ನವದೆಹಲಿ,ಫೆ.1- ಬಜೆಟ್ ಮಂಡನೆ ವೇಳೆ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಬಾಯ್ತಪ್ಪಿ ಹೇಳಿದ ಪದ ಇಡೀ ಸದನದಲ್ಲಿ ನಗೆಯುಕ್ಕುವಂತೆ ಮಾಡಿತು. 15 ವರ್ಷಕ್ಕೂ ಹಳೆಯದಾದ ಎಲ್ಲ ಸರ್ಕಾರಿ ವಾಹನಗಳನ್ನು ಗುಜರಿಗೆ ಹಾಕುವುದಾಗಿ ನಿರ್ಮಲಾ ಸೀತಾರಾಮನ್ ಪ್ರಕಟಿಸಿದರು.
ಈ ವೇಳೆ ಅವರು ಹಳೆಯ ಪೊಲ್ಯೂಟಿಂಗ್ (ಮಾಲಿನ್ಯಕಾರಕ) ಎಂಬ ಪದದ ಬದಲು ಪೊಲಿಟಿಕಲ್ (ರಾಜಕೀಯ) ಎಂಬ ಪದ ಬಳಿಸಿದರು. ಎಲ್ಲ ಹಳೆಯ `ರಾಜಕೀಯ’ ವಾಹನಗಳನ್ನು ಗುಜರಿಗೆ ಹಾಕುವುದಾಗಿ ಅವರು ಬಾಯ್ತಪ್ಪಿ ಹೇಳಿದ್ದ ಮಾತಿನ ಅರ್ಥವಿತ್ತು. ಪೊಲಿಟಿಕಲ್ ಎನ್ನುತ್ತಿದ್ದಂತೆಯೇ ತಮ್ಮ ನಾಲಿಗೆ ಪ್ರಮಾದವಶಾತ್ ಹೊರಳಿದ್ದನ್ನು ಅರಿತುಕೊಂಡ ನಿರ್ಮಲಾ ಸೀತಾರಾಮನ್, ಅಲ್ಲಿಗೇ ಮಾತು ನಿಲ್ಲಿಸಿದರು. ಕೂಡಲೇ ಸದನದಲ್ಲಿ ನಗುವಿನ ಅಲೆ ಸೃಷ್ಟಿಯಾಯಿತು.
ಉಚಿತ ಪಡಿತರ ಯೋಜನೆ ಇನ್ನೂ 1 ವರ್ಷ ವಿಸ್ತರಣೆ
ಸಚಿವೆ ನಿರ್ಮಲಾ ಕೂಡ ನಕ್ಕು ಸಾವರಿಸಿಕೊಂಡರು. ಬಳಿಕ ಪೊಲ್ಯೂಟಿಂಗ್ ಎಂದು ಒತ್ತಿ ಹೇಳುವ ಮೂಲಕ ಅದನ್ನು ಸರಿಪಡಿಸಿದರು.
ಸರ್ಕಾರದ ಇಲಾಖೆಗಳಲ್ಲಿರುವ 15 ವರ್ಷದಷ್ಟು ಹಳೆಯದಾದ ಮಾಲಿನ್ಯಕಾರಕ ವಾಹನಗಳನ್ನು ಗುಜರಿಗೆ ಹಾಕಿ, ಹೊಸ ವಾಹನಗಳನ್ನು ಖರೀದಿಸಲಾಗುವುದು ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದರು. ಹಳೆಯ ವಾಹನಗಳನ್ನು ಬಳಕೆಯಿಂದ ಹೊರಗಿಡುವ ಗುಜರಿ ನೀತಿಯನ್ನು 2021ರ ಬಜೆಟ್‍ನಲ್ಲಿ ಪರಿಚಯಿಸಲಾಗಿತ್ತು.
Sitharaman, Slip, Tongue, Replacing, Old Political,