ಕ್ರೈಸ್ತ ಧರ್ಮಕ್ಕೆ ಮತಾಂತರಕ್ಕೆ ಆಮೀಷವೊಡ್ಡಿದ 6 ಮಂದಿ ವಿರುದ್ದ FIR

Social Share

ಬರೇಲಿ (ಉತ್ತರ ಪ್ರದೇಶ), ನ.21- ಇಲ್ಲಿನ ವಂಶಿ ನಗರದಲ್ಲಿ ಸುಮಾರು 70 ಜನರನ್ನು ಬಲವಂತ ಹಾಗು ಆಮಿಷವೊಡ್ಡಿ ಕ್ರೈಸ್ತ ಧರ್ಮಕ್ಕೆ ಮತಾಂತರಗೊಳ್ಳುವಂತೆ ಆಮಿಷ ಒಡ್ಡಿದ ಆರೋಪದ ಮೇಲೆ ಆರು ಮಂದಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ದೂರು ಬಂದ ಹಿನ್ನಲೆಯಲ್ಲಿ ಪೊಲೀಸರು ಉತ್ತರ ಪ್ರದೇಶ ಕಾನೂನುಬಾಹಿರ ಮತಾಂತರ ನಿಷೇಧ ಕಾಯ್ದೆ, 2021 ರ ನಿಬಂಧನೆಗಳ ಅಡಿಯಲ್ಲಿ ಆರು ಜನರ ವಿರುದ್ಧ ಎಫ್‍ಐಆರ್ ದಾಖಲಿಸಲಾಗಿದೆ ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಭಾಟಿ ತಿಳಿಸಿದ್ದಾರೆ.

ಕ್ರಿಶ್ಚಿಯನ್ ಮಿಷನರಿಗಳು ಭಗವಾನ್ ದಾಸ್ ಅವರ ನಿವಾಸದಲ್ಲಿ ತಮ್ಮ ಧರ್ಮವನ್ನು ಸ್ವೀಕರಿಸುವಂತೆ ಆಮಿಷವೊಡ್ಡಿ ,ಜೀವ ಬೆದರಿಕೆ ಹಾಕಿ ಮತಾಂತರವನ್ನು ಮಾಡುತ್ತಿದ್ದಾರೆ ಎಂದು ಪಟೇಲ್ ಎಂಬುವವರು ಆರೋಪಿಸಿದ್ದಾರೆ.

ಸರಣಿ ಅಪಘಾತ: 38 ಮಂದಿಗೆ ಗಾಯ, 40 ವಾಹನಗಳು ಜಖಂ

ಸಭೆಯಲ್ಲಿ ಹಿಂದೂ ದೇವತೆಗಳ ವಿರುದ್ಧ ಅಸಭ್ಯ ಮಾತುಗಳು ಕೇಳಿಬಂದಿದೆ, ಹಲವು ವರ್ಷಗಳಿಂದ ನಿರಂತರ ಮತಾಂತರ ನಡೆಯುತ್ತಿತ್ತು ತಡೆಯಲು ಹೋದಾಗ ಅನುಚಿತವಾಗಿ ವರ್ತಿಸುತ್ತಿದ್ದರು ಈಗ ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.

5 ವರ್ಷಗಳ ನಂತರ ಚೇತೇಶ್ವರ್ ಪೂಜಾರಗೆ ಅರ್ಜುನ ಪ್ರಶಸ್ತಿ ಪ್ರದಾನ

ಕೂಡಲೆ ಆರೋಪಿಗಳನ್ನು ಬಂಧಿಸಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ ,ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Six, booked, charges, forced, conversion,

Articles You Might Like

Share This Article