞಾನಗಳನ್ನು ಬಳಸಿಕೊಂಡು ಗುಣಮಟ್ಟದ ಆರೋಗ್ಯ ಸೇವೆ ನೀಡಬೇಕು ಎಂದು ಅವರು ಕರೆ ನೀಡಿದರು.

ಫನಾ ಕರ್ನಾಟಕ ಸಂಘಟನೆ ಅಧ್ಯಕ್ಷ ಡಾ. ಹೆಚï. ಎಂ. ಪ್ರಸನ್ನ ಮಾತನಾಡಿ, ರಾಜ್ಯದ ಸಣ್ಣ ನಗರ ಮತ್ತು ಪಟ್ಟಣಗಳಲ್ಲಿರುವ ಆಸ್ಪತ್ರೆಗಳಿಗೆ ದೊಡ್ಡ ದೊಡ್ಡ ಆಸ್ಪತ್ರೆಗಳ ಸಹಕಾರದ ಅಗತ್ಯವಿದೆ. ಆ ಮೂಲಕ ಸಣ್ಣ, ಪುಟ್ಟ ನಗರ ಪ್ರದೇಶಗಳಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಮುಂದಾಗಬೇಕು. ಕಾಲ ಕಾಲಕ್ಕೆ ದೊರೆಯುವ ತಂತ್ರಜ್ಞಾನವನ್ನು ಬಳಸಿ ಉತ್ಕøಷ್ಟ ಗುಣಮಟ್ಟದ ಆರೋಗ್ಯ ಸೇವೆ ನೀಡಲು ಅವರು ಎಂದು ಕರೆ ನೀಡಿದರು.

ಇದೇ ಸಂದರ್ಭದಲ್ಲಿ ಗಣನೀಯ ಸೇವೆ ಸಲ್ಲಿಸಿದ ವೈದ್ಯರನ್ನು ಸನ್ಮಾನಿಸಲಾಯಿತು. ಹೆಚï.ಸಿ.ಜಿ ಅಧ್ಯಕ್ಷರಾದ ಡಾ.ಬಿ.ಎಸï. ಅಜಯ್ ಕುರ್ಮಾ, ಕರ್ನಾಟಕ ಮೆಡಿಕಲ್ ಕೌನ್ಸಿಲ್ ಅಧ್ಯಕ್ಷ ಡಾ. ಕಂಚಿ ಪ್ರಹ್ಲಾದ್ ವಿ, ಸ್ಪರ್ಶ ಆಸ್ಪತ್ರೆಯ ಅಧ್ಯಕ್ಷ ಮತ್ತು ಮುಖ್ಯ ಸರ್ಜನ್ ಡಾ. ಶರಣ್ ಪಾಟೀಲï, ಇಂಡಿಯನ್ ಮೆಡಿಕಲ್ ಅಸೋಸಿಯೇಷನ್ನ ಅಧ್ಯಕ್ಷ ಡಾ. ಎಸï.ಬಿ. ಲಕ್ಕೋಳï, ಸಕ್ರ ವಲ್ಡರ್ï ಹಾಸ್ಪಿಟಲ್ನ ವ್ಯವಸ್ಥಾಪಕ ನಿರ್ದೇಶಕ ಯೂಚಿ ನಾಗಾನೋ ಮತ್ತಿತರರು ಪಾಲ್ಗೊಂಡಿದ್ದರು.

#SingleWindowSystem, #Starting, #privatehospitals,

Articles You Might Like

Share This Article