ಟಿ-20ಸರಣಿ : ಬುಮ್ರಾ ಬದಲಿಗೆ ಸಿರಾಜ್‍ಗೆ ಅವಕಾಶ

Social Share

ನವದೆಹಲಿ . ಸೆ.30 – ಪ್ರವಾಸಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ-20 ಸರಣಿಯ ಇನ್ನುಳಿದ ಎರಡು ಪಂದ್ಯಗಳಿಗೆ ಗಾಯಗೊಂಡಿರುವ ವೇಗಿ ಜಸ್ಪ್ರೀತ್ ಬುಮ್ರಾ ಅವರ ಬದಲಿಗೆ ಮೊಹಮ್ಮದ್ ಸಿರಾಜ್‍ಗೆ ಅವಕಾಶ ನೀಡಲಾಗಿದೆ.

ಬೆನ್ನುಮೂಳೆಯ ಮುರಿತದಿಂದಾಗಿ ಬುಮ್ರಾ ಮುಂಬರುವ ಟಿ20 ವಿಶ್ವಕಪ್‍ನಿಂದ ಹೊರಗುಳಿಲಿದ್ದು ,ಬಿಸಿಸಿಐನ ಆಯ್ಕೆ ಸಮಿತಿಯು ದಕ್ಷಿಣ ಆಫ್ರಿಕಾ ವಿರುದ್ಧದ ಟಿ- 20 ಸರಣಿಯ ಉಳಿದ ಪಂದ್ಯಗಳಿಗೆ ಮೊಹಮ್ಮದ್ ಸಿರಾಜ್ ಅವರನ್ನು ಹೆಸರನ್ನು ಘೊಷಿಸಲಾಗಿದೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಈ ವಿಷಯ ತಿಳಿಸಿದ್ದು ಬುಮ್ರಾ ಪ್ರಸ್ತುತ ಬಿಸಿಸಿಐ ವೈದ್ಯಕೀಯ ತಂಡದ ಮೇಲ್ವಿಚಾರಣೆಯಲ್ಲಿದ್ದಾರೆ ಎಂದರು
ಸುಮಾರು 8 ತಿಂಗಳ ನಂತರ ವೇಗಿ ಸಿರಾಜï ಭಾರತ ತಂಡಕ್ಕೆ ಮರಳಿದ್ದಾರೆ.

ಬುಧವಾರ ತಿರುವನಂತಪುರಂನಲ್ಲಿ ನಡೆದ ಮೊದಲ ಪಂದ್ಯದಲ್ಲಿ ಭಾರತ 8 ವಿಕೆಟ್‍ಗಳ ಅಂತರದಲ್ಲಿ ಜಯಗಳಿಸಿದ್ದು ಸರಣಿಯಲ್ಲಿ 1-0 ಮುನ್ನಡೆ ಸಾಸಿದೆ ಗುವಾಹಟಿಯಲ್ಲಿ ಅಕ್ಟೋಬರ್ 2 ಎರಡನೇ ಪಂದ್ಯ ಅಕ್ಟೋಬರ್ 4 ರಂದು ಇಂದೋರ್ ನಲ್ಲಿ ಮೂರನೇ ಪಂದ್ಯ ನಡೆಯಲಿವೆ.

Articles You Might Like

Share This Article