ಸಿರ್ಸಿ ವೃತ್ತದಿಂದ ವಿಜಯನಗರ ಪೈಪ್‍ಲೈನ್‍ವರೆಗೆ ರಸ್ತೆ ಅಗಲೀಕರಣ

Social Share

ಬೆಂಗಳೂರು,ಡಿ.5- ಚಾಮರಾಜಪೇಟೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿ ಪಾದರಾಯನಪುರ ರಸ್ತೆ ಅಗಲೀಕರಣದ ಕಾಮಗಾರಿಯನ್ನು ಶೀಘ್ರವೇ ಮುಗಿಸಿ ಸಾರ್ವಜನಿಕ ಸೇವೆಗೆ ಲೋಕಾರ್ಪಣೆ ಮಾಡಲಿದ್ದೇವೆ ಎಂದು ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಸ್ತೆ ಅಗಲೀಕರಣದ ಸಂಬಂಧ ಸ್ಥಳೀಯ ಶಾಸಕರಾಗಿರುವ ಜಮ್ಮೀರ್ ಅಹಮ್ಮದ್ ಹಾಗೂ ಪಾಲಿಕೆಯ ಅಧಿಕಾರಿಗಳ ಜೊತೆ ಮಾತುಕತೆ ನಡೆಸಲಾಗಿದೆ. ಕೆಲವು ಸಣ್ಣಪುಟ್ಟ ಸಮಸ್ಯೆಗಳಿದ್ದವು, ಈಗ ಎಲ್ಲವೂ ಬಗೆಹರಿಯಲಿದ್ದು, ಶೀಘ್ರವಾಗಿ ಕಾಮಗಾರಿ ಮುಗಿಸಿ ಸಾರ್ವಜನಿಕ ಸೇವೆಗೆ ಲೋಕರ್ಪಾಣೆಗೊಳಿಸಲಾಗುವುದು ಎಂದರು.

ಒಂದಿಲ್ಲೊಂದು ಕಾರಣದಿಂದ ಮುಂದೂಡಲೇ ಬಂದಿತು. ಈ ಕಾಮಗಾರಿಯಲ್ಲಿ ಶೇ.50ರಷ್ಟು ಸರ್ಕಾರಿ ಜಾಗ. ಉಳಿದಿದ್ದು ಸಾರ್ವಜನಿಕರಿಗೆ ಸೇರಿದೆ. ಭೂ ಸ್ವಾೀಧಿನ ಸಂಬಂಧಪಟ್ಟ ಜಮೀನು ಮಾಲೀಕರಿಗೆ ನೋಟಿಸ್ ನೀಡಿ ಪರಿಹಾರವನ್ನು ಕೊಟ್ಟು ಸ್ವಾೀಧಿನಪಡಿಸಿಕೊಳ್ಳಲಾಗುವುದು ಎಂದರು.

ಶಿವದೂತೆ ಗುಳಿಗೆ ನಾಟಕ ವೀಕ್ಷಿಸಿ ಮೆಚ್ಚುಗೆ

ರಸ್ತೆ ಅಗಲೀಕರಣ ಮಾಡುವ ವೇಳೆ ದೇವಸ್ಥಾನ, ಮಸೀದಿ, ಚರ್ಚ್ ಯಾವುದನ್ನೂ ಕೂಡ ತೆರವು ಮಾಡಲಾಗುವುದಿಲ್ಲ. ಈ ಬಗ್ಗೆ ಸಾರ್ವಜನಿಕರು ವದಂತಿಗಳಿಗೆ ಕಿವಿಕೊಡುವುದು ಬೇಡ. ಯಾವುದೇ ಸಮಸ್ಯೆಗಳು ಇಲ್ಲದೆ ಇರುವುದರಿಂದ ರಸ್ತೆ ಅಗಲೀಕರಣ ಸುಲಲಿತವಾಗಿ ನಡೆಯಲಿದೆ ಎಂದು ಹೇಳಿದರು.

