ಭಯಂಕರ ಸುಂಟರಗಾಳಿಗೆ 6 ಮಂದಿ ಬಲಿ

Social Share

ವಾಷಿಂಗ್ಟನ್,ಜ.13- ದಕ್ಷಿಣ ಅಮೇರಿಕದ ಅಲ್ಬಾಮಾ ರಾಜ್ಯದಲ್ಲಿ ಬೀಸಿದ ಸುಂಟರಗಾಳಿ ಮತ್ತು ಚಂಡಮಾರುತಕ್ಕೆ 6 ಮಂದಿ ಬಲಿಯಾಗಿದ್ದಾರೆ. ಅಲಬಾಮಾದಲ್ಲಿ ಸುಂಟರಗಾಳಿ ಸೃಷ್ಟಿಸಿದ ಅವಾಂತರದಲ್ಲಿ ಸಾಕಷ್ಟು ಹಾನಿಯಾಗಿದ್ದು, ಹಲವಾರು ಮಂದಿ ಮನೆ ಮಠ ಕಳೆದುಕೊಂಡಿದ್ದಾರೆ.

6 ಮಂದಿ ಬಲಿಯಾಗಿದ್ದು, ಇನ್ನಿತರ ಹಲವಾರು ಮಂದಿ ಕಣ್ಮರೆಯಾಗಿದ್ದಾರೆ ಎಂದು ರಕ್ಷಣಾ ಅಧಿಕಾರಿಗಳು ತಿಳಿಸಿದ್ದಾರೆ. ನಿನ್ನೆ ಸಂಜೆ ಕಾಣಿಸಿಕೊಂಡ ಸುಂಟರಗಾಳಿ ನಂತರ ನೆರೆಯ ರಾಜ್ಯವಾದ ಜಾರ್ಜಿಯಾದತ್ತ ತೆರಳಿದ್ದು ಅಲ್ಲೂ ಸಾಕಷ್ಟು ಅನಾಹುತ ಸೃಷ್ಟಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ.

ಡಲ್ಲೆಸ್ ಕೌಂಟಿಯಲ್ಲಿ ಸುಂಟರಗಾಳಿಯು ಕಟ್ಟಡಗಳ ಮೇಲ್ಛಾವಣಿ ಹಾರಿ ಹೋಗಿವೆ. ಗಾಳಿಯ ರಭಸಕ್ಕೆ ವಿದ್ಯುತ್ ತಂತಿಗಳು ಕಿತ್ತು ಬರುತ್ತಿದ್ದು ಸ್ಥಳೀಯರು ಮುನ್ನೆಚ್ಚರಿಕೆ ವಹಿಸುವಂತೆ ಸೆಲ್ಮಾ ಮೇಯರ್ ಜೇಮ್ಸ ಪರ್ಕಿನ್ಸ್ ಮನವಿ ಮಾಡಿಕೊಂಡಿದ್ದಾರೆ.

ವಿಧಾನಸೌಧ ಎದುರು ಬಸವಣ್ಣ, ಕೆಂಪೇಗೌಡರ ಪ್ರತಿಮೆ ನಿರ್ಮಾಣಕ್ಕೆ ಶಂಕುಸ್ಥಾಪನೆ

ಅಲಬಾಮಾದ ಇತರ ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಣೆ ಮಾಡಲಾಗಿದ್ದು, ಸಮರೋಪಾದಿಯಲ್ಲಿ ಪರಿಹಾರ ಕಾರ್ಯಗಳನ್ನು ಕೈಗೆತ್ತಿಕೊಳ್ಳಲಾಗಿದೆ. ದಕ್ಷಿಣ ಮತ್ತು ಮಧ್ಯ ಅಮೆರಿಕಾದಲ್ಲಿ ಸುಂಟರಗಾಳಿ ಪ್ರಭಾವ ಮಾಮೂಲಿಯಾಗಿದ್ದು, ಈಗಾಗಲೇ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದಾರೆ.

ಕಳೆದ ನವೆಂಬರ್ ಅಂತ್ಯದಲ್ಲಿ, ಅಲಬಾಮಾ ಮತ್ತು ಮಿಸ್ಸಿಸ್ಸಿಪ್ಪಿಯಲ್ಲಿ 36 ಸುಂಟರಗಾಳಿಗಳು ವರದಿಯಾಗಿದ್ದು, ಇಬ್ಬರು ಸತ್ತಿದ್ದರು, ಇದೀಗ ಆರು ಮಂದಿ ಬಲಿಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚಾಗುವ ಸಾಧ್ಯತೆಗಳಿವೆ.

six dead, tornadoes, through, Southern US,

Articles You Might Like

Share This Article