ಕೊರಟಗೆರೆ,ಡಿ.2- ಅತ್ತಿಗೆ ಮೇಲಿನ ವ್ಯಾಮೋಹಕ್ಕೆ ಸ್ವಂತ ಷಡ್ಕನನ್ನೇ ಕೊಲೆ ಮಾಡಿ ಜಮೀನಿನಲ್ಲಿ ಹೂತು
ಹಾಕಿದ್ದ ಘಟನೆಯೂಂದು ಕೊರಟಗೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬೆಳಕಿಗೆ ಬಂದಿದೆ.
ಕೊರಟಗೆರೆ ತಾಲೂಕು ಹೊಳವನಹಳ್ಳಿ ಹೋಬಳಿ ಬೈಚಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಸವನಹಳ್ಳಿ ಗ್ರಾಮದಲ್ಲಿ ಈ ದುರ್ಘಟನೆ ನಡೆದಿದೆ. ಅದೇ ಗ್ರಾಮದ ಆರೋಪಿ ಲೋಕೇಶ್ ತನ್ನ ಸ್ವಂತ ಸಂಬಂಧಿ ಸುರೇಶ್ ಎಂಬುವರನ್ನು ಕೊಲೆ ಮಾಡಿದ್ದಾರೆ.
ಲೋಕೇಶ್‍ನ ಹೆಂಡತಿಯ ಸೋದರ ಸಂಬಂಧಿ ಮಹಿಳೆಯನ್ನು ಬಸವನಹಳ್ಳಿಯಿಂದ ದೊಡ್ಡಬಳ್ಳಾಪುರ ತಾಲೂಕಿನ ದುರ್ಗೆಹಳ್ಳಿ ನಿವಾಸಿ ಸುರೇಶ್ ಅವರಿಗೆ ಕೊಟ್ಟು ಮದುವೆ ಮಾಡಿಕೊಡಲಾಗಿತ್ತು. ಕಾಲ ಕಳೆದಂತೆ ಲೋಕೇಶ್ ಮತ್ತು ಆ ಮಹಿಳೆಯೊಂದಿಗೆ ಸಲುಗೆ ಬೆಳೆದು ಅನೈತಿಕ ಸಂಬಂಧ ಶುರುವಾಗಿತ್ತು. ಈ ಬಗ್ಗೆ ಅನುಮಾನ ಹೊಂದಿದ್ದ ಸುರೇಶ್ ವಿರೋಧ ವ್ಯಕ್ತ ಪಡಿಸಿ ಇಬ್ಬರ ಜೊತೆ ಜಗಳವಾಡಿದ್ದ ಮತ್ತು ಪದೇ ಪದೇ ಕಿರಿಕಿರಿ ಮಾಡುತ್ತಿದ್ದ ಎಂದು ಹೇಳಲಾಗಿದೆ.
ತನ್ನ ಅನೈತಿಕ ಸಂಬಂಧಕ್ಕೆ ಅಡ್ಡಿಯಾಗಿದ್ದ ಸುರೇಶ್‍ನನ್ನು ಮುಗಿಸಲು ಸಂಚು ರೂಪಿಸಿದ್ದ ಲೋಕೇಶ್, ಮೂವರು ಸ್ನೇಹಿತರೊಂದಿಗೆ ಆತನನ್ನು ತನ್ನ ಊರಿಗೆ ಕರೆಸಿದ್ದಾನೆ. ಹೆಚ್ಚು ಮಧ್ಯಪಾನದ ಮಾಡಿಸಿ ನಿದ್ರಾವಸ್ಥೆಯಲ್ಲಿದ್ದಾಗ ಕುತ್ತಿಗೆ ಹಿಸುಕಿ ಉಸಿರು ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಯುಪಿ ಡಿಸಿಎಂಗಳಿಗೆ ಬಂಪರ್ ಆಫರ್ ನೀಡಿದ ಅಖಿಲೇಶ್ ಯಾದವ್
ಕೊಲೆ ಮಾಡಿ, ಹೂತು ಹಾಕಿ ಮೇಲೆ ಗರಿಗಳನ್ನು ಹರಡಿ ಮರೆ ಮಾಡಿರುವುದಾಗಿ ಕೊಲೆ ಸಂದರ್ಭದಲ್ಲಿ ಜೊತೆಯಲ್ಲಿದ್ದ ವ್ಯಕ್ತಿಯೊಬ್ಬ ಕುಡಿದ ಮತ್ತಿನಲ್ಲಿ ಬಾಯಿ ಬಿಟ್ಟಿದ್ದಾನೆ. ಆರಂಭದಲ್ಲಿ ಆತ ಕುಡಿದು ಮಾತನಾಡುತ್ತಾನೆ ಎಂದು ಊರಿನವರು ನಿರ್ಲಕ್ಷ್ಯಿಸಿದ್ದಾರೆ.
ಗಾಯಕ ಸಿಧು ಮೂಸೆವಾಲಾ ಹಂತಕ ಗೋಲ್ಡಿ ಅಮೆರಿಕಾದಲ್ಲಿ ಸೆರೆ..!
ಆದರೂ ಕೆಲವರು ಅನುಮಾನಗೊಂಡು ಸ್ಥಳ ಪರಿಶೀಲನೆ ನಡೆಸಿದಾಗ ಗುಂಡಿ ತೋಡಿ, ಮತ್ತೆ ಮುಚ್ಚಿರುವುದು ಕಂಡು ಬಂದಿದೆ. ತಕ್ಷಣ ಪೊಲೀಸರಿಗೆ ಮಾಹಿತಿ ನೀಡಲಾಗಿದೆ.
ಕೊರಟಗೆರೆ ಪೊಲೀಸ್ ಠಾಣೆಯ ಸಿಪಿಐ ಕೆ ಸುರೇಶ್, ಪಿಎಸ್‍ಐ ಚೇತನ್ ಗೌಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದಾಗ ಶವ ಪತ್ತೆಯಾಗಿದೆ. ಪ್ರಕರಣ ದಾಖಲಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
sister-in-law, Koratagere, murder, Lokesh,