ಮೈಸೂರು,ಜ.12- ಅಪಘಾತದಲ್ಲಿ ಸಾವನ್ನಪ್ಪಿದ ಅಣ್ಣನ ಮೃತದೇಹ ನೋಡಿದ ತಂಗಿ ಆಘಾತಕ್ಕೊಳಗಾಗಿ ತೀವ್ರ ಹೃದಯಾಘಾತದಿಂದ ಸಾವನ್ನಪ್ಪಿರುವ ಘಟನೆ ಹುಣಸೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ. ಮೃತಳನ್ನು ಕೊಡಗಿನ ಪೊನ್ನಂಪೇಟೆಯ ನಿವಾಸಿ ರಶ್ಮಿ(21) ಎಂದು ಗುರುತಿಸಲಾಗಿದೆ.
ರಶ್ಮಿ ನಗರದ ವಿಜಯನಗರದ ನಾಲ್ಕನೇ ಹಂತದಲ್ಲಿರುವ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದ್ವಿತೀಯ ಬಿಕಾಂ ವಿದ್ಯಾಭ್ಯಾಸ ಮಾಡುತ್ತಿದ್ದರು.ಸೋಮವಾರ ರಾತ್ರಿ ನಡೆದ ರಸ್ತೆ ಅಪಘಾತದಲ್ಲಿ ರಶ್ನಿ ಅವರ ದೊಡ್ಡಪ್ಪನ ಮಗ ಕೀರ್ತಿ ಅಯ್ಯಪ್ಪ ಮೃತಪಟ್ಟಿದ್ದರು.
ಆತನ ಮೃತದೇಹವನ್ನು ನೋಡಲು ಸಾರ್ವಜನಿಕ ಆಸ್ಪತ್ರೆಗೆ ಆಗಮಿಸಿದ್ದ ರಶ್ನಿ ತೀವ್ರ ಆಘಾತಕ್ಕೊಳಗಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ.
