27ರಂದು ಶ್ರೀ ಶಿವಕುಮಾರ ಸ್ವಾಮೀಜಿ 3ನೇ ವರ್ಷದ ಪುಣ್ಯಸ್ಮರಣೆ

Social Share

ಬೆಂಗಳೂರು, ಫೆ.24- ವೀರಶೈವ ಲಿಂಗಾಯತ ಬಂಧು-ಬಳಗದ ವತಿಯಿಂದ ಇದೇ 27ರಂದು ಬೆಳಗ್ಗೆ 10 ಗಂಟೆಗೆ ಡಾ.ಶ್ರೀ ಶಿವಕುಮಾರ ಸ್ವಾಮೀಜಿ ಅವರ ಮೂರನೆ ವರ್ಷದ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ನಗರದ ಐಟಿಐ ಬಡಾವಣೆಯ ಡಿ ಮಾರ್ಟ್ ಕಟ್ಟಡದಲ್ಲಿ ಹಮ್ಮಿಕೊಳ್ಳಲಾಗಿದೆ.
ಮಾಗಡಿ ತಾಲ್ಲೂಕಿನ ಗುಡೇಮಾರನಹಳ್ಳಿಯ ಜಗಣ್ಣಯ್ಯ ಮಠದ ಶ್ರೀ ಚೆನ್ನಬಸವ ಸ್ವಾಮೀಜಿ ಅವರ ದಿವ್ಯ ಸಾನ್ನಿಧ್ಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಅಖಿಲ ಭಾರತ ವೀರಶೈವ ಮಹಾಸಭಾ ಬೆಂಗಳೂರು ಘಟಕದ ಪ್ರಧಾನ ಕಾರ್ಯದರ್ಶಿ ಡಾ.ಸಂಗಪ್ಪ ಸಾಹಿತಿ ಹಾಗೂ ರಾಜಾಜಿನಗರದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಜಗದೀಶ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಸಿದ್ದರಾಮಪ್ಪ ಎಸ್. ಅಧ್ಯಕ್ಷತೆ ವಹಿಸಲಿದ್ದು, ಎಎಸ್‍ಬಿ ಸಮೂಹ ಸಂಸ್ಥೆಯ ಸಂಸ್ಥಾಪಕರಾದ ಭಗೀರಥ, ಬಳಗದ ಜಂಟಿ ಕಾರ್ಯದರ್ಶಿ ಶಶಿಧರ್ ರತ್ನಾಕರ್, ಉಪಾಧ್ಯಕ್ಷ ಕಾಂತರಾಜ್, ಜಂಟಿ ಕಾರ್ಯದರ್ಶಿ ದಿನೇಶ್, ಕಾರ್ಯದರ್ಶಿ ನಟರಾಜ್ ಬನ್ನಿಕುಪ್ಪೆ, ಸಂಘಟನಾ ಕಾರ್ಯದರ್ಶಿ ಗುರುಬಸಪ್ಪ, ಚಂದ್ರಶೇಖರ್, ಬಸವಕುಮಾರ್ ಸೇರಿದಂತೆ ಮತ್ತಿತರ ಮುಖಂಡರು, ಸಂಚಾಲಕರು, ಸದಸ್ಯರು, ಪದಾಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.

Articles You Might Like

Share This Article