25ರಿಂದ 30 ವರ್ಷಗಳ ಹಿಂದೆಯೇ ರಸ್ತೆ ಅಗಲೀಕರಣ ನಡೆಯಬೇಕಿತ್ತು. 1.8 ಕಿಲೋ ಮೀಟರ್ ವರೆಗೂ ಮಾಡಬೇಕು. ಸಿರಸಿ ಸರ್ಕಲ್ ನಿಂದ ವಿಜಯನಗರ ಪೈಪ್ ಲೈನ್ ವರೆಗೆ ಅಗಲೀಕರಣ 1, 63,193 ಚದರ ಅಡಿ ಜಾಗ ಬೇಕು, 140 ಕೋಟಿ ಗೂ ಹೆಚ್ಚು ಹಣ ಬೇಕಾಗುತ್ತದೆ. ರಸ್ತೆ ಅಗಲೀಕರಣಕ್ಕೆ ನಕ್ಷೆ ಕೂಡ ಸಿದ್ದವಾಗಿದೆ. ಇದರ ಬಗ್ಗೆ ಸರ್ಕಾರದ ಬಳಿಯೂ ಪ್ರಸ್ತಾವ ಇದೆ ಎಂದರು.

ಆಸ್ತಿ ಕಬಳಿಕೆಗೆ ಯತ್ನ, ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ಪತಿ ವಿರುದ್ಧ ದೂರು

ಮುಖ್ಯಮಂತ್ರಿಗಳು ಬೆಂಗಳೂರು ನಗರಾಭಿವೃದ್ಧಿ ಸಚಿವರು ಕೂಡ ಆಗಿದ್ದಾರೆ. ಹೀಗಾಗಿ ಅವರಿಂದ ಶೀಘ್ರವೇ ಒಪ್ಪಿಗೆ ಪಡೆದು ಯೋಜನೆ ಜಾರಿ ಮಾಡುತ್ತೇವೆ. ಇದರಲ್ಲಿ ಬಿಬಿಎಂಪಿ, ಪೆÇಲೀಸ್ ಇಲಾಖೆ, ಪಿಡಬ್ಲ್ಯೂ ಇಲಾಖೆಯ ಜಾಗ ಕೂಡ ಬರುತ್ತದೆ. ಪರಿಹಾರ ಎಲ್ಲ ಸೇರಿ ಸುಮಾರು 230 ಕೋಟಿ ಆಗಬಹುದು ಎಂದರು.

ಮಾಗಡಿ ಆಫೀಸ್ ಗೆ ಡಿಸಿಪಿ ಆಫೀಸ್ ಕೂಡ ಶಿಫ್ಟ್ ಆಗುತ್ತದೆ. 140 ಕೋಟಿ ಹಣ ಜಾಗ ವಶಕ್ಕೆ ಪಡಿಸಿಕೊಂಡವರಿಗೆ ಪರಿಹಾರಕ್ಕೆ ಬೇಕಾಗುತ್ತದೆ. ಒಟ್ಟಾರೆ ಈ ಯೋಜನೆ ಗೆ 240 ಕೋಟಿ ವೆಚ್ಚ ತಗಲುತ್ತದೆ ಎಂದು ವಿವರಿಸಿದರು.
ಇದಕ್ಕೂ ಮುನ್ನ ಪಾದರಾಯನಪುರ ರಸ್ತೆ ಅಗಲೀಕರಣಕ್ಕೆ ಸಂಬಂಧಿಸಿದಂತೆ ವಸತಿ ಸಚಿವರ ಅಧ್ಯಕ್ಷತೆಯಲ್ಲಿ ಇಂದು ಸಭೆ ನಡೆಸಲಾಯಿತು.

ಸಿದ್ರಾಮುಲ್ಲಾಖಾನ್ ಅಲ್ಲದೆ ಮತ್ತಿನ್ನೇನು : ಬಿಜೆಪಿ

ಈ ವೇಳೆ ಸ್ಥಳೀಯ ಶಾಸಕರಾದ ಜಮೀರ್ ಅಹ್ಮದ್ ಖಾನ್, ವಲಯ ಜಂಟಿ ಆಯುಕ್ತರಾದ ಯೋಗೇಶ್, ಪ್ರಧಾನ ಅಭಿಯಂತರರಾದ ಪ್ರಹ್ಲಾದ್, ವಲಯ ಮುಖ್ಯ ಅಭಿಯಂತರರಾದ ದೊಡ್ಡಯ್ಯ, ಪೊಲೀಸ್ ಅಧಿಕಾರಿಗಳು ಹಾಗೂ ಇನ್ನಿತರೆ ಸಂಬಂಧಪಟ್ಟ ಅಧಿಕಾರಿಗಳು ಉಪಸ್ಥಿತರಿದ್ದರು.

Sirsi Circle, Vijayanagar, Pipeline, Road,

Articles You Might Like

Share This Article